ಯಾರಲ್ಲಿ ಇಷ್ಟು ಹಣವಿದೆ, ಯಾಕಂದ್ರೆ... ಮ್ಯಾಂಚೆಸ್ಟರ್‌ ಯುನೈಟೆಡ್‌ ಮಾರಾಟಕ್ಕಿದೆ!

By Santosh Naik  |  First Published Nov 23, 2022, 6:55 PM IST

ತಕ್ಷಣದಿಂದಲೇ ಸರ್ವಶ್ರೇಷ್ಠ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು ಕೈಬಿಡಲಾಗಿದೆ ಎಂದು ವಿಶ್ವದ ಸುಪ್ರಸಿದ್ಧ ಫುಟ್‌ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ ಘೋಷಣೆ ಮಾಡಿದೆ. ಅದರ ಬೆನ್ನಲ್ಲಿಯೇ ಕ್ಲಬ್‌ ಮಾಲೀಕರು ಯುನೈಟೆಡ್‌ ಕ್ಲಬ್‌ಅನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
 


ಲಂಡನ್‌ (ನ.23): ವಿಶ್ವದ ಅತ್ಯಂತ ಶ್ರೀಮಂತ ಕ್ಲಬ್‌, ಮೌಲ್ಯದಲ್ಲಿ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ಅನ್ನೇ ಮೀರಿಸಿರುವ ಮ್ಯಾಂಚೆಸ್ಟರ್‌ ಯುನೈಟೆಡ್‌ ಮಾರಾಟಕ್ಕೆ ಸಜ್ಜಾಗಿದೆ. ಸೂಪರ್‌ಸ್ಟಾರ್‌ ಪ್ಲೇಯರ್‌ ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು ತಂಡದಿಂದ ಕೈಬಿಟ್ಟ ನಿರ್ಧಾರ ಘೋಷಣೆಯಾದ ದಿನವೇ ಕ್ಲಬ್‌ನ ಮಾಲೀಕರು ಮಾರಾಟದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್ ತಂಡ ಮಾಲೀಕತ್ವವನ್ನು ಗ್ಲೇಜರ್‌ ಕುಟುಂಬ ಹೊಂದಿದೆ. ಈಗಾಗಲೇ ಕ್ಲಬ್‌ಅನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ಘೋಷಣೆಯನ್ನು ಕುಟುಂಬ ಮಾಡಿದೆ. ಕ್ಲಬ್‌ಅನ್ನು ಖರೀದಿ ಮಾಡುವವರು ಯಾರಾದರೂ ಮುಂದೆ ಬಂದಲ್ಲಿ ಖಂಡಿತವಾಗಿ ಮಾರಾಟ ಮಾಡಲಿದ್ದೇವೆ ಎಂದು ಗ್ಲೇಜರ್‌ ಕುಟುಂಬ ಹೇಳಿದ. ಕಳೆದ 17 ವರ್ಷಗಳಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ ಮಾಲೀಕರಾಗಿರುವ ಗ್ಲೇಜರ್‌ ಕುಟುಂಬ ಕೂಡ ಕ್ಲಬ್‌ಗಾಗಿ ಖರೀದಿದಾರರು ಎಷ್ಟು ಪ್ರಮಾಣದ ಹಣ ನೀಡಲು ತಯಾರಿದ್ದಾರೆ ಎನ್ನುವ ಕುತೂಹಲವೂ ಇದೆ. ಮುಖ್ಯವಾಗಿ ಕಳೆದ ಕೆಲವು ವರ್ಷಗಳಿಂದ ಕ್ಲಬ್‌ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಪರಮ ಅಭಿಮಾನಿಗಳೂ ಕೂಡ ತಂಡದ ಪ್ರದರ್ಶನ ಕಳವಳಕಾರಿಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಗ್ಲೇಜರ್‌ ಕುಟುಂಬ ಅಂದಾಜು 5 ಬಿಲಿಯನ್‌ ಯುರೋ (ಅಂದಾಜು 48586 ಕೋಟಿ ರೂಪಾಯಿ) ಮೊತ್ತಕ್ಕೆ ಕ್ಲಬ್‌ಅನ್ನು ಮಾರಾಟ ಮಾಡಲು ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಹಾಗೇನಾದರೂ ಗ್ಲೇಜರ್‌ ಕುಟುಂಬ ಕ್ಲಬ್‌ ಅನ್ನು ಖಂಡಿತವಾಗಿಯೂ ಮಾರಾಟ ಮಾಡುತ್ತಾರೆ ಎಂದಾದಲ್ಲಿ ಅಮೆರಿಕದ ಹೂಡಿಕೆದಾರರು ಈ ಕ್ಲಬ್‌ ಅನ್ನು ಖರೀದಿ ಮಾಡಲು ಕೂಡ ಉತ್ಸುಕವಾಗಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಲು ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದೆ. ತಮ್ಮ ಕುಟುಂಬದ ಕ್ಲಬ್‌ನಲ್ಲಿ ಹೊಸ ಹೂಡಿಕೆ, ಮಾರಾಟ ಅಥವಾ ಕಂಪನಿಯನ್ನು ಒಳಗೊಂಡ ಇತರ ವಹಿವಾಟುಗಳಿಗಾಗಿ ಗ್ಲೇಜರ್‌ ಕುಟುಂಬ ತನ್ನ ಆಯ್ಕೆ ಮುಕ್ತವಾಗಿರಿಸಿದೆ.

