ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?

Published : Jul 14, 2026, 05:46 AM IST
FIFA

ಸಾರಾಂಶ

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್‌ ಕ್ರೀಡಾಂಗಣದ ಹುಲ್ಲನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟ ಮಾಡುತ್ತಿದೆ. ಅಕ್ರಿಲಿಕ್ ಕ್ಯೂಬ್‌ನಲ್ಲಿ ಸಂರಕ್ಷಿಸಲಾದ ಈ ಹುಲ್ಲಿನ ತುಣುಕುಗಳು ವಿವಿಧ ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ.

ನ್ಯೂಯಾರ್ಕ್‌ : 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್‌ ಕ್ರೀಡಾಂಗಣದ ಮೈದಾನದ ಹುಲ್ಲಿನ ತುಣುಕುಗಳನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟಕ್ಕೆ ತಂದಿದೆ. ಅಕ್ರಿಲಿಕ್ ಕ್ಯೂಬ್‌ನೊಳಗೆ ಹುಲ್ಲನ್ನು ಸಂರಕ್ಷಿಸಿ, ಆನ್‌ಲೈನ್‌ನಲ್ಲಿ ಮಾರಾಟ ನಡೆಸುವುದಾಗಿ ಫಿಫಾ ತಿಳಿಸಿದೆ. 

ಹುಲ್ಲಿನ ಬೆಲೆ ಎಷ್ಟು?

ಹುಲ್ಲಿನ ಬೆಲೆ ಸುಮಾರು ₹42940ನಿಂದ ₹287127ರ ವರೆಗೂ ನಿಗದಿ ಮಾಡಲಾಗಿದೆ. ನಾಲ್ಕು ಬೇರೆ ಪ್ಯಾಕೇಜ್‌ ಅನ್ನು ಫಿಫಾ ಘೋಷಿಸಿದೆ. 2.5X 2.5 X 2.5 ಇಂಚು ಅಳತೆಯ ಬಾಕ್ಸ್‌ನೊಳಗೆ ಬರೀ ಹುಲ್ಲು ಬೇಕಿದ್ದರೆ ₹42940 ಪಾವತಿಸಬೇಕಿದೆ. 

ಹುಲ್ಲಿನ ಜೊತೆಗೆ ಚಿನ್ನದ ಹಾಳೆ ಮೇಲೆ ಫೈನಲ್‌ ಟಿಕೆಟ್‌ನ ಚಿತ್ರವಿರುವ ಬಾಕ್ಸ್‌ಗೆ ₹85881, ಹುಲ್ಲು, ಚಿನ್ನದ ಹಾಳೆಯ ಮೇಲೆ ಟಿಕೆಟ್‌ ಜೊತೆ ಆ್ಯಡಿಡಾಸ್‌ ಮಿನಿ ಮ್ಯಾಚ್‌ ಬಾಲ್‌ ಇರುವ ಬಾಕ್ಸ್‌ಗೆ ₹121159, ಗಾಜಿನಲ್ಲಿ ಕೆತ್ತಿದ ಮಿನಿ ವಿಶ್ವಕಪ್‌ ಟ್ರೋಫಿಯೂ ಇರುವ ಬಾಕ್ಸ್‌ಗೆ ₹287127 ನಿಗದಿಪಡಿಸಲಾಗಿದೆ. 

ಎಷ್ಟು ಆದಾಯದ ನಿರೀಕ್ಷೆ?

ಈ ನಾಲ್ಕೂ ರೀತಿಯ ಬಾಕ್ಸ್‌ಗಳನ್ನು ತಲಾ 2026 ಪ್ರತಿಗಳನ್ನಷ್ಟೇ ಮಾರಾಟಕ್ಕಿಡುವುದಾಗಿ ಫಿಫಾ ತಿಳಿಸಿದೆ. ನಾಲ್ಕೂ ಬಾಕ್ಸ್‌ಗಳು ಫಿಫಾ ಲೋಗೋ ಇರುವ ಪೆನ್‌ಡ್ರೈವ್‌ ಅನ್ನು ಒಳಗೊಂಡಿರಲಿದೆ. ಕೀಪ್‌ಸ್ಟಬ್‌ ಎನ್ನುವ ವೆಬ್‌ಸೈಟ್‌ ಮೂಲಕ ಮಾರಾಟ ನಡೆಯಲಿದೆ. ಎಲ್ಲಾ ಪ್ರತಿಗಳು ಮಾರಾಟವಾದರೆ, ಫಿಫಾಗೆ ಅಂದಾಜು 107 ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫುಟ್ಬಾಲ್‌ ವಿಶ್ವಕಪ್‌ ಬಹಿಷ್ಕಾರ: ಸ್ಪೇನ್‌ ಸೇರಿ 55 ದೇಶ ಎಚ್ಚರಿಕೆ! ಅಷ್ಟಕ್ಕೂ ಆಗಿದ್ದೇನು?
FIFA Team Of The Tournament: ಫಿಫಾ ವಿಶ್ವಕಪ್‌ ಇಲೆವೆನ್‌ ಪ್ರಕಟ: ಹ್ಯಾರಿ ಕೇನ್‌, ಯಮಾಲ್‌ ಔಟ್‌!