ಜಾಕೆಟ್ ತೆಗೆಯಲ್ಲ, ಸ್ಟೇಡಿಯಂಗೆ ಹೋಗಲ್ಲ; ಅರ್ಜೆಂಟೀನಾ ಗೆಲುವಿಗಾಗಿ ಅಧ್ಯಕ್ಷರ ವಿಚಿತ್ರ ನಂಬಿಕೆ ವೈರಲ್

Kannadaprabha News   | Kannada Prabha
Published : Jul 18, 2026, 01:06 PM IST
Javier Milei

ಸಾರಾಂಶ

ತಂಡ ಗೆಲ್ಲುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಅರ್ಜೆಂಟೀನಾದ ಅಧ್ಯಕ್ಷ ಹಾವಿಯರ್ ಮಿಲೈ, ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ನಿರಾಕರಿಸಿದ್ದಾರೆ. 1990ರಿಂದಲೂ ಅರ್ಜೆಂಟೀನಾದ ಅಧ್ಯಕ್ಷರು ಈ ಸಂಪ್ರದಾಯವನ್ನು ಪಾಲಿಸುತ್ತಿದ್ದು, ಲ್ಯಾಟಿನ್ ಅಮೆರಿಕದಲ್ಲಿ ಇಂತಹ ನಂಬಿಕೆಗಳು ಸಾಮಾನ್ಯವಾಗಿದೆ.

ಬ್ಯೂನಸ್‌ ಐರಿಸ್‌(ಅರ್ಜೆಂಟೀನಾ): ಮನೆಯಲ್ಲಿ ಕೂತು ಪಂದ್ಯ ವೀಕ್ಷಿಸಿದರೆ ಅರ್ಜೆಂಟೀನಾ ಗೆಲ್ಲುತ್ತೆ ಎಂಬ ಮೂಢನಂಬಿಕೆಯ ಕಾರಣದಿಂದಾಗಿ ಈ ಬಾರಿ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಅರ್ಜೆಂಟೀನಾ ಅಧ್ಯಕ್ಷ ಹಾವಿಯರ್ ಮಿಲೈ ನಿರಾಕರಿಸಿದ್ದಾರೆ.

ತಮ್ಮ ಆಪ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೂಡಿ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಹೋಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಿಲೈ, ‘ನಾನು ಕ್ರೀಡಾಂಗಣಕ್ಕೆ ಹೋಗಲ್ಲ. ಎಲ್ಲಾ 7 ಪಂದ್ಯಗಳನ್ನು ಮನೆಯಲ್ಲೇ ಕೂತು ವೀಕ್ಷಿಸಿದ್ದೇನೆ. ಚಳಿ ಇರುವುದರಿಂದ ಜಾಕೆಟ್‌ ಧರಿಸಿರುತ್ತೇನೆ. ಸ್ವಿಜರ್‌ಲೆಂಡ್‌ ವಿರುದ್ಧ ಪಂದ್ಯದಲ್ಲಿ ಜಾಕೆಟ್‌ ತೆಗೆದಾಗ ನಮ್ಮ ವಿರುದ್ಧ ಅವರು ಗೋಲು ಬಾರಿಸಿದ್ದರು. ಹಾಗಾಗಿ ನಾನು ಜಾಕೆಟ್‌ ಧರಿಸಿಯೇ ಇರುತ್ತೇನೆ’ ಎಂದಿದ್ದಾರೆ.

ಮೈದಾನಕ್ಕಿಲ್ಲ ಅಧ್ಯಕ್ಷರು:

ಅರ್ಜೆಂಟೀನಾದ ಅಧ್ಯಕ್ಷರು ಮಹತ್ವದ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬರುವುದನ್ನು ತಪ್ಪಿಸಿಕೊಳ್ಳುವುದು ಇದು ಮೊದಲೇನಲ್ಲ. 1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್‌ ವಿರುದ್ಧ ಅರ್ಜೆಂಟೀನಾ ಸೋತ ಪಂದ್ಯವನ್ನು ಆಗಿನ ಅಧ್ಯಕ್ಷ ಕಾರ್ಲೊಸ್‌ ಮೆನೆಮ್‌ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ್ದರು. ಆ ಬಳಿಕ ಯಾವುದೇ ಅಧ್ಯಕ್ಷರು ಮೈದಾನಕ್ಕೆ ಆಗಮಿಸಿಲ್ಲ.

