
ಅಟ್ಲಾಂಟ: ಸ್ಪೇನ್ ವಿರುದ್ಧ ಅಮೋಘ ಪ್ರದರ್ಶನದ ಬಳಿಕ ಕೇಪ್ ವರ್ಡೆ ತಂಡದ ಆಟಗಾರರ ಹಿನ್ನೆಲೆ, ಅವರ ಫುಟ್ಬಾಲ್ ಚರಿತ್ರೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸುದ್ದಿಗಳು ಹರಿದಾಡತೊಡಗಿವೆ. ಇದರಲ್ಲಿ ಲಿಂಕ್ಡ್ಇನ್ ಎಂಬ ಆ್ಯಪ್ ಮೂಲಕ ಕೋಚ್ ಕಣ್ಣಿಗೆ ಬಿದ್ದು, ಈಗ ತಂಡದ ಪ್ರಮುಖ ಡಿಫೆಂಡರ್ ಆಗಿ ಬೆಳೆದಿರುವ ರೊಬೆರ್ಟೊ ಲೊಪೆಜ್ ಕೂಡಾ ಒಬ್ಬರು.
ಕೇಪ್ ವರ್ಡೆಯವರಾದ ತಂದೆ ಹಾಗೂ ಐರ್ಲೆಂಡ್‌ನ ತಾಯಿಗೆ ಐರ್ಲೆಂಡ್‌ನಲ್ಲಿ ಹುಟ್ಟಿದವರು ಲೊಪೆಜ್. ಕೆಲ ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾ, ಐರ್ಲೆಂಡ್‌ನಲ್ಲಿ ಕ್ಲಬ್‌ಗಳ ಪರ ಫುಟ್ಬಾಲ್ ಆಡುತ್ತಿದ್ದರು. ಈ ನಡುವೆ ಕೇಪ್ ವರ್ಡೆ ಫುಟ್ಬಾಲ್ ಸಂಸ್ಥೆಯು, ಬೇರೆ ದೇಶದಲ್ಲಿ ಆಡುತ್ತಿರುವ ಕೇಪ್ ವರ್ಡೆ ಆಟಗಾರರಿಗಾಗಿ ಹುಡುಕಾಟ ನಡೆಸುತ್ತಿತ್ತು. ಆಗ ಕಣ್ಣಿಗೆ ಬಿದ್ದವರು ಲೊಪೆಜ್. ಅವರನ್ನು ಲಿಂಕ್ಡ್ಇನ್ ಮೂಲಕ ಸಂಪರ್ಕಿಸಲಾಯಿತಾದರೂ ಅದಕ್ಕೆ ಲೊಪೆಜ್ ಪ್ರತಿಕ್ರಿಯೆ ನೀಡಿರಲಿಲ್ಲ. ಕಾರಣ, ಆ ಸಂದೇಶ ಪೋರ್ಚುಗೀಸ್ ಭಾಷೆಯಲ್ಲಿತ್ತು.
CAPE VERDE’S LINKEDIN CENTRE BACK 🤯⁉️
Cape Verde centre back Roberto 'Pico' Lopes was born in and has spent his entire career in Ireland. He ignored a LinkedIn message from Cape Verde FA asking him to play for them because it was in Portuguese. A year later, they sent it in… pic.twitter.com/SIxTwdugH3— The92Bible (@The92Bible) June 15, 2026
ಕೆಲ ತಿಂಗಳ ಬಳಿಕ ಮತ್ತೆ ಕೇಪ್ ವರ್ಡೆ ಸಂಸ್ಥೆಯ ಸಂದೇಶ ಬಂದಾಗ, ಅದನ್ನು ಗೂಗಲ್ ಟ್ರಾನ್ಸ್‌ಲೇಟ್ ಮೂಲಕ ಲೊಪೆಜ್ ಇಂಗ್ಲಿಷ್‌ನಲ್ಲಿ ಓದಿದ್ದಾರೆ. ಕೇಪ್ ವರ್ಡೆ ಪರ ಆಡುವಂತೆ ಕೋರಿಕೆ ಬಂದಾಗ ಅದನ್ನು ಪರಿಗಣಿಸಿದ ಲೊಪೆಜ್, 2019ರಲ್ಲಿ ಆ ದೇಶದ ಪರ ಮೊದಲ ಬಾರಿ ಆಡುವ ಅವಕಾಶ ಪಡೆದುಕೊಂಡರು. ಈಗ ಅವರು ತಂಡದ ಪ್ರಮುಖ ಡಿಫೆಂಡರ್ ಆಗಿದ್ದು, ಸ್ಪೇನ್ ವಿರುದ್ಧ ಡ್ರಾಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಮಾಜಿ ಚಾಂಪಿಯನ್ ಸ್ಪೇನ್ ವಿರುದ್ಧ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ, ಕೇಪ್ ವರ್ಡೆ ತಂಡಕ್ಕೆ ಐತಿಹಾಸಿಕ ಡ್ರಾ ಸಾಧಿಸಲು ನೆರವಾದ ತಂಡದ ಗೋಲ್ ಕೀಪರ್, 40 ವರ್ಷದ ವೊಜಿನ್ಹಾ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಜೊತೆಗೆ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಕೂಡಾ ಗಣನೀಯ ಏರಿಕೆ ಕಂಡಿದೆ. ಸ್ಪೇನ್ ವಿರುದ್ಧ ಪಂದ್ಯಕ್ಕೂ ಮುನ್ನ ಫಾಲೋವರ್ಸ್ ಸಂಖ್ಯೆ 50 ಸಾವಿರ ಇದ್ದಿದ್ದು, 24 ಗಂಟೆಯೊಳಗೆ ಈ ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿದೆ.
ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಯುರೋಪ್ ತಂಡಗಳ ನಡುವೆ ಏಷ್ಯಾದ ತಂಡಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಅಜೇಯ ದಾಖಲೆ ಹೊಂದಿದೆ. ಒಟ್ಟು 9 ತಂಡಗಳ ಪೈಕಿ 6 ತಂಡಗಳು ಈಗಾಗಲೇ ಮೊದಲ ಪಂದ್ಯವಾಡಿದ್ದು, ಯಾವ ತಂಡಕ್ಕೂ ಸೋಲು ಎದುರಾಗಿಲ್ಲ.
ಚೆಕ್ ಗಣರಾಜ್ಯದ ವಿರುದ್ಧ ದಕ್ಷಿಣ ಕೊರಿಯಾ 2-1ರಲ್ಲಿ ಗೆದ್ದಿದ್ದು, ಟ್ಯುನೀಶಿಯಾ ವಿರುದ್ಧ ಆಸ್ಟ್ರೇಲಿಯಾ 2-0 ಗೆಲುವು ಸಾಧಿಸಿದೆ. ಉಳಿದಂತೆ ಸ್ವಿಜರ್‌ಲೆಂಡ್ ವಿರುದ್ಧ ಕತಾರ್ 1-1, ನೆದರ್‌ಲೆಂಡ್ಸ್ ವಿರುದ್ಧ ಜಪಾನ್ 2-2, ಉರುಗ್ವೆ ವಿರುದ್ಧ ಸೌದಿ ಅರೇಬಿಯಾ 1-1, ನ್ಯೂಜಿಲೆಂಡ್ ವಿರುದ್ಧ ಇರಾನ್ 2-2 ಗೋಲುಗಳಿಂದ ಡ್ರಾ ಸಾಧಿಸಿದೆ. ಉಜ್ಬೇಕಿಸ್ತಾನ, ಇರಾಕ್, ಜೋರ್ಡನ್ ಇನ್ನಷ್ಟೇ ಆಡಬೇಕಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.