FIFA World Cup 2022: ಮೋಸದಾಟದ ಆರೋಪದ ನಡುವೆಯೂ ಕತಾರ್‌ ವಿರುದ್ಧ ಗೆದ್ದ ಈಕ್ವಡಾರ್‌!

By Santosh Naik  |  First Published Nov 21, 2022, 11:15 AM IST

ಉದ್ಘಾಟನಾ ಪಂದ್ಯದಲ್ಲಿ ಸೋಲು ಕಾಣಲು ಈಕ್ವಾಡರ್‌ ತಂಡಕ್ಕೆ ಅಂದಾಜು 60 ಲಕ್ಷ ರೂಪಾಯಿ ಲಂಚ ನೀಡಿದ ಅರೋಪದ ವಿವಾದದ ನಡುವೆಯೂ, ಫಿಫಾ ವಿಶ್ವಕಪ್‌ನ 2022ನ ಉದ್ಘಾಟನಾ ಪಂದ್ಯದಲ್ಲಿ ಈಕ್ವಡಾರ್‌ ತಂಡ 2-0 ಗೋಲುಗಳಿಂದ ಆತಿಥೇಯ ಕತಾರ್‌ ತಂಡವನ್ನು ಮಣಿಸಿದೆ.
 


ದೋಹಾ (ನ.21): ಫಿಫಾ ವಿಶ್ವಕಪ್‌ನ 92 ವರ್ಷದ ಇತಿಹಾಸದಲ್ಲಿ ಎಂದಿಗೂ ಆತಿಥ್ಯ ರಾಷ್ಟ್ರ ತನ್ನ ಮೊದಲ ಪಂದ್ಯದಲ್ಲಿಯೇ ಸೋಲು ಕಂಡ ಉದಾಹರಣೆಯಿಲ್ಲ. ಆದರೆ, ಭಾನುವಾರ ಈ ದಾಖಲೆ ಕೂಡ ನಿರ್ಮಾಣವಾಯಿತು. 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಹಾಗೂ 31ನೇ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲಿನಿಂದ ಫಾರ್ವರ್ಡ್‌ ಎನ್ನರ್‌ ವಲೆನ್ಸಿಯಾ ಈಕ್ವಾಡರ್‌ ತಂಡದ ಗೆಲುವಿಗೆ ಕಾರಣರಾದರು. ಅಲ್‌ ಬೇಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 60 ಸಾವಿರಕ್ಕೂ ಅಧಿಕ ಅಭಿಮಾನಿಗಳ ಎದುರು ದಕ್ಷಿಣ ಅಮೆರಿಕದ ತಂಡದ ವಿರುದ್ಧ ಕತಾರ್‌ ತಂಡದ ತಪ್ಪುಗಳು ದೊಡ್ಡ ಮಟ್ಟದಲ್ಲಿ ಕಾಣಸಿಕ್ಕವು. ಆಕರ್ಷಕ ಉದ್ಘಾಟನಾ ಸಮಾರಂಭದ ಬಳಿಕ ನಡೆದ ಪಂದ್ಯದಲ್ಲಿ, ಈಕ್ವಾಡರ್‌ ತಂಡ ಮೂರನೇ ನಿಮಿಷದದಲ್ಲಿಯೇ ಗೋಲು ಸಿಡಿಸಿತ್ತು. ಎನ್ನರ್‌ ವಲೆನ್ಸಿಯಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರಾದರೂ, ವಿಡಿಯೋ ಅಸಿಸ್ಟೆಂಟ್ ರೆಫ್ರಿ ಅಥವಾ ವಿಎಆರ್‌ ಉಪಸ್ಥಿತಿಯಲ್ಲಿ ಈ ಗೋಲನ್ನು ನಿರಾಕರಣೆ ಮಾಡಲಾಯಿತು. ಇದಾದ ಬಳಿಕವೂ ಈಕ್ವಡಾರ್‌ ತಂಡಕ್ಕೆ ಮುನ್ನಡೆ ಪಡೆಯಲು ಹೆಚ್ಚಿನ ಸಮಯ ಹಿಡಿಯಲಿಲ್ಲ. 16ನೇ ನಿಮಿಷದಲ್ಲಿ ಎನ್ನರ್‌ ವಲೆನ್ಸಿಯಾರನ್ನು ಪೆನಾಲ್ಟಿ ಆವರಣದಲ್ಲಿ ಅಲ್‌ ಶೀಬ್‌ ತಡೆದ ಕಾರಣಕ್ಕಾಗಿ ಪೆನಾಲ್ಟಿ ನೀಡಲಾಗಿತ್ತು. ಇದರಲ್ಲಿ ಎನ್ನರ್‌ ವಲೆನ್ಸಿಯಾ ಯಶಸ್ವಿಯಾಗಿ ಗೋಲು ಸಿಡಿಸಿದ್ದರು.

