
ಪುಣೆ(ನ.24): ಇಂಡಿಯನ್ ಸೂಪರ್ ಲೀಗ್ ನ 22 ನೇ ಪಂದ್ಯ ಗೋಲಿಲ್ಲದೆ ಡ್ರಾ ಗೊಂಡಿದೆ. ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಒಡಿಶಾ ಎಫ್ ಸಿ ಹಾಗೂ ಎಟಿಕೆ ನಡುವಿನ ಪಂದ್ಯ ಗೋಲಿಲ್ಲದೇ ಸಮಬಲದಲ್ಲಿ ಕೊನೆಗೊಂಡಿತು. ಈ ಫಲಿತಾಂಶ ಉಭಯ ತಂಡದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ಎಟಿಕೆ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.
ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!
ಗೋಲು ದಾಖಲಾಗಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉತ್ತಮ ಫುಟ್ಬಾಲ್ ಆಟಕ್ಕೆ ಇತ್ತಂಡಗಳು ಸಾಕ್ಷಿಯಾದವು. ಇತ್ತಂಡಗಳಿಗೂ ದ್ವಿತೀಯಾರ್ಧದಲ್ಲಿ ಸಮಬಲದ ಅವಕಾಶ ಸಿಕ್ಕಿತ್ತು. ರಾಯ್ ಕೃಷ್ಣ ಉತ್ತಮ ಅವಕಾಶವನ್ನು ಕೈ ಚೆಲ್ಲಿದರು. ಒಂದು ಉತ್ತಮ ಪಂದ್ಯ ಗೋಳಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC
ಹಾಗೆ ನೋಡಿದರೆ ಒಡಿಶಾ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ಒಂದೆರಡು ಅವಕಾಶ ಸಿಕ್ಕರೂ ಅದು ಗೋಲಾಗಿ ಪರಿವರ್ತನೆ ಆಗಲಿಲ್ಲ. ಮಾಜಿ ಚಾಂಪಿಯನ್ ಎಟಿಕೆಯ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಅರಿಂದಂ ಭಟ್ಟಾಚಾರ್ಯ ಹಾಗೂ ಅರ್ಶದೀಪ್ ಸಿಂಗ್ ಇತ್ತಂಡಗಳ ಸಮಬಲಕ್ಕೆ ಪ್ರಮುಖ ಕಾರಣರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.