ISL 2021-22: ಇಂದಿನಿಂದ 8ನೇ ಆವೃತ್ತಿ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ಆರಂಭ

By Suvarna News  |  First Published Nov 19, 2021, 2:45 PM IST

* ಇಂದಿನಿಂದ 8ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿ ಆರಂಭ

* ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್‌ ಬಗಾನ್‌-ಕೇರಳ ಬ್ಲಾಸ್ಟರ್ ಮುಖಾಮುಖಿ

* ಬೆಂಗಳೂರು ಎಫ್‌ಸಿ ತಂಡವು ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ವೆಸ್ಟರ್ನ್‌ ಎಫ್‌ಸಿ ಸೆಣಸಾಟ


ಮಾರ್ಗೋ(ನ.19): 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) ಫುಟ್ಬಾಲ್‌ ಟೂರ್ನಿಗೆ ಶುಕ್ರವಾರ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್‌ ಎಟಿಕೆ ಮೋಹನ್‌ ಬಗಾನ್‌ (ATK Mohun Bagan) ತಂಡ ಕೇರಳ ಬ್ಲಾಸ್ಟ​ರ್ಸ್‌ (Kerala Blasters) ವಿರುದ್ಧ ಆಡಲಿದೆ. 2018-19ರ ಆವೃತ್ತಿಯ ಚಾಂಪಿಯನ್‌ ಬೆಂಗಳೂರು ಎಫ್‌ಸಿ (Bengaluru FC) ತಂಡ ನಾರ್ತ್‌ಈಸ್ಟ್‌ ವೆಸ್ಟರ್ನ್‌ ಎಫ್‌ಸಿ (Northeast United FC) ವಿರುದ್ಧ ನವೆಂಬರ್ 20ರಂದು ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಈ ಆವೃತ್ತಿಯ ಐಎಸ್‌ಎಲ್‌ (ISL) ಮೊದಲ ಭಾಗ ಜನವರಿ 9ರವರೆಗೆ ಗೋವಾದ ಮಾರ್ಗೋ, ವಾಸ್ಕೋ ಹಾಗೂ ಬಾಂಬೊಲಿನ್‌ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಈ ಬಾರಿ ತಂಡಗಳ ಆಡುವ 11ರ ಬಳಗದಲ್ಲಿ ಬದಲಾವಣೆ ಆಗಲಿದ್ದು, 2014ರ ಬಳಿಕ ಮೊದಲ ಬಾರಿ ಕನಿಷ್ಠ 7 ಭಾರತೀಯ ಹಾಗೂ ಗರಿಷ್ಠ ನಾಲ್ಕು ವಿದೇಶಿ ಆಟಗಾರರು ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2014ರಿಂದ ಹಿಂದಿನ ಆವೃತ್ತಿ ವರೆಗೂ ಆಡುವ ಹನ್ನೊಂದರಲ್ಲಿ ಆರು ವಿದೇಶಿ ಹಾಗೂ ಐವರು ಭಾರತೀಯ ಆಟಗಾರರು ಆಡುತ್ತಿದ್ದರು.

Tap to resize

Latest Videos

undefined

ಇನ್ನು ಕೋವಿಡ್‌ 19 (COVID 19) ಭೀತಿಯಿಂದಾಗಿ ಕಳೆದ ಆವೃತ್ತಿಯಂತೆಯೇ ಈ ಬಾರಿಯ ಐಎಸ್‌ಎಲ್ ಟೂರ್ನಿಯ ಪಂದ್ಯಾವಳಿಗಳು ಸಹ ಖಾಲಿ ಸ್ಟೇಡಿಯಂನಲ್ಲಿಯೇ ನಡೆಯಲಿವೆ. ಈಗಾಗಲೇ ಮೊದಲ 55 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಆಯೋಜಕರು ಕೆಲವು ದಿನಗಳ ಬಳಿಕ ಪ್ರಕಟಿಸಲಿದ್ದಾರೆ.

ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!

