ಲಿಯೋನೆಲ್ ಮೆಸ್ಸಿ, ಮೇಜರ್ ಲೀಗ್ ಸಾಕರ್ ಜತೆಗೆ 2025ರ ಕೊನೆಯವರೆಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದ ಮುಗಿಯುತ್ತಿದ್ದಂತೆಯೇ ಮೆಸ್ಸಿ ತಮ್ಮ ವರ್ಣರಂಜಿತ ಫುಟ್ಬಾಲ್ ಬದುಕಿಗೆ ತೆರೆ ಎಳೆಯುವ ಸಾಧ್ಯತೆಯ ಬಗ್ಗೆ ತುಟಿಬಿಚ್ಚಿದ್ದಾರೆ.
ಬೆಂಗಳೂರು: ಫುಟ್ಬಾಲ್ ದಂತಕಥೆ, ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಲಿಯೋನೆಲ್ ಮೆಸ್ಸಿ ನಿವೃತ್ತಿಯ ಹೊಸ್ತಿಲಲ್ಲಿದ್ದು, ತಾವು ಇಂಟರ್ ಮಿಯಾಮಿ ತಂಡದ ಜತೆಗಿರುವಾಗಲೇ ನಿವೃತ್ತಿಯಾಗುವ ಸುಳಿವು ಬಿಚ್ಚಿಟ್ಟಿದ್ದಾರೆ. ESPN ಅರ್ಜೆಂಟೀನಾ ಜತೆಗಿನ ಎಕ್ಸ್‌ಕ್ಲೂಸಿವ್ ಸಂದರ್ಶನದ ವೇಳೆಯಲ್ಲಿ ಮೆಸ್ಸಿ, ತಮ್ಮ ನಿವೃತ್ತಿಯ ಕುರಿತಾಗಿ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಲಿಯೋನೆಲ್ ಮೆಸ್ಸಿ, ಮೇಜರ್ ಲೀಗ್ ಸಾಕರ್ ಜತೆಗೆ 2025ರ ಕೊನೆಯವರೆಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದ ಮುಗಿಯುತ್ತಿದ್ದಂತೆಯೇ ಮೆಸ್ಸಿ ತಮ್ಮ ವರ್ಣರಂಜಿತ ಫುಟ್ಬಾಲ್ ಬದುಕಿಗೆ ತೆರೆ ಎಳೆಯುವ ಸಾಧ್ಯತೆಯ ಬಗ್ಗೆ ತುಟಿಬಿಚ್ಚಿದ್ದಾರೆ. ಮುಂಬರುವ ಜೂನ್ 24ರಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಮೆಸ್ಸಿ, "ಸದ್ಯದ ಮಟ್ಟಿಗೆ, ನನ್ನ ಪಾಲಿಗೆ ನಾನಾಡುತ್ತಿರುವ ಕೊನೆಯ ಕ್ಲಬ್ ಇದಾಗಿರಲಿದೆ" ಎಂದು ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.
Enjoy Lionel Messi while you still can 😢 pic.twitter.com/2OXdlvL9Je
— GOAL (@goal)undefined
ದಾಖಲೆಯ 8 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ಜಯಿಸಿರುವ ಮೆಸ್ಸಿ, ಬಾರ್ಸಿಲೋನಾ ಕ್ಲಬ್ ಪರ 4 ಬಾರಿ ಚಾಂಪಿಯನ್ಸ್ ಲೀಗ್ ಹಾಗೂ 10 ಬಾರಿ ಲಾ ಲಿಗಾ ಪ್ರಶಸ್ತಿ ಜಯಿಸಿದ್ದಾರೆ. ಇನ್ನು ಲಿಯೋನೆಲ್ ಮೆಸ್ಸಿ ನೇತೃತ್ವದಲ್ಲೇ ಅರ್ಜೆಂಟೀನಾ ತಂಡವು 2021ರಲ್ಲಿ ಕೋಪಾ ಅಮೆರಿಕಾ ಹಾಗೂ 2022ರ ಕತಾರ್ ಫಿಫಾ ವಿಶ್ವಕಪ್ ಜಯಿಸಿತ್ತು. ಇದೀಗ ಇದೇ ತಿಂಗಳಿನಲ್ಲಿ ಅರ್ಜೆಂಟೀನಾ ತಂಡವು ಯುಎಸ್‌ಎನಲ್ಲಿ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ.
T20 World Cup 2024 ಅಮೆರಿಕ ಮಣಿಸಿದ ಭಾರತ ಭರ್ಜರಿಯಾಗಿ ಸೂಪರ್ 8 ಹಂತಕ್ಕೆ ಲಗ್ಗೆ..!
2004ರಿಂದ 2021ರ ವರೆಗೂ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪ್ರತಿನಿಧಿಸಿದ್ದ ಲಿಯೋನೆಲ್ ಮೆಸ್ಸಿ, 2021ರಿಂದ 2023ರ ವರೆಗೆ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡದ ತೆಕ್ಕೆಗೆ ಜಾರಿದ್ದರು. ಇದಾದ ಬಳಿಕ ಕಳೆದ ವರ್ಷ ಇಂಟರ್ ಮಿಯಾಮಿ ಕ್ಲಬ್ ಸೇರ್ಪಡೆಗೊಂಡಿದ್ದ ಮೆಸ್ಸಿ, ತಮ್ಮ ತಂಡವು ಲೀಗ್ಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.