FIFA World Cup ಜಪಾನ್‌ ಗನ್‌ಗೆ ಉರುಳಿದ ಸ್ಪೇನ್‌, ಮ್ಯಾಚ್‌ ನೋಡ್ತಿದ್ದ 4 ಬಾರಿ ಚಾಂಪಿಯನ್ ಜರ್ಮನಿ ಸ್ಟನ್‌!

By Naveen Kodase  |  First Published Dec 2, 2022, 11:03 AM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್, ಜಪಾನ್ ನಾಕೌಟ್‌ಗೆ ಲಗ್ಗೆ
ಬಲಿಷ್ಠ ಸ್ಪೇನ್‌ಗೆ ಸೋಲುಣಿಸಿದ ಜಪಾನ್ ಫುಟ್ಬಾಲ್ ತಂಡ
ಗ್ರೂಪ್ ಹಂತದಲ್ಲೇ ಹೊರಬಿದ್ದ 4 ಬಾರಿಯ ಚಾಂಪಿಯನ್ ಜರ್ಮನಿ


ದೋಹಾ(ಡಿ.02): ಅಚ್ಚರಿಯ ಫಲಿತಾಂಶಗಳಿಗೆ ಹೆಸರಾದ ಜಪಾನ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅದ್ಭುತ ಗೆಲುವು ದಾಖಲಿಸುವ ಮೂಲಕ ಅಂತಿಮ 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಜಪಾನ್ ತಂಡವು ಸ್ಪೇನ್‌ ಎದುರು 2-1 ಗೋಲುಗಳ ಅಂತರದ ಗೆಲುವು ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಸ್ಪೇನ್‌ ತಂಡವು 'ಇ' ಗುಂಪಿನಲ್ಲಿ ಎರಡನೇ ತಂಡವಾಗಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಜಪಾನ್ ಸೋಲಬಹುದು ಎಂದು ನಿರೀಕ್ಷಿಸುತ್ತಿದ್ದ 4 ಬಾರಿಯ ಚಾಂಪಿಯನ್‌ ಜರ್ಮನಿಗೆ ಶಾಕ್ ಎದುರಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.

ತಾನಾಡಿದ ಮೊದಲ ಪಂದ್ಯದಲ್ಲೇ ಜಪಾನ್ ತಂಡವು ಬಲಿಷ್ಠ ಜರ್ಮನಿಗೆ ಸೋಲಿನ ಶಾಕ್ ನೀಡಿತ್ತು. ಇದಾದ ಬಳಿಕ 'ಗ್ರೂಪ್ ಆಫ್ ಡೆತ್' ಎನಿಸಿಕೊಂಡಿರುವ 'ಇ' ಗುಂಪಿನಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದೇ ಗುರುತಿಸಿಕೊಂಡಿರುವ ಸ್ಪೇನ್‌ ಎದುರು ಜಪಾನ್‌ ಅಮೋಘ ಗೆಲುವು ದಾಖಲಿಸುವ ಮೂಲಕ ನಾಕೌಟ್ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕೋಸ್ಟರಿಕಾ ಎದುರು ಜರ್ಮನಿ 4-2 ಅಂತರದ ಗೆಲುವು ಸಾಧಿಸಿತಾದರೂ, ಪ್ರಿ ಕ್ವಾರ್ಟರ್ ಫೈನಲ್‌ಗೇರಲು ವಿಫಲವಾಯಿತು. ಸ್ಪೇನ್ ಹಾಗೂ ಜರ್ಮನಿ ತಂಡಗಳೆರಡು 'ಇ' ಗುಂಪಿನಲ್ಲಿ ತಲಾ 4 ಅಂಕಗಳನ್ನು ಗಳಿಸಿತಾದರೂ ಸ್ಪೇನ್ ತಂಡವು ಗ್ರೂಪ್ ಹಂತದಲ್ಲಿ ಹೆಚ್ಚು ಗೋಲು ಬಾರಿಸಿದ್ದರಿಂದಾಗಿ ನಾಕೌಟ್ ಹಂತಕ್ಕೇರಲು ಯಶಸ್ವಿಯಾಯಿತು.

