FIFA World cup 25 ವರ್ಷದ ಇತಿಹಾಸದಲ್ಲಿ ಗೂಗಲ್‌ನಲ್ಲಿ ಹೊಸ ದಾಖಲೆ ಬರೆದ ಫೈನಲ್ ಪಂದ್ಯ!

By Suvarna News  |  First Published Dec 19, 2022, 3:58 PM IST

ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ ಗೂಗಲ್‌ನಲ್ಲೂ ಹೊಸ ದಾಖಲೆ ಬರೆದಿದೆ. ಕಳೆದ 25 ವರ್ಷದ ಗೂಗಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಗರಿಷ್ಠ ಸಾಧನೆ ಮಾಡಿದೆ.


ಖತಾರ್(ಡಿ.19): ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಕೊನೆಯವರೆಗೂ ಉಸಿರು ಬಿಗಿ ಹಿಡಿದ ಈ ಪಂದ್ಯದಲ್ಲಿ ಫ್ರಾನ್ಸ್ ಮಣಿಸಿದ ಅರ್ಜೆಂಟೀನಾ ಟ್ರೋಫಿ ಗೆದ್ದುಕೊಂಡಿದೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡದ ಕಾಲ್ಚೆಳಕಕ್ಕೆ ಫ್ರಾನ್ಸ್ ಸೋಲೊಪ್ಪಿಕೊಂಡಿತು. ಈ ಪಂದ್ಯ ಫಿಫಾ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಗೂಗಲ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಹೊಸ ದಾಖಲೆ ಬರೆದಿದೆ. ಕಳೆದ 25 ವರ್ಷಗ ಗೂಗಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಟ್ರಾಫಿಕ್ ಗಳಿಸಿದ ಪಂದ್ಯವಾಗಿ ಹೊರಹೊಮ್ಮಿದೆ.

ಎರಡು ಬಾರಿ ಚಾಂಪಿಯನ್ಸ್ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ಮೂಲಕ ಮಣಿಸಿದ ಅರ್ಜೆಂಟೀನಾ ಟ್ರೋಫಿಗೆ ಮುತ್ತಿಕ್ಕಿತು. 3-3 ಗೋಲುಗಳ ಅಂತರದಲ್ಲಿ ಸಮಬಲ ಸಾಧಿಸಿದ ಪಂದ್ಯ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ಹೊರಬಿದ್ದಿತ್ತು. 4-2 ಅಂತರದಲ್ಲಿ ಅರ್ಜೆಂಟೀನಾ ಗೆಲುವಿನ ನಗೆ ಬೀರಿದೆ. ಫ್ರಾನ್ಸ್‌ನ ಕೈಲಿನ್ ಎಂಬಾಪೆ ಹ್ಯಾಟ್ರಿಕ್ ಗೋಲು ಸಿಡಿಸಿದರೂ ಗೆಲುವಿನ ದಡ ಸೇರಲಿಲ್ಲ.ಪಂದ್ಯದ ರೋಚಕತೆಯಿಂದ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಈ ಪಂದ್ಯವನ್ನು #FIFAWorldCup ಹ್ಯಾಶ್‌ಟ್ಯಾಗ್ ಮೂಲಕ ಗರಿಷ್ಠ ಮಂದಿ ಸರ್ಚ್ ಮಾಡಿದ್ದಾರೆ. 

Tap to resize

Latest Videos

undefined

ಮೆಸ್ಸಿ 2022ರ ಫಿಫಾ ವಿಶ್ವಕಪ್ ಗೆದ್ದೇ ಗೆಲ್ತಾರೆ, ನಿಜವಾಯ್ತು 7 ವರ್ಷದ ಹಿಂದೆ ನುಡಿದ ಭವಿಷ್ಯವಾಣಿ..!

