ಅರ್ಜೆಂಟೀನಾ ಅಬ್ಬರ Vs ಸ್ಪೇನ್ ಗೋಡೆ; FIFA ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲೋರು ಯಾರು?

Kannadaprabha News   | Kannada Prabha
Published : Jul 19, 2026, 08:21 AM IST
FIFA World Cup 2026

ಸಾರಾಂಶ

23ನೇ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿವೆ. ಲಿಯೋನಲ್ ಮೆಸ್ಸಿ ನೇತೃತ್ವದ ಅನುಭವಿ ಅರ್ಜೆಂಟೀನಾ ತಂಡದ ಅಬ್ಬರದ ಆಟಕ್ಕೆ, ಲ್ಯಾಮಿನೆ ಯಮಲ್ ಎಂಬ ಯುವ ಪ್ರತಿಭೆಯುಳ್ಳ ಸ್ಪೇನ್‌ನ ಬಲಿಷ್ಠ ಡಿಫೆನ್ಸ್ ಸವಾಲೊಡ್ಡಲಿದೆ.

ನ್ಯೂಜೆರ್ಸಿ(ಅಮೆರಿಕ): ಒಂದೆಡೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ, ಮತ್ತೊಂದೆಡೆ ಕಳೆದ 16 ವರ್ಷಗಳಿಂದ ಟ್ರೋಫಿ ಕನವರಿಕೆಯಲ್ಲಿರುವ ಸ್ಪೇನ್‌. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರ ಸಾಲಿನಲ್ಲಿರುವ ಲಿಯೋನಲ್‌ ಮೆಸ್ಸಿ ಒಂದೆಡೆಯಾದರೆ, ಇನ್ನೊಂದಿಷ್ಟು ವರ್ಷ ಫುಟ್ಬಾಲ್‌ ಜಗತ್ತನ್ನು ಆಳುವ ಮುನ್ಸೂಚನೆ ನೀಡಿರುವ ಯುವ ಸೂಪರ್‌ಸ್ಟಾರ್‌ ಲ್ಯಾಮಿನೆ ಯಮಲ್‌ ಮತ್ತೊಂದೆಡೆ. 1 ಟ್ರೋಫಿಗಾಗಿ 2 ಫುಟ್ಬಾಲ್‌ ದೈತ್ಯ ಶಕ್ತಿಗಳ ನಡುವೆ ರಣರೋಚಕ ಪೈಪೋಟಿ ನಡೆಯುವ ಹೊತ್ತಿಗೆ, ಈವರೆಗೂ ಒಂದಾಗಿದ್ದ ಫುಟ್ಬಾಲ್‌ ಜಗತ್ತು ಈಗ 2 ಭಾಗವಾಗಿ, 2 ತಂಡಗಳ ಹಾದಿಯಲ್ಲಿ ಸಾಗಲಿದೆ.

23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಇಂದು(ಭಾನುವಾರ) ನಡೆಯಲಿದೆ. ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತೊಂದು ಟ್ರೋಫಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದು, ಸ್ಪೇನ್‌ ತಂಡ 2ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಕಾತರದಲ್ಲಿದೆ.

ಅಬ್ಬರಿಸುತ್ತಿದೆ ಅರ್ಜೆಂಟೀನಾ:

