ಸ್ಟೇಡಿಯಂನಲ್ಲಿ ಎಣ್ಣೆ ಕುಡಿಯೋ ಹಾಗಿಲ್ಲ, ಚಿಕ್ಕ ಬಟ್ಟೆ ಹಾಕೋ ಹಾಗಿಲ್ಲ ಎನ್ನುವ ಎಲ್ಲಾ ಕಾನೂನುಗಳ ಮಧ್ಯೆ ಕತಾರ್ ಮತ್ತೊಂದು ನಿಯಮ ತಂದಿದೆ. ವಿಶ್ವಕಪ್ ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಕೂಗಾಡುವಂತಿಲ್ಲ ಎಂದು ಇಂಗ್ಲೆಂಡ್‌ನ ಅಭಿಮಾನಿಗಳುಗೆ ಕತಾರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ದೋಹಾ (ನ.23): ಕತಾರ್‌ನಲ್ಲಿ ಯಾವ ದೇಶದ ಅಭಿಮಾನಿಗಳಿಗೆ ಕಷ್ಟವಾಗ್ತಿದ್ಯೋ ಗೊತ್ತಿಲ್ಲ. ಇಂಗ್ಲೆಂಡ್ ಫುಟ್‌ಬಾಲ್ ಫ್ಯಾನ್ಸ್‌ಗೆ ಮಾತ್ರ ಹೋದಲೆಲ್ಲಾ ನಿಯಮಗಳೇ..! ಸ್ಟೇಡಿಯಂನಲ್ಲಿ ಎಣ್ಣೆ ಕುಡಿಯೋ ಹಾಗಿಲ್ಲ. ಚಿಕ್ಕ ಬಟ್ಟೆ, ಬಿಕಿನಿ ಹಾಕೊಂಡು ಬರೋಹಾಗಿಲ್ಲ.. ಇವೆಲ್ಲದರ ನಡುವೆ ಇಂಗ್ಲೆಂಡ್‌ನ ಅಭಿಮಾನಿಗಳೀಗ ತಮ್ಮ ತಂಡವನ್ನು ಬೆಂಬಲಿಸಿ ಜೋರಾಗಿ ಕಿರುಚಾಡುವಂತೆಯೂ ಇಲ್ಲ ಎಂದು ಕತಾರ್ ಹೇಳಿದೆ. ವಿಶ್ವಕಪ್ ವೇಳೆ ನಿಮ್ಮ ತಂಡಕ್ಕೆ ಬೆಂಬಲ ನೀಡಲು ತೊಂದರೆ ಇಲ್ಲ, ಆದರೆ, ಸಾರ್ವಜನಿಕ ಪ್ರದೇಶದಲ್ಲಿ ಅತಿಯಾಗಿ ಕಿರುಚಾಡಿದರೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಕತಾರ್ ಎಚ್ಚರಿಸಿದೆ. ಸಾಮಾನ್ಯವಾಗಿ ಇಂಗ್ಲೆಂಡ್ ಫುಟ್‌ಬಾಲ್ ಅಭಿಮಾನಿಗಳು ಪಂದ್ಯ ಗೆದ್ದ ಬಳಿಕ ಮನಗೆ ಹೋಗುವ ಮಾರ್ಗದುದ್ದಕ್ಕೂ ಚೀರಾಡುತ್ತಲೇ ಹೋಗುತ್ತಾರೆ. ಮೆಟ್ರೋ ಇರಲಿ ಬಸ್ ಇರಲಿ ಹಾಡುತ್ತಾ, ಕುಣಿಯುತ್ತಾ ಸಾಗುತ್ತಾರೆ. ಆದರೆ, ಕತಾರ್ ಇದು ನನ್ನ ದೇಶದ ಸಂಸ್ಕೃತಿಯಲ್ಲ ಎಂದಿದೆ. ಇರಾನ್ ವಿರುದ್ಧ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದ ಬಳಿಕ, ತಂಡದ ಅಭಿಮಾನಿಯೊಬ್ಬ ಮೆಟ್ರೋದಲ್ಲಿ ಜೋರಾಗಿ ಚೀರಾಡುತ್ತಾ, ಹಾಡು ಹೇಳುತ್ತಾ ಸಂಭ್ರಮಿಸಿದ್ದಾರೆ. ಇದನ್ನು ನೋಡಿದ ಕತಾರ್ ಪೊಲೀಸ್ ಆತನನ್ನು ಹಿಡಿದು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ಥ್ರಿ ಲಯ್ಸನ್ ಎಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡ್ ಫುಟ್‌ಬಾಲ್ ತಂಡಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಲ್ಲೂ ವಿಶ್ವಕಪ್ ವೇಳೆ ಅವರಿಗೆ ಬೆಂಬಲಿಸಲೆಂದೇ ಕೆಲವೊಂದು ಗುಂಪುಗಳು ಪ್ರಯಾಣ ಮಾಡುತ್ತವೆ. ಸಾರ್ವಜನಿಕವಾಗಿ ಅವರು ಹಾಡು ಹೇಳುತ್ತಾ, ತಂಡವನ್ನು ಬೆಂಬಲಿಸುತ್ತಾರೆ. ಆದರೆ, ಗಲ್ಫ್ ರಾಷ್ಟ್ರದ ಸಾರ್ವಜನಿಕ ಸಾರಿಗೆಗಳಲ್ಲಿ ಈ ರೀತಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಇಂಗ್ಲೆಂಡ್ ಮಾತ್ರವಲ್ಲ, ಈಕ್ವಾಡರ್ ತಂಡದ ಅಭಿಮಾನಿಗಳಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ತಂಡವನ್ನು ಸೋಲಿಸಿದ ಬಳಿಕ ಈಕ್ವಡಾರ್ ತಂಡದ ಅಭಿಮಾನಿಗಳು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದ್ದರು. ಇದು ಕತಾರ್ ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.
