ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರ ನಡೆದ ಕ್ರಿಸ್ಟಿಯಾನೋ ರೊನಾಲ್ಡೋ..!

By Naveen Kodase  |  First Published Nov 23, 2022, 12:30 PM IST

ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡಕ್ಕೆ ಗುಡ್‌ ಬೈ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೋ
ಪರಸ್ಪರ ಸಮ್ಮತಿಯ ಮೇರೆಗೆ ಮ್ಯಾಂಚೆಸ್ಟರ್ ತಂಡದಿಂದ ಹೊರನಡೆದ ರೊನಾಲ್ಡೋ
ಕೆಲ ದಿನಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಕ್ಲಬ್ ವಿರುದ್ದ ಅಸಮಾಧಾನ ಹೊರಹಾಕಿದ್ದ ಪೋರ್ಚುಗಲ್‌ ನಾಯಕ


ಲಂಡನ್‌(ನ.23): ತಿಂಗಳಾರಂಭದಲ್ಲೇ ಟಾಲ್ಕ್‌ ಟಿವಿ  ಶೋವೊಂದರಲ್ಲಿ ಮ್ಯಾಂಚೆಸ್ಟರ್ ತಂಡದ ಮಾಲೀಕರ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಕ್ರಿಸ್ಟಿಯಾನೋ ರೊನಾಲ್ಡೋ, ಇದೀಗ ಪ್ರತಿಷ್ಠಿತ ಮ್ಯಾಂಚೆಸ್ಟರ್ ಕ್ಲಬ್‌ ತೊರೆದಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಪೋರ್ಚುಗಲ್‌ ನಾಯಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ತಂಡ ತೊರೆದಿದ್ದಾರೆ ಎಂದು ಮ್ಯಾಂಚೆಸ್ಟರ್ ತಂಡವು ಪ್ರಕಟಣೆಯಲ್ಲಿ ತಿಳಿಸಿದೆ.

2003ರಿಂದ 2009ರವರೆಗೆ ಮ್ಯಾಂಚೆಸ್ಟರ್‌ ಯುನೈಟೆಡ್ ತಂಡದ ಪರ 8 ಟ್ರೋಫಿ ಜಯಿಸಿದ್ದ ಕ್ರಿಸ್ಟಿಯಾನೋ ರೊನಾಲ್ಡೋ, 2021ರ ಆಗಸ್ಟ್‌ನಲ್ಲಿ ಮತ್ತೆ ಮ್ಯಾಂಚೆಸ್ಟರ್ ತಂಡ ಕೂಡಿಕೊಂಡಿದ್ದರು. ಇತ್ತೀಚೆಗಷ್ಟೇ ರೊನಾಲ್ಡೋ, ಮ್ಯಾಂಚೆಸ್ಟರ್‌ ಯುನೈಟೆಡ್ ತಂಡದ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್ ಅವರ ಮೇಲೆ ನನಗ್ಯಾವ ಗೌರವವೂ ಇಲ್ಲ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 

Tap to resize

Latest Videos

undefined

ನಾನು ಎಂದೆಂದಿಗೂ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಅಭಿಮಾನಿಗಳನ್ನು ಇಷ್ಟ ಪಡುತ್ತೇನೆ. ಅದು ಎಂದೆಂದಿಗೂ ಬದಲಾಗುವುದಿಲ್ಲ. ಇದು ಹೊಸ ಸವಾಲು ಸ್ವೀಕರಿಸಲು ಸರಿಯಾದ ಸಮಯವೆಂದು ನಾನು ಭಾವಿಸುತ್ತೇನೆ. ಮ್ಯಾಚೆಸ್ಟರ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಕ್ರಿಸ್ಟಿಯಾನೋ ರೊನಾಲ್ಡೋ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

Cristiano Ronaldo is to leave Manchester United by mutual agreement, with immediate effect.

The club thanks him for his immense contribution across two spells at Old Trafford.

— Manchester United (@ManUtd)

ತಕ್ಷಣಕ್ಕೆ ಜಾರಿಗೆ ಬರುವಂತೆ ಪರಸ್ಪರ ಸಮ್ಮತಿಯಿಂದ ಕ್ರಿಸ್ಟಿಯಾನೋ ರೊನಾಲ್ಡೋ, ಮ್ಯಾಂಚೆಸ್ಟರ್ ಯುನೈಟೆಡ್‌ ತಂಡವನ್ನು ತೊರೆದಿದ್ದಾರೆ. ಓಲ್ಡ್ ಟ್ರಾಪೋರ್ಡ್‌ ಪರ ಎರಡು ಅವಧಿಗಳ ಕಾಲ ಅಪರಿಮಿತ ಕೊಡುಗೆ ನೀಡಿದ ರೊನಾಲ್ಡೋ ಅವರಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದೆ. ಕ್ರಿಸ್ಟಿಯಾನೋ ರೊನಾಲ್ಡೋ, ಮ್ಯಾಂಚೆಸ್ಟರ್ ಯುನೈಟೆಡ್‌ ತಂಡದ ಪರ 346 ಪಂದ್ಯಗಳನ್ನಾಡಿ 145 ಗೋಲು ಬಾರಿಸಿದ್ದರು. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

FIFA World Cup ಇಂದು ಜರ್ಮನಿ vs ಜಪಾನ್ ಸೇರಿದಂತೆ ದಿಗ್ಗಜ ತಂಡಗಳು ಸೆಣಸಾಟ

ಟೆನ್‌ ಹ್ಯಾಗ್‌ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಮ್ಯಾಂಚೆಸ್ಟರ್‌ ಯುನೈಟೆಡ್ ತಂಡದ ಬೆಳವಣಿಗೆಗೆ ಶ್ರಮಿಸುವತ್ತ ಗಮನ ಹರಿಸಬೇಕು. ಎಲ್ಲರು ಒಟ್ಟಾಗಿ ಕೆಲಸ ಮಾಡುವ ಮೂಲಕ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಬೇಕು ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!