ಟೂರ್ನಿಯುದ್ದಕ್ಕೂ ಅಬ್ಬರದ ಪ್ರದರ್ಶನ ನೀಡಿರುವ ಉಭಯ ತಂಡಗಳು ಅರ್ಹವಾಗಿಯೇ ಫೈನಲ್‌ಗೇರಿವೆ. ಆಡಿರುವ 7 ಪಂದ್ಯಗಳಲ್ಲಿ ಬರೋಬ್ಬರಿ 19 ಗೋಲು ಗಳಿಸಿದೆ. ಸೋಲುವ ಹಂತದಲ್ಲಿದ್ದರೂ ಕಮ್‌ಬ್ಯಾಕ್‌ ಮಾಡಿ ಗೆಲ್ಲುವುದು ತಂಡದ ಕೌಶಲ್ಯ. ಮೆಸ್ಸಿಯ ಮಾಂತ್ರಿಕ ಆಟದ ಜೊತೆಗೆ ಮಿಡ್‌ಲೀಫ್ಡರ್‌ ಎನ್ಜೊ ಫೆರ್ನಾಂಡೆಜ್‌, ಸ್ಟ್ರೈಕರ್‌ ಲೌಟಾರೊ ಮಾರ್ಟಿನೆಜ್‌, ಜೂಲಿಯನ್‌ ಆಲ್ವರೆಜ್‌ ಸೇರಿದಂತೆ ಯುವ ಶಕ್ತಿಗಳು ಈ ವಿಶ್ವಕಪ್‌ನಲ್ಲಿ ಹೆಚ್ಚಿನ ಸದ್ದು ಮಾಡಿದ್ದಾರೆ. ಡಿಫೆನ್ಸ್‌ ಹಾಗೂ ಅಟ್ಯಾಕ್‌ ನಡುವಿನ ಕೊಂಡಿಯಾಗಿ ಬೆಳೆದಿರುವ ಅಲೆಕ್ಸಿಸ್‌ ಮೆಕ್‌ ಆಲಿಸ್ಟರ್‌ ತಂಡದ ಬಲ. ಕ್ರಿಸ್ಟಿಯನ್‌ ರೊಮೆರೊ ವಿಶ್ವದ ಶ್ರೇಷ್ಠ ಡಿಫೆಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದು, ಅರ್ಜೆಂಟೀನಾ ಫೈನಲ್‌ಗೇರಲು ಅವರ ಕೊಡುಗೆ ಅಮೂಲ್ಯವಾಗಿದೆ. ಕಳೆದ ವಿಶ್ವಕಪ್‌ನ ವೈರಲ್‌ ತಾರೆ ಎಮಿಲಿಯಾನೊ ಮಾರ್ಟಿನೆಜ್‌ ಈ ಬಾರಿ ಸುದ್ದಿಯಲ್ಲಿಲ್ಲದಿದ್ದರೂ, ತಂಡದ ಗೆಲುವಿನಲ್ಲಿ ಸದ್ದಿಲ್ಲದೆ ಕೊಡುಗೆ ನೀಡುತ್ತಿದ್ದಾರೆ.

ಸೆಟೆದು ನಿಂತಿದೆ ಸ್ಪೇನ್‌:

ಅರ್ಜೆಂಟೀನಾದ ಅಬ್ಬರಕ್ಕೆ ಹೋಲಿಸಿದರೆ ಸ್ಪೇನ್‌ ತಂಡದ ಆರ್ಭಟ ಕಮ್ಮಿ ಇರಬಹುದು. ಆದರೆ ಯಾವ ಚಾಂಪಿಯನ್‌ ತಂಡವನ್ನೂ ಸೋಲಿಸುತ್ತೇವೆ ಎಂಬಂತೆ ಸೆಟೆದು ನಿಂತಿರುವ ಸ್ಪೇನ್‌, ಪಂದ್ಯದ ಮೊದಲ ನಿಮಿಷದಿಂದಲೇ ಜಾದೂ ಮಾಡುವುದಂತೂ ಖಚಿತ. ತಂಡದ ಪಾಲಿನ ಮಹಾಗೋಡೆ ಉನೈ ಸೈಮನ್‌ ಈ ವಿಶ್ವಕಪ್‌ನ 7 ಪಂದ್ಯಗಳಲ್ಲಿ ಬಿಟ್ಟುಕೊಟ್ಟಿರುವ ಗೋಲು ಕೇವಲ ಒಂದು. ಅವರಿಗೆ ಹೆಗಲು ಕೊಟ್ಟು ನಿಂತಿರುವ ಪ್ರಚಂಡ ಡಿಫೆಂಡರ್‌ಗಳನ್ನು ಹಿಮ್ಮೆಟ್ಟಿಸುವುದು ಅರ್ಜೆಂಟೀನಾಗೆ ಸವಾಲಾಗಬಹುದು. ಮಿಡ್‌ಫೀಲ್ಡ್‌ನಲ್ಲಿರುವ ಯುವ ಸೂಪರ್‌ಸ್ಟಾರ್‌ಗಳು ತಂಡದ ಆಸ್ತಿ. ಅದರಲ್ಲೂ ಲ್ಯಾಮಿನೆ ಯಮಲ್‌ ಎಂಬ ಯುವ ಜಾದೂಗಾರನ ಆಟಕ್ಕೆ ಮನಸೋಲದವರೇ ಇಲ್ಲ. ಪೆಡ್ರೋ ಪೊರ್ರೊ, ಮಿಕೆಲ್‌ ಮೆರಿನೊರಂತಹ ರನ್ನಿಂಗ್‌ ಮಷಿನ್‌ಗಳ ಬಲವೂ ತಂಡಕ್ಕಿದೆ. ಪೆಡ್ರಿ, ಕುಬಾರ್ಸಿಯಂತಹ ಯುವ ಆಟಗಾರರೂ ತಂಡಕ್ಕೆ ಶಕ್ತಿ ತುಂಬಲಿದ್ದಾರೆ.

