ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು FC ಮೊದಲ ಗೆಲುವಿನ ಸಿಹಿ ಕಂಡಿದೆ. ಚಾಂಪಿಯನ್ ಆಟ ಪ್ರದರ್ಶಿಸಿದ ಬೆಂಗಳೂರು ಚೆನ್ನೈ ವಿರುದ್ದ ಭರ್ಜರಿ ಗೆಲುವು ಸಾಧಿಸೋ ಮೂಲಕ ಹಳೇ ಖದರ್‌ಗೆ ವಾಪಾಸ್ಸಾಗಿದೆ.
ಬೆಂಗಳೂರು,(ನ.10): ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಡ್ರಾ ಮೂಲಕ ತೃಪ್ತಿ ಪಟ್ಟುಕೊಂಡಿದ್ದ ಹಾಲಿ ಚಾಂಪಿಯನ್ ಬೆಂಗಳೂರು FC ಗೆಲುವಿನ ಖಾತೆ ತೆರೆದಿದೆ. ತವರಿನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಸಾಂಪ್ರದಾಯಿತ ಎದುರಾಳಿ ಚೆನ್ನೈಯನ್ FC ವಿರುದ್ಧ ಗೆಲುವು ಸಾಧಿಸೋ ಮೂಲಕ ಬೆಂಗಳೂರು ಮೊದಲ ಗೆಲುವು ಸಂಪಾದಿಸಿತು. ನಾಯಕ ಸುನಿಲ್ ಛೆಟ್ರಿ, ಎರಿಕ್ ಪಾರ್ತುಲು ಹಾಗೂ ಸಿಮೊಬಿ ಹಾಕಿಪ್ ಗಳಿಸಿದ ಗೋಲುಗಳ ಮೂಲಕ ಚೆನ್ನೈಯಿನ್ ಎಫ್ ಸಿ ವಿರುದ್ಧ ಬೆಂಗಳೂರು 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಯಶಸ್ಸಿನ ಖಾತೆ ತೆರೆಯಿತು.
ಇದನ್ನೂ ಓದಿ: ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !.
ಬೆಂಗಳೂರಿಗೆ ಮುನ್ನಡೆ
ನಿರೀಕ್ಷೆಯಂತೆ ಬೆಂಗಳೂರು ಎಫ್ ಸಿ ಪ್ರವಾಸಿ ಚೆನ್ನೈಯಿನ್ ವಿರುದ್ಧ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು, ಎರಿಕ್ ಪಾರ್ಥಲು ಹಾಗೂ ಸುನಿಲ್ ಛೆಟ್ರಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. 14ನೇ ನಿಮಿಷದಲ್ಲಿ ಎರಿಕ್ ಪಾರ್ಥಲು ಗಳಿಸಿದ ಗೋಲಿನಿಂದ ಬೆಂಗಳೂರು ಮುನ್ನಡೆ ಕಂಡಿತು. ಪಾರ್ಥಲು ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಆಡಿದ ಮೊದಲ ಪಂದ್ಯದಲ್ಲೇ ಗೋಲು ಗಳಿಸಿ ಶುಭಾರಂಭ ಕಂಡರು.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!
ಬೆಂಗಳೂರಿಗೆ ಈ ಮುನ್ನಡೆ ಅಗತ್ಯವಿತ್ತು. ನಾಯಕ ಛೆಟ್ರಿ ತಮ್ಮ ನೈಜ ಆಟ ಪ್ರದರ್ಶಿಸಲಿಲ್ಲ ಎಂಬ ಕೊರಗು ತಂಡವನ್ನು ಕಾಡಿತ್ತು. ಮೊದಲ ಪಂದ್ಯದಲ್ಲಿ ಗೋಲು ಗಳಿಸಿವಲ್ಲಿ ವಿಫಲವಾಗಿದ್ದರು. ಆದರೆ ಮನೆಯಂಗಣದ ಕೋಟೆಯಲ್ಲಿ ಛೆಟ್ರಿಯನ್ನು ನಿಯಂತ್ರಿಸುವುದು ಕಷ್ಟ. 25ನೇ ನಿಮಿಷದಲ್ಲಿ ರಫಾಯಲ್ ಅಗಸ್ಟೊ ನೀಡಿದ ಪಾಸ್ ಮೂಲಕ ಛೆಟ್ರಿ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು.
ಎರಿಕ್ ಪಾರ್ತಲು (14ನೇ ನಿಮಿಷ), ಸುನಿಲ್ ಛೆಟ್ರಿ (25ನೇ ನಿಮಿಷ) ಹಾಗೂ ಸಿಮೊಬಿ ಹಾಕಿಪ್ (84ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಪ್ರಥಮಾರ್ಧದಲ್ಲಿ ಬೆಂಗಳೂರು ೨-೦ ಅಂತರದಲ್ಲಿ ಮುನ್ನಡೆ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತ್ತು.