Exclusive: Qatar bribed eight Ecuadorian players $7.4 million to lose the opener(1-0 ⚽️ 2nd half). Five Qatari and insiders confirmed this.We hope it's false. We hope sharing this will affect the outcome.The world should oppose FIFA corruption.

— Amjad Taha أمجد طه (@amjadt25)


ಅದಾದ ಬಳಿಕ 31ನೇ ನಿಮಿಷದಲ್ಲಿ ಫೆನ್ನರ್‌ ಬೆಹ್ಸ್‌ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಬಾರಿಸಿದಾಗ ಎನ್ನರ್‌ ವಲೆನ್ಸಿಯಾ ಇದನ್ನು ಗೋಲಿನ ದಡ ಸೇರಿಸಿದರು. ಆ ಬಳಿಕ ಕತಾರ್ ಗೋಲು ಬಾರಿಸಲು ದೊಡ್ಡ ಮಟ್ಟದಲ್ಲಿ ಮರಳಲು ಪ್ರಯತ್ನಿಸಿತು. ಆದರೆ, ಫಾರ್ವರ್ಡ್‌ ಹಾಗೂ ಮಿಡ್‌ಫೀಲ್ಡ್‌ ವಿಭಾಗದ ವೈಫಲ್ಯದಇಂದಾಗಿ ಕತಾರ್‌ ಸೋಲು ಕಂಡಿತು. ಇನ್ನೊಂದೆಡೆ ಈಕ್ವಡಾರ್‌ ತಂಡ ಮೂರು ಅಂಕಗಳನ್ನು ಗೆದ್ದು ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈಕ್ವಡಾರ್‌ ತಂಡ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಡಿದ ಕಳೆದ ಏಳು ಪಂದ್ಯಗಳಲ್ಲಿ ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಅರ್ಜೆಂಟೀನಾದ ಜೂಲಿಯನ್‌ ಅಲ್ವಾರೆಜ್‌, ಈಕ್ವಾಡರ್‌ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿದ ಕೊನೆಯ ಆಟಗಾರ ಎನಿಸಿಕೊಂಡಿದ್ದಾರೆ.

ಈಕ್ವಡಾರ್‌ ತಂಡ ವಿಶ್ವಕಪ್‌ ಪಂದ್ಯದ ಮೊದಲ ಅವಧಿಯ ಆಟದಲ್ಲಿಯೇ ಎರಡು ಗೋಲು ಬಾರಿಸಿದ್ದು ಇದೇ ಮೊದಲ ಬಾರಿಯಾಗಿದೆ. ಇನ್ನು ನಾಲ್ಕನೇ ಬಾರಿಗೆ ವಿಶ್ವಕಪ್‌ನಲ್ಲಿ ಭಾಗಿಯಾಗಿರುವ ಈಕ್ವಾಡರ್‌ ತಂಡ ಉದ್ಘಾಟನಾ ಪಂದ್ಯದಲ್ಲಿಯೇ ಗೆಲುವು ಸಾಧಿಸಿದ್ದು ಇದು 2ನೇ ಬಾರಿಯಾಗಿದೆ. ಇದಕ್ಕೂ ಮುನ್ನ 2006ರ ವಿಶ್ವಕಪ್‌ನಲ್ಲಿ ಪೋಲೆಂಡ್‌ ವಿರುದ್ಧ ನಡೆದ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಈಕ್ವಡಾರ್‌ ಗೆಲುವು ಕಂಡಿತ್ತು.