"ವಿಶ್ವದ ಅತ್ಯಂತ ಯಶಸ್ವಿ ಮತ್ತು ಐತಿಹಾಸಿಕ ಕ್ರೀಡಾ ಕ್ಲಬ್‌ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್ ಇಂದು ಕಂಪನಿಯ ನಿರ್ದೇಶಕರ ಮಂಡಳಿಯು ಕ್ಲಬ್‌ಗಾಗಿ ಕಾರ್ಯತಂತ್ರದ ಆಯ್ಕೆಗಳನ್ನು ಅನ್ವೇಷಿಸಲು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ ಎಂದು ಘೋಷಿಸುತ್ತದೆ" ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಕ್ರಿಯೆಯನ್ನು ಕ್ಲಬ್‌ನ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾಗಿದೆ. ಮೈದಾನದಲ್ಲಿ ಮತ್ತು ಹೊರಗೆ ಮತ್ತು ವಾಣಿಜ್ಯಿಕವಾಗಿ ಅವಕಾಶಗಳನ್ನು ಲಾಭ ಮಾಡಿಕೊಳ್ಳಲು ಕ್ಲಬ್ ಅನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಇದರ ಅಂತಿಮ ಗುರಿಯಾಗಿದೆ. ಈ ಪ್ರಕ್ರಿಯೆಯ ಭಾಗವಾಗಿ, ಮಂಡಳಿಯು ಕ್ಲಬ್‌ನಲ್ಲಿ ಹೊಸ ಹೂಡಿಕೆಗಳು, ಮಾರಾಟಗಳು ಅಥವಾ ಕಂಪನಿಯನ್ನು ಒಳಗೊಂಡಿರುವ ಇತರ ವಹಿವಾಟುಗಳನ್ನು ಪರಿಗಣಿಸುತ್ತದೆ. ಇದು ಕ್ರೀಡಾಂಗಣದ ಪುನರಾಭಿವೃದ್ಧಿ ಮತ್ತು ಮೂಲಸೌಕರ್ಯ ಸೇರಿದಂತೆ ಕ್ಲಬ್ ಅನ್ನು ಬಲಪಡಿಸಲು ಹಲವಾರು ಉಪಕ್ರಮಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಜಾಗತಿಕವಾಗಿ ಕ್ಲಬ್‌ನ ಕಾರ್ಯಾಚರಣೆಗಳ ವಿಸ್ತರಣೆ, ಪ್ರತಿ ಕ್ಲಬ್‌ನ ಪುರುಷರು, ಮಹಿಳೆಯರು ಮತ್ತು ಅಕಾಡೆಮಿ ತಂಡಗಳ ದೀರ್ಘಾವಧಿಯ ಯಶಸ್ಸನ್ನು ಹೆಚ್ಚಿಸಲು ಮತ್ತು ಅಭಿಮಾನಿಗಳು ಮತ್ತು ಇತರ ಮಧ್ಯಸ್ಥಗಾರರಿಗೆ ಪ್ರಯೋಜನಗಳನ್ನು ತಲುಪಿಸಲು ಪ್ರಯತ್ನಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಮ್ಯಾಂಚೆಸ್ಟರ್‌ ಯುನೈಟೆಡ್‌ನಿಂದ ಮೋಸವಾದಂತೆ ಅನಿಸಿದೆ, ರೊನಾಲ್ಡೊ ಸ್ಫೋಟಕ ಹೇಳಿಕೆ!

