ಯುರೋ ಕಪ್‌: ಕ್ವಾರ್ಟರ್‌ಗೆ ಇಂಗ್ಲೆಂಡ್‌, ಉಕ್ರೇನ್‌ ಪ್ರವೇಶ

By Kannadaprabha News  |  First Published Jul 1, 2021, 8:38 AM IST

* ಯೋರೋ ಕಪ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಕ್ತಾಯ

* ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್‌ ಹಾಗೂ ಉಕ್ರೇನ್‌ ತಂಡಗಳು

* ಶುಕ್ರವಾರ ಮೊದಲೆರಡು ಕ್ವಾರ್ಟರ್‌ ಫೈನಲ್‌ಗಳು ನಡೆಯಲಿವೆ.


ಲಂಡನ್(ಜು.01): ಯುರೋ ಕಪ್‌ 2020ರ ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌ ಹಾಗೂ ಉಕ್ರೇನ್‌ ತಂಡಗಳು ಲಗ್ಗೆಯಿಟ್ಟಿವೆ. ಇದರೊಂದಿಗೆ ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಕ್ತಾಯವಾಗಿವೆ. 

ಪ್ರಿ ಕ್ವಾರ್ಟರ್‌ನಲ್ಲಿ ಜರ್ಮನಿ ವಿರುದ್ಧ 2-0 ಗೋಲುಗಳಲ್ಲಿ ಇಂಗ್ಲೆಂಡ್‌ ಜಯಗಳಿಸಿದರೆ, ಸ್ವೀಡನ್‌ ವಿರುದ್ಧ ಉಕ್ರೇನ್‌ 2-1 ಗೋಲುಗಳಲ್ಲಿ ಗೆಲುವು ಪಡೆಯಿತು. ಇದರೊಂದಿಗೆ ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ ಅಂತಿಮಗೊಂಡಿದೆ. 

Tap to resize

Latest Videos

undefined

ಯುರೋ ಕಪ್ ಫುಟ್ಬಾಲ್‌‌: ಕ್ವಾರ್ಟರ್‌ಗೆ ಸ್ವಿಜರ್‌ಲೆಂಡ್‌, ಸ್ಪೇನ್‌ ಲಗ್ಗೆ

ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌-ಸ್ವಿಜರ್‌ಲೆಂಡ್‌, 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ-ಇಟಲಿ, 3ನೇ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್-ಚೆಕ್‌ ಗಣರಾಜ್ಯ ಹಾಗೂ 4ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್‌-ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಶುಕ್ರವಾರ ಮೊದಲೆರಡು ಕ್ವಾರ್ಟರ್‌ ಫೈನಲ್‌ಗಳು ನಡೆಯಲಿವೆ.

ಈಗಾಗಲೇ ಹಾಲಿ ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಯುರೋ ಕಪ್‌ 2020 ಟೂರ್ನಿಯಿಂದ ಹೊರಬಿದ್ದಿದೆ. ವಿಶ್ವಕಪ್‌ ರನ್ನರ್‌-ಅಪ್‌ ಕ್ರೊವೇಷಿಯಾ ಕೂಡ ಆಘಾತ ಅನುಭವಿಸಿದೆ. ಹೀಗಾಗಿ ಈ ಬಾರಿ ಹೊಸ ಎರಡು ತಂಡಗಳು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸುವ ಸಾಧ್ಯತೆಯಿದೆ.

click me!