ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಏನಿಲ್ಲ ಅಂತಾ ಕೇಳೋಹಾಗೇ ಇಲ್ಲ. ಬಹಶಃ ದುರ್ಬಲ ಹೃದಯದವರು ಪಂದ್ಯ ನೋಡಿದರೆ ಅನಾಹುತವಾಗಬಹುದಾಗಿದ್ದ ಎಲ್ಲಾ ಲಕ್ಷಣಗಳಿದ್ದ ಫೈನಲ್‌ನಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಅರ್ಜೆಂಟೀನಾ ನಿರಾಳವಾಗಿದೆ. ಅದರೊಂದಿಗೆ ಮೆಸ್ಸಿಯ ವಿಶ್ವಕಪ್ ಜೀವನ ಕೂಡ ಅಂತ್ಯಗೊಂಡಿದೆ.
ದೋಹಾ (ಡಿ.18): ವಿಶ್ವ ಚಾಂಪಿಯನ್ ಆಗುವ ಲಿಯೋನೆಲ್ ಮೆಸ್ಸಿ ಕಡೆಗೂ ಈಡೇರಿದೆ. ಒಂದಲ್ಲ, ಎರಡಲ್ಲ ಇದಕ್ಕೂ ಮುನ್ನ ನಾಲ್ಕು ಬಾರಿ ವಿಶ್ವಕಪ್ ಕಣದಲ್ಲಿ ಆಡಿ ಸೋಲು ಕಂಡಿದ್ದ ಲಿಯೋನೆಲ್ ಮೆಸ್ಸಿ ಈ ಬಾರಿ ಗೆಲ್ಲುವ ಹಠದಲ್ಲಿದ್ದರು. ಮೊದಲ ಅವಧಿಯಲ್ಲಿ 2-0 ಮುನ್ನಡೆ, ಹೆಚ್ಚುವರಿ ಸಮಯದ ವೇಳೆ 3-2ರ ಮುನ್ನಡೆ ಕಂಡರೂ, ಎಲ್ಲಾ ಬಾರಿ ಕೈಲಿಯನ್ ಎಂಬಾಪೆ ಎನ್ನುವ ಸಾಹಸಿ ಸಮಬಲ ಸಾಧಿಸಿ ಸವಾಲೊಡ್ಡಿದ್ದರು. ಆದರೆ ಕೊನೆಗೆ ಪೆನಾಲ್ಟಿಯಲ್ಲಿ4-2 ಅಂತರದಿಂದ ಪೆನಾಲ್ಟಿಯಲ್ಲಿ ಫ್ರಾನ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಮೂರನೇ ಬಾರಿಗೆ ವಿಶ್ವಚಾಂಪಿಯನ್ ಎನಿಸಿಕೊಂಡಿತು. ನಿಗದಿತ 90 ನಿಮಿಷಗಳ ಆಟದಲ್ಲಿ ಪಂದ್ಯ 2-2 ರಿಂದ ಸಮಬಲ ಕಂಡಿದ್ದರೆ, ಹೆಚ್ಚುವರಿ ಸಮಯದ ಮುಕ್ತಾಯಕ್ಕೆ 3-3 ಸ್ಕೋರ್‌ನಲ್ಲಿ ಮುಕ್ತಾಯ ಕಂಡಿತ್ತು. ಪಂದ್ಯದಲ್ಲಿ ಮೆಸ್ಸಿ ಎರಡು ಗೋಲು ಸಿಡಿಸಿದರೆ, ಕೈಲಿಯನ್ ಎಂಬಾಪೆ ಹ್ಯಾಟ್ರಿಕ್ ಗೋಲು ಬಾರಿಸಿದ್ದರು.
ಎಂಬಾಪೆಯನ್ನು ಸಂತೈಸಿದ ಫ್ರಾನ್ಸ್ ಅಧ್ಯಕ್ಷ: ಪಂದ್ಯದಲ್ಲಿ ಸೋಲು ಕಂಡ ಬಳಿಕ ಬೇಸರದಲ್ಲಿಯೇ ಮೈದಾನದಲ್ಲಿ ಕುಳಿತುಕೊಂಡಿದ್ದ ಕೈಲಿಯನ್ ಎಂಬಾಪೆ ಬಳಿ ಬಂದ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್, ಅವರನ್ನು ಸಂತೈಸಿದರು. ಅವರನ್ನು ತಬ್ಬಿಕೊಂಡು ಕೆಲ ಹೊತ್ತು ಮಾತನಾಡಿದರು. ಈ ವೇಳೆ ಎಂಬಾಪೆ ಬಳಿ ಬಂದ ಅರ್ಜೆಂಟೀನಾದ ಗೋಲ್ ಕೀಪರ್ ಎಮಿನಿಲಿಯೋ ಮಾರ್ಟಿನೆಜ್, ಕೂಡ ಕೈಹಿಡಿದು ಸಂತೈಸಿದರು.
