
ಥಾಯ್ಲೆಂಡ್ (ಆ.06) ಫುಟ್ಬಾಲ್ ಪಂದ್ಯಗಳು ಮಳೆಯಲ್ಲೂ ನಡೆಯುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ರೋಚಕ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಂತೆ ಸಿಡಿಲು ಬಡಿದು ಫುಟ್ಬಾಲ್ ಪಟು ಮೃತಪಟ್ಟ ಘಟನೆ ದಕ್ಷಿಣ ಥಾಯ್ಲೆಂಡ್‌ನಲ್ಲಿ ನಡೆದಿದೆ. ಘಟನೆಯಲ್ಲಿ 12 ಆಟಗಾರರು ಗಾಯಗೊಂಡಿದ್ದಾರೆ. ತಕ್ಷಣವೇ ಫುಟ್ಬಾಲ್ ಪಂದ್ಯ ಸ್ಥಗಿತಗೊಳಿಸಿ ಆಟಾಗಾರರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಥಾಯ್ಲೆಂಡ್‌ನಲ್ಲಿ ನಡೆಯುವ ಜನಪ್ರಿಯ ಗೊಲೊಕ್ FA ಕಪ್ ಟೂರ್ನಿಯಲ್ಲಿ ಈ ದುರಂತ ಸಂಭವಿಸಿದೆ. ಥಾಯಿ ಮಲೇಷಿಯನ್ ಹಾಗೂ ಅಮೆಚ್ಯೂರ್ ನಡುವಿನ ರೋಚಕ ಹೋರಾಟದ ನಡುವೆ ಸಿಡಿಲು ಬಡಿದು ಫುಟ್ಬಾಲಿಗ ಬಲಿಯಾಗಿದ್ದಾನೆ. ಫುಟ್ಬಾಲ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ನೆರೆದಿದ್ದರು. ಹಲವರು ಫುಟ್ಬಾಲ್ ರೋಚಕತೆಯನ್ನು ತಮ್ಮ ಮೊಬೈಲ್ ಮೂಲಕ ಸೆರೆಯುತ್ತಿದ್ದರು. ಈ ವೇಳೆ ಸಿಡಿಲು ಬಡಿದ ದುರಂತವೂ ಈ ಮೊಬೈಲ್ ಮೂಲಕ ಸೆರೆಯಾಗಿದೆ.
ಪಂದ್ಯ ರೋಚಕ ಘಟ್ಟ ತಲುಪಿತ್ತು. ಮಳೆ ತೀವ್ರಗೊಂಡಿತ್ತು. ಆದರೆ ಫುಟ್ಬಾಲ್ ಪಂದ್ಯ ಸಾಗಿತ್ತು. ಅಲ್ಲೊಂದು ಇಲ್ಲೊಂದು ಸಣ್ಣ ಪ್ರಮಾಣದ ಮಿಂಚು ಪ್ರತ್ಯಕ್ಷವಾಗಿತ್ತು. ಆದರೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರಣ ಇದಕ್ಕೂ ಮೊದಲಿನ ಹಲವು ಪಂದ್ಯಗಳು ಮಳೆಯಲ್ಲೇ ನಡೆದಿತ್ತು. ಹೀಗಾಗಿ ಪಂದ್ಯ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ. ಮಳೆಯಲ್ಲಿ ಪಂದ್ಯ ಸಾಗಿತ್ತು. ಉಭಯ ತಂಡದ ಆಟಗಾರರು ಗೋಲ್‌ಗಾಗಿ ಹೋರಾಟ ತೀವ್ರಗೊಳಿಸಿದ್ದರು. ಈ ವೇಳೆ ಒಂದೇ ಸಮನೆ ಸಿಡಿಲು ಬಡಿದಿದೆ.
ಆಟದ ನಡುವೆ ಸಿಡಿಲು ಬಡಿಯುವ ದೃಶ್ಯವೂ ಅಭಿಮಾನಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೋಚಕ ಪಂದ್ಯದ ನಡುವೆ ದಿಢೀರ್ ಸಿಡಿಲು ಬಡಿದು ತಂಡದ ಪ್ರಮುಖ ಫುಟ್ಬಾಲ್ ಪಟು ಮೈದಾನದಲ್ಲಿ ಮೃತಪಟ್ಟಿದ್ದಾನೆ. ಇತ್ತ 12 ಆಟಗಾರರು ಗಾಯಗೊಂಡಿದ್ದಾರೆ. ಸಿಡಿಲು ಬಡಿದ ಬೆನ್ನಲ್ಲೇ ಯುವಕ ಮೈದಾನದಲ್ಲಿ ಪ್ರಾಣಬಿಟ್ಟಿದ್ದಾನೆ. ಇತರ ಫುಟ್ಬಾಲ್ ಪಟುಗಳು ತಕ್ಷಣವೇ ತೆರಳಿ ಯುವಕನ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಸಿಪಿಆರ್ ಮಾಡಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಇತ್ತ ಹಲವರು ಗಾಯಗೊಂಡು ಮೈದಾನದಲ್ಲಿ ಕುಸಿದು ಬಿದ್ದಿದ್ದರು.
ಆ್ಯಂಬುಲೆನ್ಸ್ ಮೂಲಕ ಆಟಗಾರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಾಗಿದೆ. ಗಾಯಗೊಂಡ ಆಟಗಾರರು ಚೇತರಿಕೆ ಕಾಣುತ್ತಿದ್ದಾರೆ. ಇತ್ತ ಪ್ರಮುಖ ಪ್ಲೇಯರ್ ದುರಂತ ಅಂತ್ಯಕಂಡಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.