Tap to resize

Latest Videos

undefined

ವಿಶ್ವಕಪ್‌ನಲ್ಲಿ ಟೈ ಬ್ರೇಕರ್‌ ನಿಯಮ ಬಳಕೆ ಹೇಗೆ?

ಗುಂಪು ಹಂತದಲ್ಲಿ ಎರಡು ತಂಡಗಳು ಅಂಕಗಳಲ್ಲಿ ಸಮಬಲ ಸಾಧಿಸಿದಾಗ ಮೊದಲು ಗೋಲು ವ್ಯತ್ಯಾಸವನ್ನು ಪರಿಗಣಿಸಲಾಗುತ್ತದೆ. ಇದರಲ್ಲೂ ಸಮಬಲ ಸಾಧಿಸಿದರೆ ಆಗ ಮೂರು ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ಗೋಲುಗಳ ಸಂಖ್ಯೆಯನ್ನು ಲೆಕ್ಕೆಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದೂ ಸಮಗೊಂಡರೆ ಆಗ ಒಟ್ಟು ಮುಖಾಮುಖಿಯಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಪರಿಗಣನೆಗೆ ಬರಲಿದೆ. ಆ ದಾಖಲೆಯೂ ಒಂದೇ ರೀತಿಯಲ್ಲಿದ್ದರೆ, ಆಗ ಗುಂಪು ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಯಾವ ತಂಡ ಕಡಿಮೆ ತಪ್ಪುಗಳನ್ನು ಮಾಡಿ, ಕನಿಷ್ಠ ಹಳದಿ ಕಾರ್ಡ್‌ಗಳನ್ನು ಪಡೆದಿದೆ ಎನ್ನುವುದು ಲೆಕ್ಕಕ್ಕೆ ಬರಲಿದೆ. ಇದರಲ್ಲೂ ಸಮಬಲ ಕಂಡುಬಂದರೆ ಕೊನೆಗೆ ಒಂದು ಪೆಟ್ಟಿಗೆಯೊಳಗೆ ಎರಡೂ ತಂಡಗಳ ಹೆಸರಿರುವ ಚೆಂಡುಗಳನ್ನು ಇರಿಸಿ ಫಿಫಾದ ಆಡಳಿತ ಮಂಡಳಿ ಸದಸ್ಯರೊಬ್ಬರಿಂದ ಒಂದು ಚೆಂಡನ್ನು ಹೊರತೆಗಿಸಲಾಗುತ್ತದೆ. ಲಾಟರಿಯಲ್ಲಿ ಯಾವ ತಂಡದ ಹೆಸರು ಬರುತ್ತದೆಯೋ ಆ ತಂಡ ಮುನ್ನಡೆಯಲಿದೆ.

FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

ಪಂದ್ಯ ಹೇಗಿತ್ತು..?

ಜಪಾನ್ ಹಾಗೂ ಸ್ಪೇನ್ ನಡುವಿನ ಪಂದ್ಯದಲ್ಲಿ ಅಲ್ವಾರೊ ಮೊರಾಟ ಸ್ಪೇನ್‌ ಪರ ಮೊದಲ ಗೋಲು ದಾಖಲಿಸಿದರು. ಇನ್ನು ದ್ವಿತಿಯಾರ್ಧದಲ್ಲಿ ಜಪಾನ್ ತಂಡವು ನಾಟಕೀಯ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿತು. ಜಪಾನ್ ಪರ ರಿಸ್ತೊ ಡೋನ್ ಹಾಗೂ ತನಾಕ ಮಿಂಚಿನ ಗೋಲು ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇದೀಗ ಸ್ಪೇನ್‌ ತಂಡವು ಸೂಪರ್ 16 ಹಂತದಲ್ಲಿ ಮೊರಾಕ್ಕೊ ತಂಡವನ್ನು ಎದುರಿಸಿದರೆ, ಜಪಾನ್ ತಂಡವು ಕ್ರೊವೇಷಿಯಾ ತಂಡವನ್ನು ಎದುರಿಸಲಿದೆ.

click me!