ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿನ ಚೆಂಡು ₹32 ಕೋಟಿಗೆ ಹರಾಜು; ಖರೀದಿದಾರ ಯಾರು?

Kannadaprabha News   | Kannada Prabha
Published : Aug 25, 2026, 10:21 AM IST
Diego Maradona

ಸಾರಾಂಶ

ಫುಟ್ಬಾಲ್‌ ದಂತಕಥೆ ಡಿಗೋ ಮರಡೋನಾ ಅವರ 'ಹ್ಯಾಂಡ್‌ ಆಫ್‌ ಗಾಡ್‌' ಗೋಲಿಗೆ ಬಳಸಿದ್ದ ಚೆಂಡು ಬರೋಬ್ಬರಿ 32 ಕೋಟಿ ರೂಪಾಯಿಗೆ ಹರಾಜಾಗಿದೆ. 1986ರ ಫಿಫಾ ವಿಶ್ವಕಪ್‌ನ ಈ ವಿವಾದಾತ್ಮಕ ಚೆಂಡು, ಪಂದ್ಯದ ರೆಫ್ರಿ ಅಲಿ ಬಿನ್‌ ನಾಸ್ಸೆರ್‌ ಬಳಿ 36 ವರ್ಷಗಳ ಕಾಲ ಇತ್ತು. ಈ ಹಿಂದೆ ಮರಡೋನಾ ಅವರ ಜೆರ್ಸಿ ಕೂಡ ದಾಖಲೆ ಬೆಲೆಗೆ ಮಾರಾಟವಾಗಿತ್ತು.

ಡಲ್ಲಾಸ್: ಫುಟ್ಬಾಲ್‌ ದಂತಕಥೆ, ಅರ್ಜೆಂಟೀನಾದ ಡಿಗೋ ಮರಡೋನಾ ಅವರ ಕುಖ್ಯಾತ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿಗೆ ಬಳಕೆಯಾಗಿದ್ದ ಚೆಂಡು, ಬರೋಬ್ಬರಿ 3.35 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 32 ಕೋಟಿ ರು.)ಗೆ ಹರಾಜಾಗಿದೆ. ಖರೀದಿ ಮಾಡಿದವರ ಹೆಸರನ್ನು ಸಂಸ್ಥೆಯು, ಭದ್ರತಾ ಕಾರಣಗಳಿಂದಾಗಿ ಬಹಿರಂಗಪಡಿಸಿಲ್ಲ.

ಇತ್ತೀಚೆಗೆ ಹರಾಜು ಪ್ರಕ್ರಿಯೆ ನಡೆಸಿದ್ದ ಅಮೆರಿಕದ ಡಲ್ಲಾಸ್‌ ಮೂಲದ ಹೆರಿಟೇಜ್‌ ಸಂಸ್ಥೆ, ಚೆಂಡು ಕನಿಷ್ಠ 10 ಮಿಲಿಯನ್‌ ಡಾಲರ್‌ಗೆ ಬಿಕರಿಯಾಗಬಹುದು ಎಂದು ನಿರೀಕ್ಷಿಸಿತ್ತು. ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಆದರೆ, ಸಂಸ್ಥೆ ನಿರೀಕ್ಷೆ ಮಾಡಿದ್ದ ಅರ್ಧ ಮೊತ್ತವೂ ದೊರೆಯದೆ ಇರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.

1986ರ ಫಿಫಾ ವಿಶ್ವಕಪ್‌ನಲ್ಲಿ ಈ ವಿವಾದಾತ್ಮಕ ಗೋಲು

1986ರ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಮರಡೋನಾ, ತಮ್ಮ ಎಡಗೈ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳಿದ್ದರು. ಈ ಘಟನೆಯನ್ನು ಟ್ಯುನೀಶಿಯಾದ ರೆಫ್ರಿ ಅಲಿ ಬಿನ್‌ ನಾಸ್ಸೆರ್‌ ಗಮನಿಸಿರಲಿಲ್ಲ. ಹೀಗಾಗಿ ಅವರು ಗೋಲು ನೀಡಿದ್ದರು. ಈ ವಿವಾದಾತ್ಮಕ ಗೋಲು ದಾಖಲಾದ 4 ನಿಮಿಷಗಳ ಬಳಿಕ ಮರಡೋನಾ, ಇಂಗ್ಲೆಂಡ್‌ನ 6 ಆಟಗಾರರನ್ನು ದಾಟಿಕೊಂಡು, 70 ಮೀ. ಓಡಿ ಗೋಲು ಬಾರಿಸಿದ್ದರು. ಅದು ಈ ಶತಮಾನದ ಶ್ರೇಷ್ಠ ಗೋಲು ಎನ್ನುವ ಹಿರಿಮೆಗೆ ಪಾತ್ರವಾಗಿತ್ತು. ಪಂದ್ಯವನ್ನು 2-1ರಲ್ಲಿ ಗೆದ್ದಿದ್ದ ಅರ್ಜೆಂಟೀನಾ ಬಳಿಕ ವಿಶ್ವ ಚಾಂಪಿಯನ್‌ ಕೂಡ ಆಗಿತ್ತು.

ಕ್ವಾರ್ಟರ್‌ ಫೈನಲ್‌ ಪಂದ್ಯದ ಬಳಿಕ ಚೆಂಡು ರೆಫ್ರಿ ನಾಸ್ಸರ್‌ ಬಳಿಯೇ ಸುಮಾರು 36 ವರ್ಷ ಉಳಿದಿತ್ತು. 2022ರಲ್ಲಿ ಅವರು 2.37 ಮಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಮಾರಾಟ ಮಾಡಿದ್ದರು.

9.3 ಮಿಲಿಯನ್‌ ಡಾಲರ್‌ಗೆ ಹರಾಜಾಗಿದ್ದ ಜೆರ್ಸಿ!

ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ಬಾರಿಸಿದ ಪಂದ್ಯದ ವೇಳೆ ಧರಿಸಿದ್ದ ಜೆರ್ಸಿ, 2022ರಲ್ಲಿ ಬರೋಬ್ಬರಿ 9.3 ಮಿಲಿಯನ್‌ ಡಾಲರ್‌ (ಅಂದಿನ ಡಾಲರ್‌ ಮೌಲ್ಯದ ಪ್ರಕಾರ 73 ಕೋಟಿ ರು.)ಗೆ ಹರಾಜಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐವರು ಮಕ್ಕಳ ಸಮ್ಮುಖದಲ್ಲಿ ಜಾರ್ಜಿನಾರನ್ನು ಮದುವೆಯಾದ ಕ್ರಿಸ್ಟಿಯಾನೋ ರೊನಾಲ್ಡೊ!
ರೋಚಕ ಪಂದ್ಯದ ನಡುವೆ ಸಿಡಿಲು ಬಡಿದು ಫುಟ್ಬಾಲ್ ಪಟು ಸಾವು, ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