'ಬಹುಶಃ ಇದು ಸಾರ್ವಕಾಲಿಕ ಶ್ರೇಷ್ಠ ವಿಶ್ವಕಪ್ ಪಂದ್ಯ. ಎಂಬಾಪೆ ಆಟ ಫ್ರಾನ್ಸ್ ಪರವಾಗಿ ಅತ್ಯದ್ಬುತವಾಗಿತ್ತು. ಆದರೆ, ಇದು ಲಿಯೋನೆಲ್ ಮೆಸ್ಸಿ ಅವರು ಕಿರೀಟ ಹೊರುವ ಕ್ಷಣವಾಗಿತ್ತು. ಫಿಫಾ ವಿಶ್ವಕಪ್ ಚಾಂಪಿಯನ್ ಆಗಿರುವ ಅರ್ಜೆಂಟೀನಾ ತಂಡಕ್ಕೆ ಅಭಿನಂದನೆಗಳು' ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
'ಬೇರೆ ಯಾವುದಾದರೂ ಕ್ರೀಡೆ ನೋಡುವಾಗಿ ಇಷ್ಟು ರೀತಿಯ ಮೈನವಿರೇಳಿಸುವ ಕ್ಷಣಗಳು ಉಂಟಾಗಿದ್ದು ನನಗೆ ನೆನಪಿಲ್ಲ. ಆದರೆ, ಫೈನಲ್ ಪಂದ್ಯ ಬಹಳ ಅದ್ಬುತವಾಗಿತ್ತು. ಥ್ಯಾಂಕ್ಸ್ ಫುಟ್‌ಬಾಲ್' ಎಂದು ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.
ಬಹುಶಃ ನೋಡಿದ ಶ್ರೇಷ್ಠ ಪಂದ್ಯಗಳಲ್ಲಿ ಒಂದು. ಅರ್ಜೆಂಟೀನಾ ಹಾಗೂ ಫ್ರಾನ್ಸ್ ಅದ್ಭುತವಾಗಿ ಆಡಿದವು. ಈ ಟ್ರೋಫಿ ಮೆಸ್ಸಿಗಿಂತ ಯಾರೂ ಅರ್ಹರಾಗಿರಲಿಲ್ಲ. ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ, ಮೆಸ್ಸಿ ಫುಟ್‌ಬಾಲ್ ಆಡಿದ ಅತ್ಯಂತ ಶ್ರೇಷ್ಠ ಆಟಗಾರ ಎಂದು ಭಾವನೆ. ಎಂತಾ ಅದ್ಭುತ ಕ್ಷಣ' ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.
FIFA World Cup: ಮೆಸ್ಸಿ ಮ್ಯಾಜಿಕ್, ಪೆನಾಲ್ಟಿಯಲ್ಲಿ ಕಮಾಲ್, ಫುಟ್‌ಬಾಲ್ ಜಗತ್ತಿಗೆ ಅರ್ಜೆಂಟೀನಾ ಕಿಂಗ್!
ಇದು ಅತ್ಯಂತ ರೋಮಾಂಚಕ ಫುಟ್‌ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ! ಫಿಫಾ ವಿಶ್ವಕಪ್ ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು! ಟೂರ್ನಿಯಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಭವ್ಯವಾದ ವಿಜಯದಲ್ಲಿ ಬಹಳ ಸಂಭ್ರಮ ಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೋ ಫೆರ್ನಾಂಡೆಜ್‌ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
undefined
Story Of Lionel Messi: ಕುಬ್ಜನಾಗುವ ಹಾದಿಯಲ್ಲಿದ್ದ ಮೆಸ್ಸಿಯನ್ನು ಎಳೆದು, ಬಿಗಿ ಮಾಡಿದ್ದ ಬಾರ್ಸಿಲೋನಾ ಎಫ್‌ಸಿ!
ಮೆಸ್ಸಿಗಾಗಿ ಇಂಥದ್ದೊಂದು ಆಟವಾಡಿದ್ದಕ್ಕಾಗಿ ಅರ್ಜೆಂಟೀನಾಗೆ ಅನೇಕ ಅಭಿನಂದನೆಗಳು! ವಿಶ್ವಕಪ್ ಆರಂಭ ಮಾಡಿದ ರೀತಿಗೆ ಹೋಲಿಸಿದರೆ, ತಂಡದ ಅದ್ಭುತವಾದ ಪುನರಾಗಮನ ಹೆಚ್ಚುವರಿ ಸಮಯದ ಕೊನೆಯಲ್ಲಿ ಅದ್ಭುತ ಸೇವ್‌ಗಳನ್ನು ಮಾಡಿದ ಮಾರ್ಟಿನೆಜ್ ಅನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವರ ಆಟವನ್ನು ನೋಡಿಯೇ, ಅರ್ಜೆಂಟೀನಾ ವಿಶ್ವಕಪ್ ಗೆಲ್ಲುತ್ತದೆ ಎನ್ನುವ ಸ್ಪಷ್ಟ ಸೂಚನೆ ಸಿಕ್ಕಿತ್ತು' ಎಂದು ಸಚಿನ್ ತೆಂಡುಲ್ಕರ್ ಬರೆದಿದ್ದಾರೆ. 'ನಾವು ಸುಂದರವಾದ ಆಟದ ಶ್ರೇಷ್ಠ ಆಟವನ್ನು ನೋಡುತ್ತಿದ್ದೇವೆ' ಎಂದು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು.
ಅರ್ಜೆಂಟೀನಾದಲ್ಲಿ ಮುಗಿಲು ಮುಟ್ಟಿದ ಸಂಭ್ರಮ: ಇನ್ನೊಂದೆಡೆ ಭಾನುವಾರ ಮುಂಜಾನೆ ಅರ್ಜೆಂಟೀನಾದ ಪಾಲಿಗೆ ಸಂಭ್ರಮದ ದಿನವಾಗಿ ಮಾರ್ಪಟ್ಟಿದೆ. ಮಧ್ಯಾಹ್ನದ ವೇಳೆಗೆ ಅರ್ಜೆಂಟೀನಾದ ಜನರಿಗೆ ವಿಶ್ವಕಪ್ ಗೆದ್ದಿರುವ ಸುದ್ದಿ ತಲುಪುತ್ತಿದ್ದಂತೆ, ಮುಗಿಲುಮುಟ್ಟುವಂತ ಹರ್ಷೋದ್ಗಾರ ನಡೆಸಲಾಗಿದೆ.