ಕೊರೋನಾ ವೈರಸ್ ಕಾರಣ ಯಾವುದೇ ಕ್ರೀಡಾಂಗಣಕ್ಕೂ ಪ್ರೇಕ್ಷರಿಗೆ ಪ್ರವೇಶವಿಲ್ಲ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳೂ ಕಾಣುತ್ತಿಲ್ಲ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಇದೀಗ ಫುಟ್ಬಾಲ್ ಆರಂಭಗೊಂಡಿದೆ. ಇತ್ತ ಆಟಗಾರರಿಗೆ ನಿರಾಸೆಯಾಗದಿರಿಲು ಅಭಿಮಾನಿಗಳ ಕಟೌಟ್ ಬಳಸಲಾಗಿದೆ.
ಜರ್ಮನಿ(ಮೇ.21): ಕೊರೋನಾ ಸೋಂಕು ವಿಶ್ವದೆಲ್ಲೆಡೆ ಹರಡಿದ್ದು, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ಕೆಲ ರಾಷ್ಟ್ರಗಳಲ್ಲಿ ಫುಟ್ಬಾಲ್ ಲೀಗ್‌ಗಳು ಪುನಾರಂಭಗೊಂಡಿವೆ. ಜರ್ಮನಿಯ ಬಂಡೆಸ್‌ಲೀಗಾ ಫುಟ್ಬಾಲ್ ಟೂರ್ನಿ ಕಳೆದ ವಾರದಿಂದ ಶುರುವಾಗಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಆದರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಗಳ ಕಟೌಟ್‌ಗಳನ್ನು ಇರಿಸಲಾಗುತ್ತಿದೆ.
ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!.
undefined
19 ಯುರೋಗಳನ್ನು ಪಾವತಿಸಿ ಲೀಗ್‌ನ ವೆಬ್‌ಸೈಟ್‌ನಲ್ಲಿ ತಮ್ಮ ಭಾವಚಿತ್ರ ಅಪ್‌ಲೋಡ್ ಮಾಡಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ. ಟಿಕೆಟ್ ಮಾರಾಟವಿಲ್ಲದೆ ಆಗುತ್ತಿರುವ ನಷ್ಟವನ್ನು ಆಯೋಜಕರು ಈ ರೀತಿ ಸರಿದೂಗಿಸುತ್ತಿದ್ದಾರೆ.
ಇದೇ ವೇಳೆ ದ.ಕೊರಿಯಾ ಹಾಗೂ ಆಸ್ಪ್ರೇಲಿಯಾದಲ್ಲಿ ಅಭಿಮಾನಿಗಳು ಕೂಗುವ ಅಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಕ್ರೀಡಾಂಗಣಗಳಲ್ಲಿ ಸಾಮಾನ್ಯವಾಗಿ ಅಭಿಮಾನಿಗಳ ಇರುವ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಇದೀಗ ಇತರ ಕ್ರೀಡೆಗಳು ಈ ರೀತಿಯ ಪ್ರಯತ್ನಕ್ಕೆ ಕೈಹಾಕುತ್ತಿದೆ. ಆದರೆ ಕ್ರಿಕೆಟ್‌ನಲ್ಲಿ ಪ್ರೇಕ್ಷರಿಲ್ಲದ ಆಟ ಆರಂಭವಾಗುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಬಹುತೇಕ ಕ್ರಿಕೆಟಿಗರು ಪ್ರೇಕ್ಷಕರಿಲ್ಲದೆ ಕ್ರಿಕೆಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.