Diego Maradona Watch : ಕಳೆದುಹೋಗಿದ್ದು ದುಬೈನಲ್ಲಿ, ಸಿಕ್ಕಿದ್ದು ಅಸ್ಸಾಂನಲ್ಲಿ!

By Suvarna News  |  First Published Dec 11, 2021, 3:41 PM IST

ಫುಟ್ ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಅವರಿಗೆ ಸೇರಿದ ವಾಚ್
ಲಿಮಿಟೆಡ್ ಎಡಿಷನ್ ನ ಹುಬೋಲ್ಟ್ ಹೆರಿಟೇಜ್ ಲಕ್ಷುರಿ ವಾಚ್ ನ ಮೌಲ್ಯ 20 ಲಕ್ಷ
ಅಸ್ಸಾ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಹೇಳಿಕೆ


ಗುವಾಹಟಿ (ಡಿ.11): ದುಬೈ ಪೊಲೀಸರೊಂದಿಗೆ (Dubai Police) ಕೆಲಸ ಮಾಡಿದ ಅಸ್ಸಾಂ ಪೊಲೀಸ್ (Assam Police), ಫುಟ್ ಬಾಲ್ ದಿಗ್ಗಜ (Football Legend) ದಿವಂಗತ ಡಿಯಾಗೊ ಮರಡೋನಾ (Diego Maradona) ಅವರಿಗೆ ಸೇರಿದ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ಅಸ್ಸಾಂನಲ್ಲಿ(Assam) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ದುಬೈನಲ್ಲಿ(Dubai) ಕಳೆದುಹೋಗಿದ್ದ ಈ ವಾಚ್ (Watch) ಅಸ್ಸಾಂನಲ್ಲಿ ಪತ್ತೆಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ (Himanta Biswa Sarma) ಶನಿವಾರ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಆರೋಪಿ ವಾಜಿದ್ ಹುಸೇನ್ ಅವರನ್ನು ಅಸ್ಸಾಂ ನಲ್ಲಿ ಬಂಧಿಸಲಾಗಿದ್ದು, ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇಂಡಿಯನ್ ಫೆಡರಲ್ ಲಾ ಎನ್ಫೋರ್ಸ್ ಮೆಂಟ್ ಏಜೆನ್ಸಿ ಮೂಲಕ ದುಬೈ ಪೊಲೀಸ್, ಅಸ್ಸಾಂ ಪೊಲೀಸರ ಜೊತೆ ಕೆಲಸ ಮಾಡಿದ್ದು, ಹುಬೋಲ್ಟ್ ಹೆರಿಟೇಜ್ ಲಕ್ಷುರಿ ವಾಚ್ (Hublot Heritage Luxury Watch) ನ ಮೌಲ್ಯ 20 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. 

ಅಂತಾರಾಷ್ಟ್ರೀಯ ಸಹಯೋಗದ ಉದಾಹರಣೆಯ ರೀತಿಯಲ್ಲಿ ಕೆಲಸ ಇದಾಗಿದ್ದು,  ಅಸ್ಸಾಂ ಪೊಲೀಸ್ ರ ಸಹಯೋಗದಲ್ಲಿ ಕೆಲಸ ಮಾಡಿದ ದುಬೈ ಪೊಲೀಸ್, ಅರ್ಜೆಂಟೀನಾದ (Argentina) ಫುಟ್ ಬಾಲ್ ದಿಗ್ಗಜ ಡಿಯಾಗೊ ಮರಡೋನಾಗೆ ಸೇರಿದ ಹುಬೋಲ್ಟ್ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ವಶಕ್ಕೆ ಪಡೆದುಕೊಂಡಿದೆ. ಈ ಕುರಿತಂತೆ ವಾಜಿದ್ ಹುಸೇನ್ ಎನ್ನುವ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಟ್ವಿಟರ್ ನಲ್ಲಿ ಬರೆದಿದ್ದಾರೆ.

ಕೇಂದ್ರ ಏಜೆನ್ಸಿಯಿಂದ ದುಬೈ ಪೊಲೀಸ್ ನೀಡಿದ ಇನ್ ಪುಟ್ ನ ಮಾಹಿತಿ ಪಡೆದ ಅಸ್ಸಾಂ ಪೊಲೀಸ್, ಶನಿವಾರ ಮುಂಜಾನೆ 4ರ ಸುಮಾರಿಗೆ ಆರೋಪಿಯನ್ನು ಶಿವಸಾಗರ್ ಬಳಿ ಇರುವ ಅವರ ಮನೆಯಲ್ಲಿಯೇ ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

In an act of international cooperation has coordinated with through Indian federal LEA to recover a heritage watch belonging to legendary footballer Late Diego Maradona and arrested one Wazid Hussein. Follow up lawful action is being taken. pic.twitter.com/9NWLw6XAKz