ಗೂಗಲ್ ಇತಿಹಾಸದಲ್ಲಿ ಅತೀ ಹೆಚ್ಚು ಮಂದಿ #FIFAWorldCup ಸರ್ಚ್ ಮಾಡಿದ್ದಾರೆ. ಇದರೊಂದಿಗೆ ಗರಿಷ್ಠ ಟ್ರಾಫಿಕ್ ದಾಖಲೆಯನ್ನೂ ಬರೆದಿದೆ. ಈ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. 

 

Search recorded its highest ever traffic in 25 years during the final of , it was like the entire world was searching about one thing!

— Sundar Pichai (@sundarpichai)

ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ವಿಶ್ವದ ಬಹುತೇಕ ಭಾಗಗಳಲ್ಲಿ ಸರ್ಚ್ ಮಾಡಿದ್ದಾರೆ. ಗೂಗಲ್ ಮೂಲಕ ಪಂದ್ಯದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ, ಭವಿಷ್ಯವಾಣಿ ಕುರಿತು ಮಾಹಿತಿಯನ್ನು ಕೆದಿಕಿದ್ದಾರೆ. 

ವಿಶ್ವ ಚಾಂಪಿಯನ್ ಅರ್ಜೆಂಟೀನಾ
ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಲಿಯೋನೆಲ್‌ ಮೆಸ್ಸಿಯ ವಿಶ್ವಕಪ್‌ ಕನಸು ಕೊನೆಗೂ ನನಸಾಗಿದೆ. 2022ರ ಫಿಫಾ ವಿಶ್ವ ಚಾಂಪಿಯನ್‌ ಆಗಿ ಅರ್ಜೆಂಟೀನಾ ಹೊರಹೊಮ್ಮಿದೆ. 2018ರ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿಶೂಟೌಟ್‌ನಲ್ಲಿ 4-2 ಗೋಲುಗಳಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿತು. 1986ರ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತು. ತಂಡಕ್ಕಿದು 3ನೇ ವಿಶ್ವಕಪ್‌ ಗೆಲುವು. ಸತತ 2ನೇ ಬಾರಿ ವಿಶ್ವಕಪ್‌ ಗೆಲ್ಲುವ ಫ್ರಾನ್ಸ್‌ನ ಕನಸು ಭಗ್ನಗೊಂಡಿತು.

Pic of the Day: ಎಂಬಾಪೆಗೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಸಮಾಧಾನ..!

ಪೆನಾಲ್ಟಿಶೂಟೌಟ್‌ ಹೇಗಿತ್ತು?
ಪೆನಾಲ್ಟಿಶೂಟೌಟ್‌ನಲ್ಲಿ ಫ್ರಾನ್ಸ್‌ ಮೊದಲು ಗೋಲು ಬಾರಿಸುವ ಪ್ರಯತ್ನಕ್ಕಿಳಿಯಿತು. ಎಂಬಾಪೆ ನಿರಾಸೆ ಮೂಡಿಸಲಿಲ್ಲ. ಅರ್ಜೆಂಟೀನಾ ಪರ ಮೆಸ್ಸಿ ಮೊದಲ ಯತ್ನಕ್ಕಿಳಿದು ಗೋಲು ಬಾರಿಸಿದರು. ಆದರೆ ಫ್ರಾನ್ಸ್‌ಗೆ ಅರ್ಜೆಂಟೀನಾದ 6’4 ಅಡಿ ಎತ್ತರದ ಗೋಲ್‌ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ಕಂಟಕರಾದರು. ಕಿಂಗ್‌್ಸಲೆ ಕೊಮನ್‌ ಹಾಗೂ ಆಲುರಿಯನ್‌ ಚೌಮೇನಿ ಗೋಲು ಮಿಸ್‌ ಮಾಡಿದರು. ಅರ್ಜೆಂಟೀನಾ ಪರ ಪೌಲೋ ದ್ಯಬಾಲಾ, ಲಿಯಾಂಡ್ರೊ ಪಾರೆಡೆಸ್‌, ಗೊಂಜಾಲೋ ಮಾಂಟಿಯೆಲ್‌ ಗೋಲು ಬಾರಿಸಿ ಅರ್ಜೆಂಟೀನಾವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು.

click me!