FIFA World Cup: ಬ್ರೆಜಿಲ್‌, ಪೋರ್ಚುಗಲ್‌ಗೆ ಹ್ಯಾಟ್ರಿಕ್‌ ಜಯದ ಗುರಿ

By Kannadaprabha News  |  First Published Dec 2, 2022, 10:18 AM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಪೋರ್ಚುಗಲ್, ಬ್ರೆಜಿಲ್ ತಂಡಗಳಿಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ
ಈಗಾಗಲೇ ಗ್ರೂಪ್‌ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಉಭಯ ತಂಡಗಳು
ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾ ಸವಾಲು ಎದುರಾಗಲಿದೆ


ದೋಹಾ(ಡಿ.02): ಈಗಾಗಲೇ ನಾಕೌಟ್‌ ಹಂತಕ್ಕೆ ಪ್ರವೇಶಿಸಿರುವ ಪೋರ್ಚುಗಲ್‌ ಹಾಗೂ ಬ್ರೆಜಿಲ್‌ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಘಾನಾ, ಉರುಗ್ವೆ, ದಕ್ಷಿಣ ಕೊರಿಯಾ, ಕ್ಯಾಮರೂನ್‌, ಸ್ವಿಜರ್‌ಲೆಂಡ್‌ ಹಾಗೂ ಸರ್ಬಿಯಾ ತಂಡಗಳು ಗುಂಪು ಹಂತದ ಅಂತಿಮ ದಿನ ಗೆಲುವು ಸಾಧಿಸಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿವೆ.

‘ಎಚ್‌’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾ ಸವಾಲು ಎದುರಾಗಲಿದೆ. ರೊನಾಲ್ಡೋ ಪಡೆ ಈ ಪಂದ್ಯವನ್ನು ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ಪ್ರಿ ಕ್ವಾರ್ಟರ್‌ನಲ್ಲಿ ಬ್ರೆಜಿಲ್‌ ವಿರುದ್ಧ ಸೆಣಸಾಟ ತಪ್ಪಿಸಿಕೊಳ್ಳುವ ಗುರಿ ಹೊಂದಿದೆ. ಗುಂಪಿನ ಮತ್ತೊಂದು ಪಂದ್ಯದಲ್ಲಿ ಘಾನಾ ಹಾಗೂ ಉರುಗ್ವೆ ಸೆಣಸಲಿವೆ. ಪೋರ್ಚುಗಲ್‌ ಗೆದ್ದರೆ ಘಾನಾ ಡ್ರಾ ಸಾಧಿಸಿದರೂ ಸಾಕು. ಒಂದು ವೇಳೆ ದ.ಕೊರಿಯಾ ಗೆದ್ದರೆ ಆಗ ಘಾನಾ ಗೆಲ್ಲಲೇಬೇಕಿದೆ. ಇನ್ನು ಘಾನಾ ವಿರುದ್ಧ ಉರುಗ್ವೆ ಗೆದ್ದರಷ್ಟೇ ನಾಕೌಟ್‌ ಹಂತಕ್ಕೇರುವ ಅವಕಾಶ ಪಡೆಯಲಿದೆ. ಉರುಗ್ವೆ ಗೆದ್ದು, ಕೊರಿಯಾ ಸಹ ಗೆದ್ದರೆ ಆಗ ಕೊರಿಯಾ ನಾಕೌಟ್‌ಗೇರುವ ಸಾಧ್ಯತೆ ಹೆಚ್ಚು.

Tap to resize

Latest Videos

undefined

FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

‘ಜಿ’ ಗುಂಪಿನಲ್ಲಿ ಬ್ರೆಜಿಲ್‌ಗೆ ಕ್ಯಾಮರೂನ್‌ ಎದುರಾಗಲಿದೆ. 5 ಬಾರಿ ಚಾಂಪಿಯನ್‌ ತಂಡವನ್ನು ಸೋಲಿಸಿದರೆ ಕ್ಯಾಮರೂನ್‌ಗೆ ಪ್ರಿ ಕ್ವಾರ್ಟರ್‌ನಲ್ಲಿ ಸ್ಥಾನ ಸಿಗಬಹುದು. ಮತ್ತೊಂದು ಪಂದ್ಯದಲ್ಲಿ ಸ್ವಿಜರ್‌ಲೆಂಡ್‌-ಸರ್ಬಿಯಾ ನಡುವೆ ಪೈಪೋಟಿ ಏರ್ಪಡಲಿದೆ. ಕ್ಯಾಮರೂನ್‌ ಸೋತರೆ, ಸ್ವಿಜರ್‌ಲೆಂಡ್‌ ಡ್ರಾ ಸಾಧಿಸಿದರೂ ಸಾಕು.

