
ಕೋಪೆನ್‌ಹೇಗನ್(ಜೂ.30): ಹಾಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ಯುರೋ ಕಪ್ 2020 ಟೂರ್ನಿಯಿಂದ ಹೊರಬಿದ್ದಿದೆ. ವಿಶ್ವಕಪ್ ರನ್ನರ್-ಅಪ್ ಕ್ರೊವೇಷಿಯಾ ಕೂಡ ಆಘಾತ ಅನುಭವಿಸಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್, ಸ್ವಿಟ್ಜರ್‌ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡರೆ, ಹೆಚ್ಚುವರಿ ಸಮಯದಲ್ಲಿ ಸ್ಪೇನ್‌ಗೆ ಗೋಲು ಬಿಟ್ಟುಕೊಟ್ಟು ಕ್ರೊವೇಷಿಯಾ ನಿರಾಸೆ ಕಂಡಿತು.
ರೊಮೇನಿಯಾದ ರಾಜಧಾನಿ ಬುಚಾರೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 90 ನಿಮಿಷ, ಹೆಚ್ಚುವರಿ ಸಮಯದ ಬಳಿಕ ಫ್ರಾನ್ಸ್ ಹಾಗೂ ಸ್ವಿಟ್ಜರ್‌ಲೆಂಡ್ ಫುಟ್ಬಾಲ್ ತಂಡಗಳು 3-3ರಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಸ್ವಿಟ್ಜರ್‌ಲೆಂಡ್ 5-4 ಗೋಲುಗಳ ರೋಚಕ ಗೆಲುವು ಸಾಧಿಸಿ, 67 ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯ ಕ್ವಾರ್ಟರ್ ಫೈನಲ್‌ಗೇರಿತು. ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ್ದ ಕಿಲಿಯಾನ್ ಎಂಬಾಪೆ, ಶೂಟೌಟ್‌ನಲ್ಲಿ ಗೋಲು ಬಾರಿಸಲು ವಿಫಲರಾಗಿದ್ದು, ಫ್ರಾನ್ಸ್ ಸೋಲಿಗೆ ಕಾರಣವಾಯಿತು.
ಯುರೋ ಕಪ್ ಫುಟ್ಬಾಲ್: ಬೆಲ್ಜಿಯಂ, ಜೆಕ್ ರಿಪಬ್ಲಿಕ್ ಕ್ವಾರ್ಟರ್‌ಗೆ
ಇನ್ನು, ಡೆನ್ಮಾರ್ಕ್ ರಾಜಧಾನಿ ಕೋಪೆನ್‌ಹೇಗನ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಹಾಗೂ ಕ್ರೊವೇಷಿಯಾ ನಿಗದಿತ 90 ನಿಮಿಷಗಳ ಆಟದ ಮುಕ್ತಾಯಕ್ಕೆ 3-3 ಗೋಲುಗಳಲ್ಲಿ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯದಲ್ಲಿ 2 ಗೋಲು ಬಾರಿಸಿದ ಸ್ಪೇನ್, 5-3ರಲ್ಲಿ ಗೆದ್ದು ಅಂತಿಮ 8ರ ಸುತ್ತಿಗೇರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.