Tap to resize

Latest Videos

undefined

ಈಕ್ವಡಾರ್‌ ತಂಡಕ್ಕೆ ಹಣದ ಆಮಿಷ ತೋರಿದ್ದ ಕತಾರ್‌: ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಸೋಲು ಕಾಣುವಂತೆ, ಕತಾರ್‌ ತಂಡ ಈಕ್ವಡಾರ್‌ಗೆ ಹಣದ ಆಮಿಷ ನೀಡಿತ್ತು ಎನ್ನುವ ವಿಚಾರ ಕೂಡ ಬಹಿರಂಗವಾಗಿದ. ಮೊದಲ ಪಂದ್ಯದಲ್ಲಿ ಸೋಲು ಕಂಡಲ್ಲಿ7.4 ಮಿಲಿಯನ್‌ ಡಾಲರ್‌ ಅಂದರೆ 60 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಕತಾರ್‌ ಆಮಿಷ ನೀಡಿತ್ತು ಎಂದು ಸುದ್ದಿಯಾಗಿದೆ. ಸೌದಿ ಅರೇಬಿಯಾದ ಬ್ರಿಟಿಷ್ ಸೆಂಟರ್‌ನ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳ ಪರಿಣಿತ ಮತ್ತು ಪ್ರಾದೇಶಿಕ ನಿರ್ದೇಶಕ ಅಮ್ಜದ್ ತಾಹಾ ಅವರ ಪ್ರಕಾರ, ವಿಶ್ವಕಪ್‌ ಆರಂಭಕ್ಕೂ ಮುನ್ನ ಕತಾರ್‌ ದೇಶವು ಈಕ್ವಡಾರ್‌ ತಂಡದ ಎಂಟು ಆಟಗಾರರಿಗೆ 7.4 ಮಿಲಿಯನ್‌ ಡಾಲರ್‌ ಹಣವನ್ನು ಲಂಚವಾಗಿ ನೀಡಿತ್ತು. ವಲಸೆ ಕಾರ್ಮಿಕರ ವಿರುದ್ಧ ಮಾನವ ಹಕ್ಕುಗಳ ಕ್ರೌರ್ಯದ ಆರೋಪದ ನಡುವೆ, ಕತಾರ್‌ ದೇಶವು ಹೊಸ ಆರೋಪದಲ್ಲಿ ಸಿಲುಕಿಕೊಂಡಿದೆ.

ಎಸ್‌ಡಿಪಿಐ ಧ್ವಜ ಎಂದುಕೊಂಡು ಪೋರ್ಚುಗಲ್‌ ಧ್ವಜ ಹರಿದ ವ್ಯಕ್ತಿ, ರೊನಾಲ್ಡೊ ಅಭಿಮಾನಿಗಳಿಂದ ಗೂಸಾ!

ತಮ್ಮ ಮೂಲಗಳು ಕತಾರ್ ಮತ್ತು ಈಕ್ವೆಡಾರ್ ತಂಡಗಳ ಒಳಗಿನ ಸದಸ್ಯರಾಗಿದ್ದಾರೆ ಎಂದು ಹೇಳಿದ್ದು, ಫಿಫಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜಗತ್ತನ್ನು ಒತ್ತಾಯಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಅವರು, 'ಆರಂಭಿಕ ಪಂದ್ಯದಲ್ಲಿ ಸೋಲು ಕಾಣಲು ಕತಾರ್‌ ದೇಶವು, ಈಕ್ವಡಾರ್‌ನ 8 ಆಟಗಾರರಿಗೆ 7.4 ಮಿಲಿಯನ್‌ ಯುಎಸ್‌ ಡಾಲರ್ ಹಣವನ್ನು ನೀಡಿದೆ. ಕತಾರ್‌ ಹಾಗೂ ಈಕ್ವಡಾರ್‌ ತಂಡದ ಐವರು ಆಟಗಾರರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತೇನೆ.ಈ ಸುದ್ದಿಯನ್ನು ಹೇಳುವ ಮೂಲಕ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲೆ ಎಂದನಿಸಿದೆ. ಫಿಫಾದ ಭ್ರಷ್ಟಾಚಾರದ ವಿರುದ್ಧ ಜಗತ್ತು ಹೋರಾಡಬೇಕು' ಎಂದು ಬರೆದುಕೊಂಡಿದ್ದಾರೆ.

FIFA World Cup 2022: ಫುಟ್‌ಬಾಲ್‌ ವಿಶ್ವಕಪ್‌ಗೆ ಅದ್ದೂರಿ ಆರಂಭ!

ಈ ಆರೋಪದ ನಡುವೆಯೂ ಕತಾರ್‌ ಆಗಲಿ ಫಿಫಾ ಆಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಸ್ಟೇಡಿಯಂನಲ್ಲಿ ಬಿಯರ್‌ ಬ್ಯಾನ್‌ ಮಾಡಿದ ನಿರ್ಧಾರಕ್ಕೆ ಅಣಿಮಾನಿಗಳಿಂದ ಆಕ್ರೋಶ ಎದುರಿಸುತ್ತಿರುವ ಕತಾರ್‌, ಉದ್ಘಾಟನಾ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ತವರಿನ ಅಭಿಮಾನಿಗಳಿಗೆ ಸಂಭ್ರಮ ನೀಡುವ ಇರಾದೆಯಲ್ಲಿತ್ತು.

click me!