ಪಂದ್ಯ ಆರಂಭ: ರಾತ್ರಿ 12.30ಕ್ಕೆ

ಪ್ರಸಾರ: ಜೀ5(Zee5), ಯುನೈಟ್‌8 ಸ್ಪೋರ್ಟ್ಸ್‌(Unite8 Sports), ಡಿಡಿ ಸ್ಪೋರ್ಟ್ಸ್‌

ಹೇಗಿತ್ತು ಫೈನಲ್‌ ಹಾದಿ?

ಸ್ಪೇನ್‌

ಗುಂಪು ಹಂತ ಕೇಪ್‌ ವರ್ಡೆ ವಿರುದ್ಧ 0-0 ಡ್ರಾ

ಗುಂಪು ಹಂತ ಸೌದಿ ವಿರುದ್ಧ 4-0 ಗೆಲುವು

ಗುಂಪು ಹಂತ ಉರುಗ್ವೆ ವಿರುದ್ಧ 1-0 ಗೆಲುವು

ಅಂತಿಮ-32 ಆಸ್ಟ್ರಿಯಾ ವಿರುದ್ಧ 3-0 ಜಯ

ಪ್ರಿ ಕ್ವಾರ್ಟರ್‌ ಪೋರ್ಚುಗಲ್‌ ವಿರುದ್ಧ 1-0 ಜಯ

ಕ್ವಾರ್ಟರ್‌ ಬೆಲ್ಜಿಯಂ ವಿರುದ್ಧ 2-1 ಗೆಲುವು

ಸೆಮಿಫೈನಲ್‌ ಫ್ರಾನ್ಸ್‌ ವಿರುದ್ಧ 2-0 ಗೆಲುವು

ಅರ್ಜೆಂಟೀನಾ

ಗುಂಪು ಹಂತ ಅಲ್ಜೀರಿಯಾ ವಿರುದ್ಧ 3-0 ಗೆಲುವು

ಗುಂಪು ಹಂತ ಆಸ್ಟ್ರಿಯಾ ವಿರುದ್ಧ 2-0 ಜಯಭೇರಿ

ಗುಂಪು ಹಂತ ಜೋರ್ಡನ್‌ ಎದುರು 3-1 ಗೆಲುವು

ಅಂತಿಮ-32 ಕೇಪ್‌ ವರ್ಡೆ ವಿರುದ್ಧ 3-2 ಜಯ

ಪ್ರಿ ಕ್ವಾರ್ಟರ್‌ ಈಜಿಪ್ಟ್‌ ವಿರುದ್ಧ 3-2 ಗೆಲುವು

ಕ್ವಾರ್ಟರ್‌ ಸ್ವಿಜರ್‌ಲೆಂಡ್‌ ವಿರುದ್ಧ 3-1 ಜಯ

ಸೆಮಿಫೈನಲ್‌ ಇಂಗ್ಲೆಂಡ್‌ ವಿರುದ್ಧ 2-1 ಗೆಲುವು

ಅರ್ಜೆಂಟೀನಾ ಹೋಲಿಕೆ ಸ್ಪೇನ್

19 ಹೊಡೆದ ಗೋಲು 13

07 ಬಿಟ್ಟುಕೊಟ್ಟ ಗೋಲು 01

4772 ಪಾಸ್‌ 4592

4324 ಯಶಸ್ವಿ ಪಾಸ್‌ 4156

91% ಪಾಸ್‌ ನಿಖರತೆ 91%