ಗದ್ದಲದ ಬಗ್ಗೆ ಸಿಟ್ಟಿಗೆದ್ದ ಸ್ಥಳೀಯರು, ಗಸ್ತು ತಿರುಗುವ ಅಧಿಕಾರಿಗಳಿಗೆ ಮಧ್ಯಪ್ರವೇಶಿಸುವಂತೆ ಸೂಚನೆ ನೀಡಿದ್ದರು. ಇದರಿಂದಾಗಿ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಸ್ಥಳದಲ್ಲಿ ಚೀರಾಡಬೇಡಿ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ಇದು ಇಂಗ್ಲೆಂಡ್ ಫ್ಯಾನ್ಸ್‌ಗಳ ಕಳವಳಕ್ಕೆ ಕಾರಣವಾಯಿತು. ಅಂದಾಜು 3 ಸಾವಿರ ಪೌಂಡ್ ನೀಡಿ ಇಂಗ್ಲೆಂಡ್‌ನಿಂದ ಕತಾರ್‌ಗೆ ಬಂದಿದ್ದೇನೆ. ನನ್ನ ತಂಡ ಗೆದ್ದ ಬಳಿಕ ನಾನು ಚೀರಾಡುತ್ತೇನೆ, ಸಂಭ್ರಮದಿಂದ ಹಾಡುತ್ತೇನೆ. ಅಭಿಮಾನಿಗಳನ್ನು ಶಾಂತ ರೀತಿಯಿಂದ ಇರಿ ಎಂದು ಹೇಳಿರುವುದು ಮೂರ್ಖತನದ ನಿರ್ಧಾರ ಎಂದು 28 ವರ್ಷದ ಬ್ರಾಂಡ್‌ನ ಬಿರ್ಟಜ್ ಹೇಳಿದ್ದಾರೆ.
FIFA WORLD CUP 2022: ನಾಲ್ಕು ಬಾರಿಯ ವಿಶ್ವಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್!
ಇದು ಫುಟ್‌ಬಾಲ್‌ನ ಉತ್ಸವ. ವಿಶ್ವದ ಅಭಿಮಾನಿಗಳಿಗೆ ಕತಾರ್ ಸ್ವಾಗತ ನೀಡಿದೆ. ವಿಶ್ವಕಪ್ ಎನ್ನುವುದು ನಮ್ಮಂಥ ಅಭಿಮಾನಿಗಳಿಗೆ ಎಷಟು ಮಹತ್ವದ ಟೂರ್ನಿ ಎನ್ನುವುದು ಅವರು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಯಾರಲ್ಲಿ ಇಷ್ಟು ಹಣವಿದೆ, ಯಾಕಂದ್ರೆ... ಮ್ಯಾಂಚೆಸ್ಟರ್ ಯುನೈಟೆಡ್ ಮಾರಾಟಕ್ಕಿದೆ!
ಕತಾರ್ ದೇಶದ ನಿವಾಸಿಗಳು ಫುಟ್‌ಬಾಲ್ ಅಭಿಮಾನಿಗಳಿಂದ ತೊಂದರೆ ಆಗುತ್ತಿದೆ ಎಂದು ದೂರು ನೀಡುತ್ತಿದ್ದಾರಂತೆ. ಆದರೆ, ವಿಶ್ವವೇ ಅವರ ಟೂರ್ನಿಯನ್ನು ನೋಡುತ್ತಿದೆ. ಎಲ್ಲರೂ ಹೇಳುವ ಒಂದೇ ಮಾತು ಏನೆಂದರೆ, ಕತಾರ್‌ನಲ್ಲಿ ವಿಶ್ವಕಪ್ ನಡೆಯಬಾರದಿತ್ತು ಎನ್ನುವುದು ಎಂದು ಹೇಳಿದ್ದಾರೆ. ಈಗಾಗಲೇ ಸ್ಟೇಡಿಯಂನಲ್ಲಿ ಬಿಯರ್‌ಗಳನ್ನು ಸೇವಿಸಲು ನಿರ್ಬಂಧ ವಿಧಿಸಲಾಗಿದೆ. ಈಗಾಗಲೆ ಅಭಿಮಾನಿಗಳಿಗೂ ಅವರು ತಮ್ಮದೇ ಆದ ರೂಲ್‌ಗಳನ್ನು ಮಾಡುತ್ತಿದ್ದಾರೆ ಎಂದು ಬ್ರಾಂಡನ್ ಆರೋಪಿಸಿದ್ದಾರೆ. ಇನ್ನು ಜರ್ಮನಿ ತಂಡದ ಅಭಿಮಾನಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಅವರು ಏನು ಬೇಕಾದರೂ ಹೇಳಲಿ ನಾವಂತೂ ಹಾಡಲಿದ್ದೇವೆ. ಬಿಯರ್ ಇಲ್ಲದೆ ಫುಟ್‌ಬಾಲ್ ನೋಡುವುದೇ ಅಸಾಧ್ಯ. ಇನ್ನು ಹಾಡುಗಳು ಇರದೇ ಇದ್ದರೆ ಫುಟ್‌ಬಾಲ್‌ಗೆ ಬೆಲೆ ಇಲ್ಲ' ಎಂದಿದ್ದಾರೆ.