ಕೊಚ್ಚಿಯಲ್ಲಿಂದು ಇಂಡಿಯನ್ ಸೂಪರ್ ಲೀಗ್ ಟೂರ್ನಿಗೆ ಚಾಲನೆ
ಉದ್ಘಾಟನಾ ಪಂದ್ಯದಲ್ಲಿ ಕೇರಳ ಬಾಸ್ಟರ್ಸ್- ಈಸ್ಟ್ ಬೆಂಗಾಲ್ ತಂಡಗಳು ಸೆಣಸಾಟ
5 ತಿಂಗಳುಗಳ ಕಾಲ ನಡೆಯಲಿರುವ ಸುದೀರ್ಘ ಫುಟ್ಬಲ್ ಟೂರ್ನಿಗಿಂದು ಚಾಲನೆ
ಕೊಚ್ಚಿ(ಅ.07): 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಪಂದ್ಯಾವಳಿಗೂ ಶುಕ್ರವಾರ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಕಳೆದ ಆವೃತ್ತಿಯ ರನ್ನರ್-ಅಪ್ ಕೇರಳ ಬ್ಲಾಸ್ಟರ್ಸ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಎರಡು ಆವೃತ್ತಿಗಳನ್ನು ಗೋವಾದಲ್ಲಿ ನಡೆಸಿದ್ದ ಆಯೋಜಕರು ಈ ಬಾರಿ ಮೊದಲಿನಂತೆ ತವರು ಹಾಗೂ ತವರಿನಾಚೆ ಮಾದರಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ. ಪ್ರತಿ ತಂಡವು ತನ್ನ ತವರು ನಗರದಲ್ಲಿ ಪಂದ್ಯಗಳನ್ನು ಆಡಲಿದೆ. ಜೊತೆಗೆ ಈ ವರ್ಷ ಪ್ರೇಕ್ಷಕರಿಗೂ ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ.
ಟೂರ್ನಿಯಲ್ಲಿ 11 ತಂಡಗಳು ಸೆಣಸಲಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡವೂ ಉಳಿದ 10 ತಂಡಗಳನ್ನು 2 ಬಾರಿ ಎದುರಿಸಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡವು ತಲಾ 22 ಪಂದ್ಯಗಳನ್ನು ಆಡಲಿದ್ದು ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದ್ದು, ಉಳಿದೆರಡು ಸ್ಥಾನಗಳಿಗೆ 3ರಿಂದ 6ನೇ ಸ್ಥಾನ ಪಡೆದ ತಂಡಗಳು ಪ್ಲೇ-ಆಫ್‌ನಲ್ಲಿ ಸೆಣಸಲಿವೆ.
undefined
ನಾಳೆ ಬಿಎಫ್‌ಸಿಗೆ ಮೊದಲ ಪಂದ್ಯ
ಬೆಂಗಳೂರು ಬುಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಶನಿವಾರ(ಅ.8) ತವರು ಮೈದಾನ ಕಂಠೀರವ ಕ್ರೀಡಾಂಗಣದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಆಡಲಿದೆ. ಬೆಂಗಳೂರು ಎಫ್‌ಸಿ ತಂಡವನ್ನು ಸುನಿಲ್ ಚೆಟ್ರಿ ಮುನ್ನಡೆಸಲಿದ್ದು, ಇತ್ತೀಚೆಗೆ ಡುರಾಂಡ್ ಕಪ್ ಗೆದ್ದ ತಂಡ 2ನೇ ಬಾರಿಗೆ ಐಎಸ್‌ಎಲ್ ಟ್ರೋಫಿ ಎತ್ತಿಹಿಡಿಯವ ಉತ್ಸಾಹದಲ್ಲಿದೆ.
ಫಿಫಾದಿಂದ ಚೆಟ್ರಿ ಫುಟ್ಬಾಲ್ ಬದುಕಿನ ಡಾಕ್ಯುಮೆಂಟ್ರಿ
ನವದೆಹಲಿ: ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ), ಭಾರತ ತಂಡದ ನಾಯಕ ಸುನಿಲ್ ಚೆಟ್ರಿಗೆ ವಿಶೇಷ ಗೌರವ ಸಲ್ಲಿಸಿದೆ. ಚೆಟ್ರಿ ಫುಟ್ಬಾಲ್ ಬದುಕಿನ ಬಗ್ಗೆ ಸಾಕ್ಷ್ಯಚಿತ್ರ(ಡಾಕ್ಯುಮೆಂಟ್ರಿ) ಒಂದನ್ನು ಸಿದ್ಧಪಡಿಸಿದೆ.
Pro Kabaddi League: ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಕಲರವ..!
‘ಕ್ಯಾಪ್ಟನ್ ಫೆಂಟಾಸ್ಟಿಕ್’ ಹೆಸರಿನ, 3 ಕಂತುಗಳ ಡಾಕ್ಯುಮೆಂಟ್ರಿಯನ್ನು ಫಿಫಾ ತನ್ನ ಆನ್‌ಲೈನ್ ವೇದಿಕೆ ಫಿಫಾ+ನಲ್ಲಿ ಬಿಡುಗಡೆ ಮಾಡಿದೆ. 38 ವರ್ಷದ ಚೆಟ್ರಿ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ 117 ಗೋಲು, ಲಿಯೋನೆಲ್ ಮೆಸ್ಸಿ 90 ಗೋಲು ಗಳಿಸಿದ್ದಾರೆ. ಚೆಟ್ರಿ 84 ಗೋಲು ಬಾರಿಸಿದ್ದಾರೆ.
ಟಿಟಿ ವಿಶ್ವಕಪ್: ಭಾರತ ಪುರುಷರ ತಂಡ ಹೊರಕ್ಕೆ
ಚೆಂಗ್ಡು: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಗುರುವಾರ ನಡೆದ ಪುರುಷರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಆತಿಥೇಯ ಚೀನಾ ವಿರುದ್ಧ 0-3 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಮೊದಲ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಫಾನ್ ಝೆನ್‌ಡಾಂಗ್ ಕೇವಲ 15 ನಿಮಿಷಗಳಲ್ಲಿ ಹರ್ಮೀತ್ ದೇಸಾಯಿ ವಿರುದ್ಧ 11-2, 11-9, 11-5ರಲ್ಲಿ ಗೆದ್ದರು.
2ನೇ ಪಂದ್ಯದಲ್ಲಿ ವಿಶ್ವ ನಂ.37 ಜಿ.ಸತ್ಯನ್, ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಬಾರಿ ಪದಕ ಜಯಿಸಿರುವ ದಿಗ್ಗಜ ಆಟಗಾರ ಮಾ ಲಾಂಗ್ ವಿರುದ್ಧ 12-14, 5-11, 0-11ರಲ್ಲಿ ಪರಾಭವಗೊಂಡರು. 3ನೇ ಸಿಂಗಲ್ಸ್‌ನಲ್ಲಿ ವಿಶ್ವ ನಂ.11 ವಾಂಗ್ ಚೂಕ್ವಿನ್ ವಿರುದ್ಧ ಮನುಷ್ ಶಾ 4-11, 5-11, 6-11ರಲ್ಲಿ ಸೋಲುಂಡರು. ಭಾರತ ಮಹಿಳಾ ತಂಡ ಸಹ ಪ್ರಿ ಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದಿತ್ತು.