02 ಕ್ಲೀನ್‌ಶೀಟ್‌ 06

06 ಹಳದಿ ಕಾರ್ಡ್‌ 05

00 ರೆಡ್‌ ಕಾರ್ಡ್‌ 00

ಅರ್ಜೆಂಟಿನಾ ಸಾಮರ್ಥ್ಯ

1. ಗೋಲ್‌ ಮಷಿನ್‌ ಮೆಸ್ಸಿಯ ಅಮೋಘ ಆಟ

2. ಮಿಡ್‌ಫೀಲ್ಡರ್ ಎನ್ಜೊ, ಅಲೆಕ್ಸಿಸ್‌, ಪರೆಡೆಸ್‌ ಬಲ

3. ಮೆಸ್ಸಿಗೆ ಮಾರ್ಟಿನೆಜ್‌, ಆಲ್ವರೆಜ್‌ ಬೆಂಬಲ.

ದೌರ್ಬಲ್ಯ

1. ಮೆಸ್ಸಿಯ ಮೇಲೆ ಹೆಚ್ಚಿನ ಅವಲಂಬನೆ

2. ಆರಂಭದಲ್ಲಿ ಸುಲಭದಲ್ಲಿ ಗೋಲು ಬಿಟ್ಟುಕೊಡುತ್ತೆ

3. ಗೋಲಿ ಮಾರ್ಟಿನೆಜ್‌ ಹಿಂದಿನ ಲಯದಲ್ಲಿಲ್ಲ

ಸ್ಪೇನ್‌ ಪ್ರಾಬಲ್ಯ

1. ಪ್ರತಿ ಗೋಲಿನಲ್ಲೂ ಲ್ಯಾಮಿನೆ ಯಮಲ್‌ ಪಾತ್ರ.

2. ಪ್ರಚಂಡ ಗೋಲಿ ಉನೈ. ನೀಡಿದ್ದು ಒಂದೇ ಗೋಲು.

3. ಪ್ರತಿ ಆಟಗಾರರಲ್ಲೂ ಅದ್ಭುತ ಪಾಸಿಂಗ್‌ ಸಾಮರ್ಥ್ಯ

ದೌರ್ಬಲ್ಯ

1. ಗೋಲು ಗಳಿಸುವ ಅವಕಾಶ ಸೃಷ್ಟಿ ಕಡಿಮೆ.

2. ಮೆಸ್ಸಿ ಕೇಂದ್ರೀಕರಿಸಿ ಇತರರ ಕಡೆಗಣನೆ ಸಾಧ್ಯತೆ

2. ಆಕ್ರಮಣಕಾರಿ ಆಟವಾಡದೆ ಡಿಫೆನ್ಸ್‌ಗೆ ಒತ್ತು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅವನಾಗ ಮಗು, ಈಗ ಫೈನಲ್‌ನಲ್ಲಿ ಎದುರಾಳಿ' - ವೈರಲ್ ಫೋಟೋ ಬಗ್ಗೆ ಕೊನೆಗೂ ಮೌನ ಮುರಿದ ಲಿಯೋನೆಲ್ ಮೆಸ್ಸಿ!
Golden Boot: ಮೆಸ್ಸಿನಾ? ಎಂಬಾಪೆನಾ? ಗೋಲು, ಅಸಿಸ್ಟ್ ಎರಡೂ ಸಮವಾದ್ರೆ ಗೋಲ್ಡನ್ ಬೂಟ್ ಯಾರಿಗೆ? ಫಿಫಾ ರೂಲ್ಸ್ ಹೀಗಿದೆ