
ಮಲಪ್ಪುರಂ(ಜೂ.08): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸಂಪೂರ್ಣ ನಿಯಂತ್ರಕ್ಕೆ ಬಂದಿದ್ದ ಕೇರಳದಲ್ಲೂ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂತೋಷ್ ಟ್ರೋಫಿ ಪುಟ್ಬಾಲ್ ಟೂರ್ನಿಯಲ್ಲಿ ಗಮನಸೆಳೆದಿದ್ದ ಫುಟ್ಬಾಲ್ ಪಟು ಹಂಸಕೋಯ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಕೇರಳದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ನೆಲೆಸಿದ್ದ 61ರ ಹರೆಯದ ಹಂಸಕೋಯ, ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಮುಂಬೈನಲ್ಲಿ ಕೊರೋನಾ ವೈರಸ್ ತೀವ್ರವಾದ ಕಾರಣ ಹಂಸಕೋಯ, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸಮೇತ ತವರೂರಾದ ಕೇರಳದ ಮಲಪ್ಪುರಂಗೆ ಆಗಮಿಸಿದ್ದರು. ನ್ಯೂಮೋನಿಯಾ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಹಂಸಕೋಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜ್ವರ, ಗಂಟಲು ನೋವು: ಸಿಎಂ ಕೇಜ್ರೀವಾಲ್‌ಗೆ ಕೊರೋನಾ ಟೆಸ್ಟ್!
ತಪಾಸನೆ ನಡೆಸಿದ ವೈದ್ಯರು, ಹಂಸಕೋಯಗೆ ಕೊರೋನಾ ತಗುಲಿರುವುದು ಖಚಿತಪಡಿಸಿದ್ದರು. ಹಲವು ಆರೋಗ್ಯ ಸಮಸ್ಯೆ ಹಾಗೂ ಕೊರೋನಾ ವೈರಸ್‌ನಿಂದ ಹಂಸಕೋಯ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹೀಗಾಗಿ ಹಂಸಕೋಯ ನಿಧನರಾಗಿದ್ದಾರೆ. ಮುಂಬೈನಿಂದ ಹಂಸಕೋಯ ಜೊತೆ ತವರಿಗೆ ಆಗಮಿಸಿದ ಕುಟುಂಬದ ಐವರು ಸದಸ್ಯರಿಗೂ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರ ಪರ ಸಂತೋಷ್ ಟ್ರೋಫಿ, ಭಾರತದ ಅತ್ಯಂತ ಪ್ರಸಿದ್ಧ ಮೋಹನ್ ಬಗಾನ್, ಮೊಹ್ಮಮದೀನ್ ಸ್ಪೋರ್ಟ್ಸ್ ಕ್ಲಬ್ ಸೇರಿದಂತೆ ಹಲವು ಫುಟ್ಬಾಲ್ ಕ್ಲಬ್ ಪರ ಹಂಸಕೋಯ ಆಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.