FIFA World Cup 2026: ಬಲಿಷ್ಠ 8 ತಂಡಗಳ ನಡುವೆ ಇನ್ನು ಕ್ವಾರ್ಟರ್‌ ಕದನ

Kannadaprabha News   | Kannada Prabha
Published : Jul 09, 2026, 10:04 AM IST
Argentina Football Team

ಸಾರಾಂಶ

23ನೇ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅಂತಿಮ ಹಂತ ತಲುಪಿದ್ದು, 8 ತಂಡಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಲಿದ್ದು, ಈ ಹಂತದಲ್ಲಿ ಯುರೋಪ್‌ನ 6 ತಂಡಗಳು ಪ್ರಾಬಲ್ಯ ಮೆರೆದಿವೆ.

ಮಿಯಾಮಿ ಗಾರ್ಡನ್ಸ್‌(ಅಮೆರಿಕ): 23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. 48 ತಂಡಗಳ ಪೈಕಿ 40 ತಂಡಗಳು ಗುಂಪು ಹಂತ ಹಾಗೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದು, ಉಳಿದ 8 ತಂಡಗಳ ನಡುವೆ ಕ್ವಾರ್ಟರ್ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ.

ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದ್ದ 5 ಬಾರಿ ಚಾಂಪಿಯನ್‌ ಬ್ರೆಜಿಲ್‌, 4 ಬಾರಿ ಚಾಂಪಿಯನ್‌ ಜರ್ಮನಿ, ಆತಿಥೇಯ ದೇಶಗಳಾದ ಅಮೆರಿಕ, ಮೆಕ್ಸಿಕೊ, ಕೆನಡಾ, ಚೊಚ್ಚಲ ಕ್ವಾರ್ಟರ್‌ ಫೈನಲ್‌ ನಿರೀಕ್ಷೆಯಲ್ಲಿದ್ದ ಈಜಿಪ್ಟ್‌ ಜೊತೆಗೆ ಪರಗ್ವೆ, ಕೊಲಂಬಿಯಾ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿವೆ. ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಮಾಜಿ ಚಾಂಪಿಯನ್‌ಗಳಾದ ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌, ಚೊಚ್ಚಲ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಬೆಲ್ಜಿಯಂ, ನಾರ್ವೆ, ಮೊರಾಕ್ಕೊ, ಸ್ವಿಜರ್‌ಲೆಂಡ್‌ ತಂಡಗಳು ಈಗ ಅಂತಿಮ 8ರ ಕಣದಲ್ಲಿವೆ.

ರೋಚಕ ಸ್ಪರ್ಧೆ ಖಚಿತ:

ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ತಂಡಗಳು ಒಂದಕ್ಕಿಂತ ಇನ್ನೊಂದು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಸತತ 3ನೇ ಫೈನಲ್‌ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್‌ಗೆ ಮೊರಾಕ್ಕೊ ಸವಾಲು ಎದುರಾಗಲಿದೆ. 2010ರ ಚಾಂಪಿಯನ್‌ ಸ್ಪೇನ್‌ ತಂಡ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ಇಂಗ್ಲೆಂಡ್‌ ಹಾಗೂ ನಾರ್ವೆ ತಂಡಗಳ ನಡುವೆ 3ನೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಸ್ವಿಜರ್‌ಲೆಂಡ್‌ ಸವಾಲೊಡ್ಡಲಿದೆ.

ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ

ತಂಡಗಳು ದಿನಾಂಕ ಸಮಯ

ಫ್ರಾನ್ಸ್‌-ಮೊರಾಕ್ಕೊ ಜು.9 ರಾತ್ರಿ 1.30

ಸ್ಪೇನ್‌-ಬೆಲ್ಜಿಯಂ ಜು.10 ರಾತ್ರಿ 12.30

ನಾರ್ವೆ-ಇಂಗ್ಲೆಂಡ್‌ ಜು.11 ರಾತ್ರಿ 12.30

ಅರ್ಜೆಂಟೀನಾ-ಸ್ವಿಜರ್‌ಲೆಂಡ್‌ ಜು.12 ಬೆಳಗ್ಗೆ 6.30

ಕ್ವಾರ್ಟರ್‌ಗೇರಿದ 8ರಲ್ಲಿ ಯುರೋಪ್‌ನ 6 ತಂಡ

ಈ ಬಾರಿ ವಿಶ್ವಕಪ್‌ನಲ್ಲಿ ಯರೋಪ್‌ ತಂಡಗಳ ಪ್ರಾಬಲ್ಯ ಸಾಧಿಸಿವೆ. ಅಂತಿಮ-8ರ ಘಟ್ಟ ಪ್ರವೇಶಿಸಿದ 8 ತಂಡಗಳ ಪೈಕಿ ಯುರೋಪ್‌ ಖಂಡದ 6 ತಂಡಗಳಿವೆ. ಯುರೋಪ್‌ನ ಒಟ್ಟು 16 ತಂಡಗಳು ಈ ಬಾರಿ ವಿಶ್ವಕಪ್‌ ಆಡಿದ್ದವು. ಈ ಪೈಕಿ ಇಂಗ್ಲೆಂಡ್‌, ನಾರ್ವೆ, ಫ್ರಾನ್ಸ್‌, ಸ್ಪೇನ್‌, ಬೆಲ್ಜಿಯಂ, ಸ್ವಿಜರ್‌ಲೆಂಡ್‌ ಕ್ವಾರ್ಟರ್‌ ತಲುಪಿವೆ. ಉಳಿದಂತೆ ದಕ್ಷಿಣ ಅಮೆರಿಕದ 1(ಅರ್ಜೆಂಟೀನಾ), ಆಫ್ರಿಕಾದ 1(ಮೊರಾಕ್ಕೊ) ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿವೆ. ಏಷ್ಯಾ(9 ತಂಡ), ಉತ್ತರ-ಕೇಂದ್ರ ಅಮೆರಿಕ(6), ಓಷ್ಯಾನಿಯಾ(1) ತಂಡಗಳ ಪೈಕಿ ಒಂದೂ ಕ್ವಾರ್ಟರ್‌ ಪ್ರವೇಶಿಸಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್ನಿಂದ ತಂಡ ಸೋಲುತ್ತೆ ಅಂದ್ಕೊಂಡಿದ್ದೆ, ಆದರೆ ದೇವರು ಕೈಬಿಡಲಿಲ್ಲ; ಲಿಯೋನೆಲ್ ಮೆಸ್ಸಿ ಭಾವುಕ ನುಡಿ
ವಿಶ್ವಕಿರೀಟ ಮುಡಿಗೇರಿಸಲಾಗದೆ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರಿನ ವಿದಾಯ!