ಇಂದಿನ ಪಂದ್ಯಗಳು

ಪೋರ್ಚುಗಲ್‌-ದ.ಕೊರಿಯಾ, ರಾತ್ರಿ 8.30ಕ್ಕೆ

ಘಾನಾ-ಉರುಗ್ವೆ, ರಾತ್ರಿ 8.30ಕ್ಕೆ

ಸ್ವಿಜರ್‌ಲೆಂಡ್‌-ಸರ್ಬಿಯಾ, ರಾತ್ರಿ 12.30ಕ್ಕೆ

ಬ್ರೆಜಿಲ್‌ ಕ್ಯಾಮರೂನ್‌, ರಾತ್ರಿ 12.30ಕ್ಕೆ

ಗೋಲು ನಿರಾಕರಿಸಿದ್ದಕ್ಕೆ ಫಿಫಾಗೆ ಫ್ರಾನ್ಸ್‌ ದೂರು

ಅಲ್‌ ರಯ್ಯನ್‌: ಟ್ಯುನೀಶಿಯಾ ವಿರುದ್ಧ ಬುಧವಾರ ನಡೆದ ಪಂದ್ಯದ ಕೊನೆ ನಿಮಿಷದಲ್ಲಿ ಆ್ಯಂಟೋನಿ ಗ್ರೀಜ್‌ಮನ್‌ ಬಾರಿಸಿದ ಗೋಲನ್ನು ಆಫ್‌ಸೈಡ್‌ ಎಂದು ಪರಿಗಣಿಸಿ ಗೋಲು ನಿರಾಕರಿಸಿದ್ದಕ್ಕೆ ಫ್ರಾನ್ಸ್‌ ಫಿಫಾಗೆ ದೂರು ನೀಡಿದೆ. ಈ ಗೋಲು ನಿರಾಕರಣೆಗೊಂಡ ಕಾರಣ 0-1ರಲ್ಲಿ ಫ್ರಾನ್ಸ್‌ ಪರಾಭವಗೊಂಡಿತು. ಆಫ್‌ಸೈಡ್‌ ನಿಯಮವನ್ನು ತಪ್ಪಾಗಿ ಅಳವಡಿಸಿ ಗೋಲು ನಿರಾಕರಿಸಲಾಗಿದೆ ಎಂದು ಫ್ರಾನ್ಸ್‌ ತನ್ನ ದೂರಿನಲ್ಲಿ ತಿಳಿಸಿದೆ.

2023ರ ಮಾರ್ಚ್‌ನೊಳಗೆ ರಾಷ್ಟ್ರೀಯ ಟೇಕ್ವಾಂಡೋ

ಬೆಂಗಳೂರು: ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ ಅನ್ನು 2023ರ ಮಾಚ್‌ರ್‍ನೊಳಗೆ ನಡೆಸಲು ಭಾರತೀಯ ಟೇಕ್ವಾಂಡೋ ಫೆಡರೇಷನ್‌ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ರಾಷ್ಟ್ರೀಯ ಸಬ್‌ ಜೂನಿಯರ್‌, ಕೆಡೆಟ್‌, ಹಿರಿಯರ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿಗೆ ನೀಡಲಾಗಿದೆ. ಮುಂದಿನ ಫೆಡರೇಷನ್‌ ಕಪ್‌ ಆಯೋಜಿಸುವ ಹೊಣೆಯನ್ನು ಹರಿಯಾಣ ಸಂಸ್ಥೆಗೆ ವಹಿಸಲಾಗಿದೆ. ಪ್ರಧಾನ ಕಾರ‍್ಯದರ್ಶಿ ಮಂಗೇಶ್ಕರ್‌, ಮುಖ್ಯ ಆಡಳಿತಾಧಿಕಾರಿ ಪ್ರವೀಣ್‌ ಕುಮಾರ್‌, ರಾಷ್ಟ್ರೀಯ ತಂಡದ ಕೋಚ್‌ ಕೃಷ್ಣಮೂರ್ತಿ ಸಭೆಯಲ್ಲಿದ್ದರು.

click me!