ISL ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಮತ್ತೆ ಹಿಡಿತ ಸಾಧಿಸಿದೆ. ಹಾಲಿ ಚಾಂಪಿಯನ್ ತಂಡ ಬಿಎಫ್‌ಸಿ ಹಾಗೂ ನಾರ್ತ್ ಈಸ್ಟ್ ನಡುವಿನ ಹೋರಾಟ ರೋಚಕತೆ ಹೆಚ್ಚಿಸಿತು. ಮಹತ್ವದ ಪಂದ್ಯದಲ್ಲಿ ಬೆಂಗಳೂರು ಗೆಲುವಿನ ಲಯಕ್ಕೆ ಮರಳಿತು.
ಗುವಾಹಟಿ(ಡಿ.18): ISL ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಮತ್ತೆ ಅಗ್ರಸ್ಥಾನಕ್ಕೇರಿದೆ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಸೋಲಿನಿಂದ ಹೊರಬಂದಿದೆ. ನಾಯಕ ಸುನಿಲ್ ಛೆಟ್ರಿ 68 ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಹಾಗೂ ಆಲ್ಬರ್ಟ್ ಸರ್ರಾನ್ ಪೊಲೊ (81 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿತು.
ಇದನ್ನೂ ಓದಿ: ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !
undefined
ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ಮನೆಯಂಗಣದಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋಲು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದ ಬೆಂಗಳೂರು ಎಫ್ ಸಿ ಈ ಜಯದೊಂದಿಗೆ ಮತ್ತೆ ಲಯ ಕಂಡುಕೊಂಡು ಚಾಂಪಿಯನ್ ನಡೆ ಇಟ್ಟಿತು. ಮುಂಬೈ ಸಿಟಿ ಎಫ್ ಸಿ ವಿರುದ್ಧವೂ ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದ್ದರು. ಒಂಬತ್ತನೇ ಪಂದ್ಯವನ್ನಾಡಿದ ಬೆಂಗಳೂರು ಒಟ್ಟು 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿತು.
ಇದನ್ನೂ ಓದಿ: ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್, ಗೋವಾಗೆ ಗೆಲುವು
ಮೊದಲಾರ್ಧ ಗೋಲಿಲ್ಲದಿದ್ದರೂ ಸಾಕಷ್ಟು ಆಕ್ರಮಣಕಾರಿಯಾಗಿತ್ತು. ಬೆಂಗಳೂರು ಆರಂಭದಲ್ಲಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರೂ ನಾರ್ತ್ ಈಸ್ಟ್ ಗೋಲು ಗಳಿಕೆಗೆ ಯಾವುದೇ ಅವಕಾಶ ನೀಡಲಿಲ್ಲ. ಇತ್ತಂಡಗಳು ಗೋಲು ಗಳಿಸುವತ್ತ ಹೆಚ್ಚಿನ ಗುರಿ ಹೊಂದಿದ್ದರೂ ಗೋಲ್ ಕೀಪರ್ ಗಳ ಕೈ ಚಳಕ ಉತ್ತಮವಾಗಿತ್ತು. ಬೆಂಗಳೂರು ಪರ ಆಶಿಕ್ ಕುರುನಿಯನ್ ಉತ್ತಮ ಪಾಸನ್ನು ಉದಾಂತ್ ಸಿಂಗ್ ಗೆ ನೀಡಿದರೂ ಮುಕ್ತ ಅವಕಾಶವನ್ನು ಸಿಂಗ್ ಕೈ ಚೆಲ್ಲಿದರು. ದ್ವಿತಿಯಾರ್ಧದಲ್ಲಿನ ಪ್ರದರ್ಶನ ಬೆಂಗಳೂರು ತಂಡಕ್ಕೆ ಗೆಲುವಿನ ಸಿಹಿ ನೀಡಿತು.