ಕ್ಲಬ್‌ನ ನಿರ್ದೇಶಕರ ಕಾರ್ಯನಿರ್ವಾಹಕ ಸಹ-ಅಧ್ಯಕ್ಷರಾದ ಅವ್ರಾಮ್ ಗ್ಲೇಜರ್ ಮತ್ತು ಜೋಯಲ್ ಗ್ಲೇಜರ್ ಈ ಬಗ್ಗೆ ಮಾತನಾಡಿದ್ದು "ಮ್ಯಾಂಚೆಸ್ಟರ್ ಯುನೈಟೆಡ್‌ನ ಶಕ್ತಿಯು 1.1 ಶತಕೋಟಿ ಅಭಿಮಾನಿಗಳ ಉತ್ಸಾಹ ಮತ್ತು ನಿಷ್ಠೆಯ ಮೇಲೆ ನಿಂತಿದೆ. ನಾವು ಕ್ಲಬ್‌ನ ಯಶಸ್ಸಿನ ಇತಿಹಾಸವನ್ನು ಮುಂದುವರಿಸಲು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ. ಚೆಲ್ಸಿ ಕ್ಲಬ್‌ನ ಮಾಲೀಕತ್ವ ಹಸ್ತಾಂತರದ ವೇಳೆ ಪ್ರಮುಖ ಪಾತ್ರ ನಿಭಾಯಿಸಿದ್ದ ರಹ್ನಿ ಗ್ರೂಪ್‌, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ಗೆ ಆರ್ಥಿಕ ಸಹಾಯಕರಾಗಿದ್ದರೆ, ಗ್ಲೇಜರ್‌ ಕುಟುಂಬಕ್ಕೆ ರಾತ್ಸ್‌ಚೈಲ್ಡ್‌ ಸಲಹೆಗಾರರಾಗಿದೆ.

Tap to resize

Latest Videos

undefined

ಮ್ಯಾಂಚೆಸ್ಟರ್‌ ಯುನೈಟೆಡ್‌ನಿಂದ ಐಪಿಎಲ್‌ ತಂಡ ಖರೀದಿ ಸಾಧ್ಯತೆ!

ಗ್ಲೇಜರ್‌ ಕುಟುಂಬದ ಹೇಳಿಕೆ ಬಳಿಕ, 17 ವರ್ಷಗಳ ನಂತರ ಮ್ಯಾಂಚೆಸ್ಟ್ ಯುನೈಟೆಡ್‌ ಮಾರಾಟಕ್ಕೆ ಸಿದ್ಧವಾಗಿದೆ.2013ರಿಂದ ಕ್ಲವ್‌ ಪ್ರೀಮಿಯರ್‌ ಲೀಗ್‌ ಗೆದ್ದಿಲ್ಲ. ಅಲೆಕ್ಸ್‌ ಫರ್ಗ್ಯುಸನ್‌ ನಿರ್ಗಮನದ ಬಳಿಕ ಸಾಕಷ್ಟು ಮಂದಿ ಮ್ಯಾನೇಜರ್‌ಗಳು ಬಂದಿದ್ದರೂ, ಯಾರೂ ಕೂಡ ಯಶಸ್ಸು ಕಂಡಿಲ್ಲ. ಇತ್ತೀಚೆಗೆ ಕ್ರಿಶ್ಚಿಯಾನೋ ರೊನಾಲ್ಡೋ ಕೂಡ ಕ್ಲಬ್‌ನ ಆಂತರಿಕ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

click me!