'ಸಾಕಷ್ಟು ಬೆಂಬಲವಿಲ್ಲದೇ ಕೋಚ್ ಆಗಿ ಮುಂದುವರಿಯುವುದು ಅಸಾಧ್ಯವಾಗಿತ್ತು. ನಾನು ಸುಳ್ಳುಗಳಿಂದ ಬೇಸತ್ತಿದ್ದೇನೆ. ತಮ್ಮ ಹಿತಾಸಕ್ತಿ ಮಾತ್ರ ನೋಡುವ ಜನರೇ ಎಐಎಫ್ ಎಫ್‌ನಲ್ಲಿದ್ದಾರೆ. ಕಲ್ಯಾಣ್ ಚೌಬೆ ಅಧ್ಯಕ್ಷ ಸ್ಥಾನ ತೊರೆದರೆ ಭಾರತದ ಫುಟ್ಬಾಲ್ ಉನ್ನತಿಗೇರಲಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಉಚ್ಚಾಟನೆಗೊಂಡಿರುವ ಇಗೊರ್ ಸ್ಟಿಮಾಕ್, ಮತ್ತೊಮ್ಮೆ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ವಿರುದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ಆದರೆ ಫುಟ್ಬಾಲ್ ಬೆಳೆಯದ ಏಕೈಕ ದೇಶ ಭಾರತ ಎಂದು ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಸಾಕಷ್ಟು ಬೆಂಬಲವಿಲ್ಲದೇ ಕೋಚ್ ಆಗಿ ಮುಂದುವರಿಯುವುದು ಅಸಾಧ್ಯವಾಗಿತ್ತು. ನಾನು ಸುಳ್ಳುಗಳಿಂದ ಬೇಸತ್ತಿದ್ದೇನೆ. ತಮ್ಮ ಹಿತಾಸಕ್ತಿ ಮಾತ್ರ ನೋಡುವ ಜನರೇ ಎಐಎಫ್ ಎಫ್‌ನಲ್ಲಿದ್ದಾರೆ. ಕಲ್ಯಾಣ್ ಚೌಬೆ ಅಧ್ಯಕ್ಷ ಸ್ಥಾನ ತೊರೆದರೆ ಭಾರತದ ಫುಟ್ಬಾಲ್ ಉನ್ನತಿಗೇರಲಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
undefined
ಫಿಫಾ ರ್‍ಯಾಂಕಿಂಗ್: 124ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ 124ನೇ ಸ್ಥಾನಕ್ಕೆ ಕುಸಿದಿದೆ. ಇದು 2017ರ ಬಳಿಕ ಅತ್ಯಂತ ಕಳಪೆ ಸಾಧನೆ. ಆಗ ಭಾರತ 132ನೇ ಸ್ಥಾನದಲ್ಲಿತ್ತು. ಆ ಬಳಿಕ ಉತ್ತಮ ಪ್ರದರ್ಶನ ತೋರಿದ್ದ ತಂಡ ಕಳೆದ ವರ್ಷ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಆದರೆ ಡಿಸೆಂಬರ್ ಬಳಿಕ ರ್‍ಯಾಂಕಿಂಗ್‌ನಲ್ಲಿ ಕುಸಿಯುತ್ತಲೇ ಬಂದಿದೆ. ಈ ಬಾರಿ ನೂತನ ಪಟ್ಟಿಯಲ್ಲಿ 3 ಸ್ಥಾನ ಕಳೆದುಕೊಂಡಿದ್ದು, ಏಷ್ಯಾದ ತಂಡಗಳ ಪೈಕಿ ಸದ್ಯ 22ನೇ ಸ್ಥಾನದಲ್ಲಿದೆ.
2036ರ ವರೆಗೂ ಭಾರತ ಹಾಕಿಗೆ ತಂಡಕ್ಕೆ ಒಡಿಶಾ ಸರ್ಕಾರ ಪ್ರಾಯೋಜಕತ್ವ
ಭುವನೇಶ್ವರ್: ಭಾರತ ಹಾಕಿ ತಂಡಗಳಿಗೆ ಒಡಿಶಾ ಸರ್ಕಾರ ನೀಡುತ್ತಿರುವ ಪ್ರಾಯೋಜಕತ್ವ 2036ರ ವರೆಗೂ ಮುಂದುವರಿಯಲಿದೆ. ಪ್ರಾಯೋಜಕತ್ವವನ್ನು ಇನ್ನೂ 12 ವರ್ಷಗಳ ಕಾಲ ಮುಂದುವರಿಸುವುದಾಗಿ ಶುಕ್ರವಾರ ಒಡಿಶಾ ಸರ್ಕಾರ ಘೋಷಿಸಿದೆ. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಜಿ ಸೇರಿದಂತೆ ಪ್ರಮುಖರು ಸಭೆ ನಡೆಸಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.
T20 World Cup 2024: ಇಂದು ಭಾರತ vs ಬಾಂಗ್ಲಾ ಸೂಪರ್-8 ಕದನ
2036ರ ಒಲಿಂಪಿಕ್ಸ್‌ನಲ್ಲಿ ಯೋಗ, ಖೋಖೋ, ಸೇರಿಸಲು ಭಾರತ ಪ್ಲಾನ್!
ನವದೆಹಲಿ: 2036ರ ಒಲಿಂಪಿಕ್ಸ್ ಆತಿಥ್ಯ ಪಡೆಯಲು ಭಾರಿ ಪ್ರಯತ್ನ ನಡೆಸುತ್ತಿರುವ ಭಾರತ, ಆತಿಥ್ಯ ಹಕ್ಕು ಲಭಿಸಿದರೆ ಕ್ರೀಡಾಕೂಟದಲ್ಲಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಅಧಿಕಾರಿಗಳು ವರದಿ ಸಿದ್ಧಪಡಿಸಿ, ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಸಲ್ಲಿಸಿದ್ದಾರೆ.
ವರದಿಯಲ್ಲಿ ಯೋಗ, ಖೋ-ಖೋ, ಕಬಡ್ಡಿ, ಚೆಸ್, ಟಿ20 ಕ್ರಿಕೆಟ್ ಹಾಗೂ ಸ್ಕ್ಯಾಶ್ ಸೇರ್ಪಡೆ ಬಗ್ಗೆ ಉಲ್ಲೇಖಿಸಲಾಗಿದೆ. 2036ರ ಒಲಿಂಪಿಕ್ಸ್ ಆತಿಥ್ಯ ರಾಷ್ಟ್ರವನ್ನು ಮುಂದಿನ ವರ್ಷ ಘೋಷಿಸುವ ಸಾಧ್ಯತೆಯಿದೆ. ಒಂದು ವೇಳೆ ಭಾರತಕ್ಕೆ ಆತಿಥ್ಯ ಹಕ್ಕು ಲಭಿಸಿದರೆ, ಪ್ರಸ್ತಾವಿತ 6 ಕ್ರೀಡೆಗಳನ್ನು 2032ರ ಬ್ರಿಸ್ಟೇನ್ ಗೇಮ್ಸ್‌ನಲ್ಲಿ ಪ್ರದರ್ಶನ ಕಾರ್ಯಕ್ರಮಗಳಾಗಿ ಪರಿಚಯಿಸಬೇಕಾಗುತ್ತದೆ.