ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

By Web DeskFirst Published Nov 23, 2019, 9:58 PM IST
Highlights

ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತವರಿನ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕೇರಳ ತಂಡವನ್ನು ಮಣಿಸಿ, ಗೆಲುವಿನ ಕೇಕೆ ಹಾಕಿದೆ.
 

ಬೆಂಗಳೂರು(ನ.23):  ನಾಯಕ ಸುನಿಲ್ ಛೆಟ್ರಿ  55ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಜಯದ ಲಯವನ್ನು ಮುಂದುವರಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC

ಗೋಲಿಲ್ಲದ ಪ್ರಥಮಾರ್ಧ 
ಪ್ರಥಮಾರ್ಧದಲ್ಲಿ ಗೋಲು ದಾಖಲಾಗಲಿಲ್ಲ, ಆದರೆ ಇತ್ತಂಡಗಳು ಉತ್ತಮ ರೀತಿಯಲ್ಲಿ ಪೈಪೋಟಿ  ನೀಡಿದವು. ಬೆಂಗಳೂರು ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿ ಗೋಲು ಗಳಿಸುವ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾಯಿತು, ಕೇರಳ ಎಫ್ ಸಿ ಉತ್ತಮ ರೀತಿಯಲ್ಲೇ ಸವಾಲನ್ನು ಎದುರಿಸಿತ್ತು. ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿತ್ತು. ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರವಹಿಸಿಲ್ಲ. ಇದರೊಂದಿಗೆ ೪೫ ನಿಮಿಷಗಳ ಪಂದ್ಯ ಗೋಳಿಲ್ಲದೇ ಕೊನೆಗೊಂಡಿತು.

ಮುನ್ನಡೆ ನೀಡಿದ ಸುನಿಲ್ 
ಅನುಭವಿ ಆಟಗಾರ, ನಾಯಕನ ಜವಾಬ್ದಾರಿ ಹೊತ್ತಿರುವ ಸುನಿಲ್ ಛೆಟ್ರಿ 55ನೇ ನಿಮಿಷದಲ್ಲಿ  ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿಕೊಟ್ಟರು. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅದು ಎದುರುಗಡೆ ನಾಯಕ ಛೆಟ್ರಿ ಇರುವಾಗ ಸೋಲಿನ ಮಾತಿಗೆ ಅವಕಾಶ ಇರುವುದಿಲ್ಲ. ದ್ವಿತೀಯಾರ್ಧದಲ್ಲಿ ಬೆಂಗಳೂರು ಎಫ್ ಸಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. 47 ಮತ್ತು 51ನೇ ನಿಮಿಷಗಳಲ್ಲಿ   ಎರಡು ಅವಕಾಶ ಸಿಕ್ಕಿತು. ಆದರೆ ಗೋಲಾಗಲಿಲ್ಲ.  ಬಲಭಾಗದಿಂದ ದಿಮಾಸ್ ಡೆಲ್ಗಡೊ ಕಾರ್ನರ್ ಪಾಸ್ ನೀಡಿದರು. ಚೆಂಡಿನ ಮೇಲೆ ನಿಗಾ ಇರಿಸಿದ ಸುನಿಲ್ ಛೆಟ್ರಿ ಪೆನಾಲ್ಟಿ ವಲಯದ  ಧಾವಿಸಿದರು. ಒಂಟಿಯಾಗಿ ಮುನ್ನುಗ್ಗಿದ ಸುನಿಲ್ ಹೆಡರ್ ಮೂಲಕ ತಂಡಕ್ಕೆ ಜಯಕ್ಕೆ ಅಗತ್ಯ ಇರುವ ಗೋಲು  ಗಳಿಸಿದರು.

ಐಎಸ್ಎಲ್ ಫುಟ್ಬಾಲ್: 

ಇಂಡಿಯನ್ ಸೂಪರ್ ಲೀಗ್ ಟೂರ್ನಿ 2013ರಲ್ಲಿ ಆರಂಭಗೊಂಡಿತು. ಐಪಿಎಲ್ ರೀತಿಯಲ್ಲಿ ಫುಟ್ಬಾಲ್ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಟೂರ್ನಿಯಲ್ಲಿ ಸದ್ಯ  ಬೆಂಗಳೂರು ಎಫ್‌ಸಿ ಹಾಲಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ. 2018ರಲ್ಲಿ ಬೆಂಗಳೂರು ಎಫ್‌ಸಿ ಚಾಂಪಿಯನ್ ಆಗಿತ್ತು. ಗರಿಷ್ಠ ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಕೋಲ್ಕತಾದ ಮೂಲದ ಎಟಿಕೆ ತಂಡ ಪಾತ್ರವಾಗಿದೆ. ಎಟಿಕೆ 2 ಬಾರಿ ಚಾಂಪಿಯನ್ ಆಗಿದೆ. 8 ತಂಡಗಳಿಂದ ಆರಂಭಗೊಂಡ ಟೂರ್ನಿ ಸದ್ಯ 10 ತಂಡಗಳಿಗೆ ವಿಸ್ತಾರಗೊಂಡಿದೆ.

click me!