8ನೇ ಆವೃತ್ತಿಯ ಐಎಸ್‌ಎಲ್‌ ಲೀಗ್‌ನಲ್ಲಿ ಭಾಗವಹಿಸುತ್ತಿರುವ ತಂಡಗಳೆಂದರೆ: ಎಟಿಕೆ ಮೋಹನ್ ಬಗಾನ್, ಎಫ್‌ಸಿ ಗೋವಾ, ಚೆನ್ನೈಯಿನ್ ಎಫ್‌ಸಿ, ಬೆಂಗಳೂರು ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ (Mumbai City FC), ಕೇರಳ ಬ್ಲಾಸ್ಟರ್ಸ್‌, ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ, ಒಡಿಶಾ ಎಫ್‌ಸಿ, ಹೈದ್ರಾಬಾದ್ ಎಫ್‌ಸಿ, ಜೆಮ್ಶಡ್‌ಪುರ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ಹೀಗಾಗಿ 11 ಫುಟ್ಬಾಲ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

Badminton Legend ಪ್ರಕಾಶ್‌ ಪಡುಕೋಣೆಗೆ ವಿಶ್ವ ಬ್ಯಾಡ್ಮಿಂಟನ್‌ ಜೀವಮಾನ ಸಾಧನೆ ಪ್ರಶಸ್ತಿ

ಇದುವರೆಗೂ ಚಾಂಪಿಯನ್ ಆಗಿರುವ ತಂಡಗಳು: ಇದುವರೆಗೂ ಇಂಡಿಯನ್‌ ಸೂಪರ್ ಲೀಗ್ ಟೂರ್ನಿಯಲ್ಲಿ 7 ಯಶಸ್ವಿ ಆವೃತ್ತಿಗಳು ಮುಕ್ತಾಯವಾಗಿದ್ದು, ಕೋಲ್ಕತ ತಂಡವು 3 ಬಾರಿ ಚಾಂಪಿಯನ್ ಆಗಿದ್ದರೆ ಚೆನ್ನೈ ತಂಡವು ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು, ಬೆಂಗಳೂರು ಹಾಗೂ ಮುಂಬೈ ತಂಡಗಳು ಒಮ್ಮೆ ಐಎಸ್‌ಎಲ್ ಟ್ರೋಫಿಗೆ ಮುತ್ತಿಕ್ಕಿವೆ.

ಫುಟ್ಬಾಲ್‌ ಕಾಮೆಂಟೇಟರ್‌ ನೋವಿ ಕಪಾಡಿಯಾ ನಿಧನ

ನವದೆಹಲಿ: 9 ಫಿಫಾ ಫುಟ್ಬಾಲ್‌ ವಿಶ್ವಕಪ್‌ಗಳ ವರದಿಗಾರಿಕೆ ಮಾಡಿದ್ದ, ಹಿರಿಯ ಫುಟ್ಬಾಲ್‌ ವೀಕ್ಷಕ ವಿವರಣೆಗಾರ ನೋವಿ ಕಪಾಡಿಯಾ ಗುರುವಾರ ದೀರ್ಘಕಾಲದ ಅನಾರೋಗ್ಯದ ಕಾರಣ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. 

ಡುರಾಂಡ್‌ ಕಪ್‌: ಚೊಚ್ಚಲ ಬಾರಿಗೆ ಎಫ್‌ಸಿ ಗೋವಾ ಚಾಂಪಿಯನ್‌

ಕಳೆದೊಂದು ತಿಂಗಳಿನಿಂದ ಅವರು ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿದ್ದರು. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಫುಟ್ಬಾಲ್‌ ಮಾತ್ರವಲ್ಲ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಇತರೆ ಬಹು ಕ್ರೀಡಾ ಕೂಟಗಳಲ್ಲೂ ವೀಕ್ಷಕ ವಿವರಣೆಗಾರರಾಗಿ ಕಾರ‍್ಯನಿರ್ವಹಿಸಿದ್ದರು. ಅವರ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಸಂತಾಪ ಸೂಚಿಸಿದೆ.

click me!