ಮೂಢನಂಬಿಕೆ ಹೆಚ್ಚು:

ಲ್ಯಾಟಿನ್‌ ಅಮೆರಿಕದಲ್ಲಿ, ಅದರಲ್ಲೂ ಅರ್ಜೆಂಟೀನಾದಲ್ಲಿ ಮೂಢನಂಬಿಕೆ ಹೆಚ್ಚಾಗಿದೆ. ಕೆಲವರು ಪ್ರತಿ ಪಂದ್ಯಕ್ಕೂ ಒಂದೇ ಬಟ್ಟೆಯನ್ನು, ತೊಳೆಯದೆ ಧರಿಸುತ್ತಾರೆ. ಕೆಲವರು ಎಲ್ಲಾ ಪಂದ್ಯವನ್ನು ಒಂದೇ ಸ್ಥಳದಲ್ಲಿ ನಿಂತು ನೋಡುತ್ತಾರೆ. ಮೊದಲ ಪಂದ್ಯವನ್ನು ಬಸ್‌ ನಿಲ್ದಾಣ, ಬಾತ್‌ರೂಮ್‌, ಮನೆಯ ಹೊರಭಾಗದಲ್ಲಿ ವೀಕ್ಷಿಸಿದ್ದರೆ, ಉಳಿದೆಲ್ಲಾ ಪಂದ್ಯಗಳನ್ನು ಅಲ್ಲೇ ನಿಂತು ನೋಡುವ ಪರಿಪಾಟವಿದೆ.

1958ರ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ನಲ್ಲಿ ಪೀಲೆ ತೊಟ್ಟಿದ್ದ ಜೆರ್ಸಿ ₹47 ಕೋಟಿಗೆ ಹರಾಜು

ನ್ಯೂಯಾರ್ಕ್‌: ಈ ಬಾರಿ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ನ ಸಂದರ್ಭದಲ್ಲೇ ಬ್ರೆಜಿಲ್‌ ಫುಟ್ಬಾಲ್‌ ದಂತಕಥೆ ಪೀಲೆ ಅವರು 1958ರ ವಿಶ್ವಕಪ್‌ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ ನಂ.10 ಹರಾಜಿನಲ್ಲಿ ದಾಖಲೆಯ 47.2 ಕೋಟಿ ರು.ಗೆ ಬಿಕರಿಯಾಗಿದೆ. ಇದು ಇದುವರೆಗೆ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಜೆರ್ಸಿ ಎನಿಸಿಕೊಂಡಿದೆ. 2022ರಲ್ಲಿ ಅರ್ಜೇಂಟೀನಾದ ಡಿಯಾಗೋ ಮರಡೋನಾ ಅವರ ಜೆರ್ಸಿ 89.56 ಕೋಟಿ ರು.ಗೆ ಮಾರಾಟವಾಗಿತ್ತು.

1958ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬ್ರೆಜಿಲ್‌ ತಂಡ ಸ್ವೀಡನ್‌ ವಿರುದ್ಧ 5-2 ಅಂತರದಲ್ಲಿ ಗೆದ್ದಿತ್ತು. ಆಗ ಪೀಲೆ ಕೇವಲ 17 ವರ್ಷದವರಾಗಿದ್ದರು. ಅವರು ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲಿಯೋನೆಲ್ ಮೆಸ್ಸಿ ಸ್ಪೇನ್‌ಗೆ ಆಡುವುದನ್ನು ತಪ್ಪಿಸಿತ್ತು ಆ ಫೋನ್‌ ಕರೆ! ಬಾಲ್ಯದಲ್ಲೇ ಫುಟ್ಬಾಲ್ ದಿಗ್ಗಜನ ದಿಕ್ಕು ಬದಲಿಸಿತ್ತು ಆ ಘಟನೆ
'ನಿಮ್ಮಿಂದಲೇ ಇದು ಸಾಧ್ಯವಾಯಿತು' - 2026ರ ವಿಶ್ವಕಪ್ ಯಶಸ್ಸಿಗೆ ಟ್ರಂಪ್‌ಗೆ ಧನ್ಯವಾದ ಹೇಳಿದ ಫಿಫಾ ಅಧ್ಯಕ್ಷ!