ಫಿಫಾ ವಿಶ್ವಕಪ್ ಪ್ರವೇಶಿಸುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ತನ್ನ ಹೋರಾಟ ಅಂತ್ಯಗೊಳಿಸಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಮುಗ್ಗರಿಸೋ ಮೂಲಕ ಫಿಫಾ ವಿಶ್ವಕಪ್ ಕನಸು ಭಗ್ನ ಗೊಂಡಿದೆ.
ಮಸ್ಕಟ್(ನ.20) : 2022ರ ಫಿಫಾ ವಿಶ್ವಕಪ್ಗೆ ಪ್ರವೇಶಿಸುವ ಭಾರತ ಫುಟ್ಬಾಲ್ ತಂಡದ ಕನಸು ಭಗ್ನಗೊಂಡಿದೆ. 2ನೇ ಹಂತದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಒಮಾನ್ ವಿರುದ್ಧ 0-1 ಗೋಲಿನ ಅಂತರದಲ್ಲಿ ಭಾರತ ಸೋಲುಂಡಿತು.
undefined
‘ಇ’ ಗುಂಪಿನಲ್ಲಿ ತಾನಾಡಿರುವ 5 ಪಂದ್ಯಗಳಲ್ಲಿ ಭಾರತ 2ರಲ್ಲಿ ಸೋಲು ಕಂಡಿದ್ದು, 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಒಮಾನ್ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲೂ ಭಾರತ ಸೋಲು ಕಂಡಿತ್ತು.
ಮಂಗಳವಾರದ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿದ ಆತಿಥೇಯ ತಂಡವನ್ನು ನಿಯಂತ್ರಿಸಲು ಭಾರತೀಯರು ಹೆಚ್ಚಿನ ಪರಿಶ್ರಮ ವಹಿಸಬೇಕಾಯಿತು.
33ನೇ ನಿಮಿಷದಲ್ಲಿ ಅಲ್ ಖಾಲ್ದಿ ನೀಡಿದ ಪಾಸ್ ಅನ್ನು ಮೊಹ್ಸೆನ್ ಗೋಲು ಪೆಟ್ಟಿಗೆಗೆ ಸೇರಿಸಿ, ಒಮಾನ್‌ಗೆ ಮುನ್ನಡೆ ನೀಡಿದರು. ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಪಡೆದ ಒಮಾನ್, ದ್ವಿತೀಯಾರ್ಧದಲ್ಲೂ ಭಾರತದ ಮೇಲೆ ಒತ್ತಡ ಹೇರಿತು. ಎಷ್ಟೇ ಪ್ರಯತ್ನಿಸಿದರೂ ಭಾರತೀಯ ಆಟಗಾರರಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.