
ಕೊಲ್ಕತಾ(ನ.09): ಇಂಡಿಯನ್ ಸೂಪರ್ ಲೀಗ್ ನ 19ನೇ ಪಂದ್ಯದಲ್ಲಿ ಎಟಿಕೆ ಗೆಲುವಿನ ಸಹಿ ಕಂಡಿದೆ. ಜೇಮ್ಶೆಡ್ಪುರ ತಂಡವನ್ನು 3-1 ಗೋಲಿನಿಂದ ಮಣಿಸಿದ ಮಾಜಿ ಚಾಂಪಿಯನ್ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಷ್ಠಾನಕ್ಕೆರಿದೆ. ರಾಯ್ ಕೃಷ್ಣ ( 57 ಮತ್ತು 71 ನಿಮಿಷ) ಹಾಗು ಎಡು ಗಾರ್ಸಿಯಾ ( 90ನೇ ನಿಮಿಷ) ಗೋಲು ಗಳಿಸಿ ತಂದಡಕ್ಕೆ ಜಯ ತಂದುಕೊಟ್ಟರು. ಟಾಟಾ ಪಡೆಯ ಪರ ಸೆರ್ಗಿಯೊ ಕ್ಯಾಸ್ಟಲ್ (ನೇ ನಿಮಿಷ) ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಇದನ್ನೂ ಓದಿ: ತವರಿನಲ್ಲಿ ಬೆಂಗಳೂರು FC ಹೋರಾಟ; ಮೊದಲ ಗೆಲುವಿನ ನಿರೀಕ್ಷೆ!
ಗೋಲಿಲ್ಲದ ಪ್ರಥಮಾರ್ಧ
ಮನೆಯಂಗಣದ ಪ್ರೇಕ್ಷಕರ ನೆರವಿನ ಸಂಪೂರ್ಣ ಲಾಭ ಪಡೆದ ಎಟಿಕೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಫಾರುಖ್ ಚೌಧರಿ ಎಟಿಕೆ ತಂಡಕ್ಕೆ ಹೆಡರ್ ಮೂಲಕ ಅಪಾಯ ತಂದೊಡ್ಡಿದರು. ಆದರೆ ಚೆಂಡು ಕ್ರಾಸ್ ಬಾರ್ ಗೆ ತಗಲಿ ಹೊರ ನಡೆಯಿತು. ಹೊರತಾಗಿ ಜೇಮ್ಶೆಡ್ಪುರ ತಂಡಕ್ಕೆ ಯಾವುದೇ ಅವಕಾಶ ಸಿಗಲಿಲ್ಲ. ಜೇಮ್ಶೆಡ್ಪುರ ಕೂಡ ಎಟಿಕೆಗೆ ಯಾವುದೇ ರೀತಿಯ ಅವಕಾಶಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಎಟಿಕೆ ಫಾರ್ವಾರ್ಡ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು. ಸುಬ್ರತಾ ಪಾಲ್ ಸಾಕಷ್ಟು ಒತ್ತಡಕ್ಕೆ ಸಿಲುಕಿದರೂ ಅಲ್ಲಿ ಗೋಲಿಗೆ ಅವಕಾಶ ಸಿಗಲಿಲ್ಲ.
ಇದನ್ನೂ ಓದಿ:ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !.
ದಿತಿಯಾರ್ಧದಲ್ಲಿ ಎಟಿಕೆ ಅಟ್ಯಾಕ್
ಪ್ರಥಮಾರ್ಧದಂತೆ ದ್ವಿತಯಾರ್ಧದ ಆಟ ನಡೆಯಲಿಲ್ಲ, ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಇದರ ಪರಿಣಾಮ 71ನೇ ನಿಮಿಷದಲ್ಲಿ ರಾಯ್ ಕೃಷ್ಣ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನಿಂದ ಎಟಿಕೆ ಮೇಲುಗೈ ಸಾಧಿಸಿತು. ಸುಬ್ರತಪಾಲ್ ಹಾಗೂ ತಿರಿ ಅವರು ಪ್ರಮಾದ್ ಎಸಗಿದ ಕಾರಣ ಎಟಿಕೆಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ತಂಡದ ಪೆನಾಲ್ಟಿ ತಜ್ಞ ರಾಯ್ ಕೃಷ್ಣ ಯಾವುದೇ ಪ್ರಮಾದ ಎಸಗದೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.