ಫಿಫಾ ಕ್ವಾಲಿಫೈಯರ್: ಇಂದು ಭಾರತ vs ಕತಾರ್ ಫೈಟ್

By Kannadaprabha News  |  First Published Nov 21, 2023, 12:25 PM IST

102ನೇ ಸ್ಥಾನದಲ್ಲಿರುವ ಭಾರತಕ್ಕೆ ಕತಾರ್‌ನಿಂದ ಕಠಿಣ ಸವಾಲು ಎದುರಾಗುವುದು ಖಚಿತ. ಭಾರತ ಈ ಮೊದಲು 2019ರಲ್ಲಿ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಕತಾರ್ ವಿರುದ್ಧ 1-1 ಡ್ರಾ ಸಾಧಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಮಂಗಳವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಕತಾರ್‌ಗೆ ಆಘಾತ ನೀಡುವ ನಿರೀಕ್ಷೆಯಲ್ಲಿದೆ.


ಭುವನೇಶ್ವರ(ನ.21): ಕುವೈತ್ ವಿರುದ್ಧ 1-0 ಗೋಲಿನ ಜಯದೊಂದಿಗೆ 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿರುವ ಭಾರತ, ಮಂಗಳವಾರ ‘ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಸೆಣಸಾಡಲಿದೆ. ಫಿಫಾ ರ್ಯಾಂಕಿಂಗ್‌ನಲ್ಲಿ 61ನೇ ಸ್ಥಾನದಲ್ಲಿರುವ ಕತಾರ್ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 8-1ರಿಂದ ಮಣಿಸಿದೆ.

ಹೀಗಾಗಿ 102ನೇ ಸ್ಥಾನದಲ್ಲಿರುವ ಭಾರತಕ್ಕೆ ಕತಾರ್‌ನಿಂದ ಕಠಿಣ ಸವಾಲು ಎದುರಾಗುವುದು ಖಚಿತ. ಭಾರತ ಈ ಮೊದಲು 2019ರಲ್ಲಿ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಕತಾರ್ ವಿರುದ್ಧ 1-1 ಡ್ರಾ ಸಾಧಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಮಂಗಳವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಕತಾರ್‌ಗೆ ಆಘಾತ ನೀಡುವ ನಿರೀಕ್ಷೆಯಲ್ಲಿದೆ.

Tap to resize

Latest Videos

undefined

ಪಂದ್ಯ: ಸಂಜೆ 7 ಗಂಟೆಗೆ,
ನೇರ ಪ್ರಸಾರ: ಜಿಯೋ ಸಿನಿಮಾ

3ನೇ ಬಾರಿ ವಿಶ್ವದ ಶ್ರೇಷ್ಠ ಗೋಲಿ ರೇಸ್‌ನಲ್ಲಿ ಸವಿತಾ

ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಸತತ 3ನೇ ಬಾರಿ ವಿಶ್ವದ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2021 ಹಾಗೂ 2022ರಲ್ಲಿ ಎಫ್‌ಐಎಚ್‌ನ ಪ್ರಶಸ್ತಿಗೆ ಭಾಜನರಾಗಿರುವ ಪೂನಿಯಾ, ಈ ಬಾರಿಯೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ರೋಜರ್ ಫೆಡರರ್ ಹಿಂದಿಕ್ಕಿ ದಾಖಲೆಯ 7ನೇ ಎಟಿಪಿ ಫೈನಲ್ಸ್‌ ಗೆದ್ದ ಜೋಕೋವಿಚ್

ಸವಿತಾ ಇತ್ತೀಚೆಗೆ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಭಾರತವನ್ನುಚಾಂಪಿಯನ್‌ ಪಟ್ಟಕ್ಕೇರಿಸಿದ್ದು, ಏಷ್ಯನ್‌ ಗೇಮ್ಸ್‌ನಲ್ಲಿ ಅವರದೇ ನಾಯಕತ್ವದಲ್ಲಿ ಕಂಚಿನ ಪದಕ ಗೆದ್ದಿತ್ತು. ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಉಪನಾಯಕ ಹಾರ್ದಿಕ್‌ ಸಿಂಗ್‌ ಎಫ್‌ಐಎಚ್‌ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಹಾಕಿ: ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ

ಚೆನ್ನೈ: 13ನೇ ಆವೃತ್ತಿಯ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಜಯದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾನುವಾರ ದಾದರ್ ಮತ್ತು ನಗರ್ ಹವೇಲಿ ವಿರುದ್ಧ 5-0 ಗೋಲಿನಿಂದ ಗೆದ್ದಿದ್ದ ರಾಜ್ಯ ತಂಡ ಸೋಮವಾರ ಬಿಹಾರವನ್ನು ಬರೋಬ್ಬರಿ 12-1ರಿಂದ ಬಗ್ಗು ಬಡಿಯಿತು. ರಾಹೀಲ್, ಆಭರಣ್, ಚೇತನ್, ಹರೀಶ್ ತಲಾ 2, ಶೇಷೇಗೌಡ, ಲಿಖಿತ್, ಭರತ್, ಸೋಮಯ್ಯ ತಲಾ 1 ಗೋಲು ಬಾರಿಸಿದರು.

ಫೈನಲ್ ಸೋಲಿನ ನೋವಿನಿಂದ ಹೊರಬರಲು ರಜೆ ಕೇಳಿದ ವಿದ್ಯಾರ್ಥಿ, ಇ-ಮೇಲ್ ವೈರಲ್!

ಕರ್ನಾಟಕ 6 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರ ಸ್ಥಾನಿಯಾಯಿತು. ನ.15ರಂದು ಕ್ವಾರ್ಟರ್ ಫೈನಲ್ ನಡೆಯಲಿದ್ದು, ರಾಜ್ಯದ ಎದುರಾಳಿ ಯಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ಶೂಟಿಂಗ್: ವಿಶ್ವಕಪ್ ಫೈನಲ್‌ ಇಂದಿನಿಂದ

ದೋಹಾ: ಈ ಋತುವಿನ ಕೊನೆ ಐಎಸ್ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ ಮಂಗಳವಾರದಿಂದ ದೋಹಾದಲ್ಲಿ ಆರಂಭಗೊಳ್ಳಲಿದ್ದು, ಸರಭ್‌ಜೋತ್ ಸಿಂಗ್, ಈಶಾ ಸಿಂಗ್ ಹಾಗೂ ಕರ್ನಾಟಕದ ದಿವ್ಯಾ ಟಿ.ಎಸ್. ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಈ ಬಾರಿ ಭಾರತದಿಂದ ಒಟ್ಟು 12 ಮಂದಿ ಕೂಟದಲ್ಲಿ ಕಣಕ್ಕಿಳಿಯಲಿದ್ದು, ರೈಫಲ್, ಪಿಸ್ತೂಲ್, ಶಾಟ್‌ಗನ್‌ನ ಒಟ್ಟು 12 ವಿಭಾಗಗಳಲ್ಲಿ ವರ್ಷದ ಶ್ರೇಷ್ಠ ಶೂಟರ್ ಗೌರವಕ್ಕೆ ಪಾತ್ರರಾಗಲು ಕಾಯುತ್ತಿದ್ದಾರೆ. ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ ಟೂರ್ನಿಯು 4 ವರ್ಷಗಳ ಬಳಿಕ ನಡೆಯುತ್ತಿದ್ದು, 2019ರ ಬಳಿಕ ಕೋವಿಡ್ ಮಹಾಮಾರಿಯಿಂದಾಗಿ ಕೂಟ ನಡೆದಿರಲಿಲ್ಲ.
 

click me!