— Himanta Biswa Sarma (@himantabiswa)


ಫುಟ್ ಬಾಲ್ ತಾರೆ ಮರಡೋನಾ ಅವರ ಹಸ್ತಾಕ್ಷರಗಳು, ವಿಶೇಷ ವಸ್ತುಗಳನ್ನು ಜತನವಾಗಿ ಕಾಯುತ್ತಿದ್ದ ಕಂಪನಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಾಜಿದ್ ಹುಸೇನ್, ಸ್ವತಃ ಮರಡೋನಾ ಅವರ ಹಸ್ತಾಕ್ಷರವಿದ್ದ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ಕಳ್ಳತನ ಮಾಡಿದ್ದ. ಆ ಬಳಿಕ ಈ ವರ್ಷದ ಆಗಸ್ಟ್‌ ನಲ್ಲಿ ತಂದೆಗೆ ಅನಾರೋಗ್ಯವಾದ ಕಾರಣ ನೀಡಿ ದುಬೈನಿಂದ ಅಸ್ಸಾಂಗೆ ವಾಪಸಾಗಿದ್ದ.

2010ರ ಫಿಫಾ ವಿಶ್ವಕಪ್ ಫುಟ್ ಬಾಲ್ ಟೂರ್ನಿಯ (FIFA World Cup 2010 ) ವೇಳೆ ಹುಬೋಲ್ಟ್ (Hublot )ಕಂಪನಿಯು ಮರಡೋನಾ ಬಿಗ್ ಬ್ಯಾಂಗ್ ಕ್ರೋನೋಗ್ರಾಫ್ ಲಿಮಿಟೆಡ್ ಎಡಿಷನ್ (Maradona Big Bang Chronograph Limited Edition) ವಾಚ್ ಅನ್ನು ಬಿಡುಗಡೆ ಮಾಡಿತ್ತು. ವಿಶ್ವಕಪ್ ಟೂರ್ನಿಯ ವೇಳೆ ಸ್ವತಃ ಮರಡೋನಾ ಎರಡು ಹುಬೋಲ್ಟ್ ಬಿಗ್ ಬ್ಯಾಂಗ್ ವಾಚ್ ಗಳನ್ನು ಧರಿಸಿ ಬಂದಿದ್ದರು.

Diego Maradona: ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ವಿರುದ್ಧ ಅತ್ಯಾಚಾರ ಆರೋಪ
ವಾಚ್ ನ ಹಿಂಬದಿಯಲ್ಲಿ ಮರಡೋನಾ ಗೆಲುವಿನ ಸಂಕೇತವಾಗಿ ಎರಡು ಕೈಗಳನ್ನು ಮೇಲೆತ್ತಿರುವ ಫೋಟೋವನ್ನು ಕೆತ್ತಲಾಗಿದೆ. ಅದರೊಂದಿಗೆ ಮರಡೋನಾ ಅವರ ಹಸ್ತಾಕ್ಷರ ಹಾಗೂ ಜೆರ್ಸಿ ನಂಬರ್ ಗಳು, ಅರ್ಜೆಂಟೀನಾ ರಾಷ್ಟ್ರೀಯ ಧ್ವಜದ ಬಣ್ಣಗಳು ಈ ವಿಶೇಷ ವಾಚ್ ನಲ್ಲಿವೆ.

Lionel Messi Wins Ballon d'Or Award: ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೆಸ್ಸಿ..!
ಈ ಗಡಿಯಾರದಲ್ಲಿ 55 ವಿಶೇಷ ಆಭರಣಗಳಿದ್ದು, 42 ಗಂಟೆಗಳ ಪವರ್ ರಿಸರ್ವ್‌ ಹೊಂದಿದೆ. ಕೇವಲ 250 ಮರಡೋನಾ ಬಿಗ್ ಬ್ಯಾಂಗ್‌ ಕ್ರೋನೋಗ್ರಾಫ್ ಲಿಮಿಟೆಡ್ ಎಡಿಷನ್ ವಾಚ್ ಅನ್ನು 2010ರ ಫಿಫಾ ವಿಶ್ವಕಪ್ ವೇಳೆ ಹುಬೋಲ್ಟ್ ಬಿಡುಗಡೆ ಮಾಡಿತ್ತು. ಟೂರ್ನಿ ಆರಂಭವಾದ ಕೆಲವೇ ದಿನಗಳಲ್ಲಿ ಈ ಎಲ್ಲಾ ವಾಚ್ ಗಳು ಮಾರಾಟವಾಗಿದ್ದವು.

Tap to resize

Latest Videos

 

click me!