ಕೃಷ್ಣನ ಕೃಪೆ; ಮೋಹನ್ ಬಾಗನ್‌ಗೆ ಅಂತಿಮ ಕ್ಷಣದಲ್ಲಿ ಒಲಿದ ಗೆಲುವು!

By Suvarna NewsFirst Published Dec 3, 2020, 9:58 PM IST
Highlights

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೋ ಮೋಹನ್ ಬಾಗನ್ ಗೆಲುವಿನ ನಾಗಾಲೋಟ ಮುಂದುವರಿಸಿದೆ.  ಪಂದ್ಯದ ಬಹುತೇಕ ಭಾಗದಲ್ಲಿ ಒಡಿಶಾ ಹಿಡಿತ ಸಾಧಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಟಿಕೆ ಪಂದ್ಯದ ಗತಿಯನ್ನೇ ಬದಲಿಸಿತು.

ಗೋವಾ(ಡಿ.03): ಅಂತಿಮ ಕ್ಷಣದಲ್ಲಿ ರಾಯ್ ಕೃಷ್ಣ (94ನೇ ನಿಮಿಷ)  ಗಳಿಸಿದ ಏಕೈಕ ಗೋಲಿನಿಂದ ಒಡಿಶಾ ತಂಡವನ್ನು 1-0 ಗೋಲಿನಿಂದ ಮಣಿಸಿದ ಎಟಿಕೆ ಮೂಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು, ಪ್ರಥಮ ಹಾಗೂ ದ್ವಿತಿಯಾರ್ಧಗಳ ಪ್ರತಿಯೊಂದು ಹಂತದಲ್ಲೂ ಒಡಿಶಾ ತಂಡ ಮೇಲುಗೈ ಸಾಧಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ದಾಖಲಾದ ಈ ಗೋಲು ಇಡೀ ಪಂದ್ಯದ ಶ್ರಮವನ್ನು ಬೆಲೆ ಇಲ್ಲದಂತೆ ಮಾಡಿತು.

ಹೈದ್ರಾಬಾದ್-ಜೆಮ್ಯೆಡ್‌ಪುರ ಐಎಸ್‌ಎಲ್‌ ಪಂದ್ಯ1-1 ಡ್ರಾ

ಒಡಿಶಾ ಉತ್ತಮ ಪ್ರದರ್ಶನ: ಬಲಿಷ್ಠ ಎಟಿಕೆ ವಿರುದ್ಧ ಪಂದ್ಯದಲ್ಲಿ ಒಡಿಶಾ ಎಫ್ ಸಿ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿರಬಹುದು, ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಎರಡು ಉತ್ತಮ ಅವಕಾಶಗಳನ್ನು ಒಡಿಶಾ ಕೈ ಚೆಲ್ಲಿತು. ಎಟಿಕೆಎಂಬಿ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. 

 

𝗦𝗧𝗢𝗣𝗣𝗔𝗚𝗘 𝗧𝗜𝗠𝗘 𝗪𝗜𝗡𝗡𝗘𝗥 🚨 https://t.co/tMb9q9XV7G pic.twitter.com/ULZ67vJuEr

— Indian Super League (@IndSuperLeague)

ಮಾರ್ಸೆಲೊ ಪೆರೆರಾ ಗಾಯಗೊಂಡರು. ಆದರೆ ಕೆಲ ಹುತ್ತಿನಲ್ಲೇ ಅಂಗಣ ಪ್ರವೇಶಿಸಿದರು. 24ನೇ ನಿಮಿಷದಲ್ಲಿ ರಾಯ್ ಕೃಷ್ಣ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹೆಡರ್ ಮೂಲಕ ಚಿಮ್ಮಿದ ಚೆಂಡು ಗೋಲ್ ಬಾಕ್ಸ್ ನ ಮೇಲಿಂದ ಸಾಗಿತು. 35ನೇ ನಿಮಿಷದಲ್ಲಿ ಒಡಿಶಾಕ್ಕೆ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು, ಆದರೆ ಜಾಕೋಬ್ ಅವರ ಹೆಡರ್ ಗುರಿ ತಲುಪಲಿಲ್ಲ. ಒಎಫ್ ಸಿ ಇದೇ ರೀತಿಯ ಆಟವನ್ನು ಪ್ರದರ್ಶಿಸಿದರೆ ಗೋಲು ದಾಖಲಾಗುವುದು ಖಚಿತ.

click me!