ಫಿಫಾ ವೇದಿಕೆಯಲ್ಲಿ ಟ್ರೋಲ್ ಆದ ಟ್ರಂಪ್, ಹೊರನಡೆಯಲು ಹೇಳಿದ್ರೂ ಫೋಟೋಗಾಗಿ ನಿಂತ ಅಮೆರಿಕ ಅಧ್ಯಕ್ಷ

Published : Jul 20, 2026, 10:11 AM IST
Trump Trolled on FIFA Stage

ಸಾರಾಂಶ

ಫಿಫಾ ವಿಶ್ವಕಪ್ ಟ್ರೋಫಿ ವಿತರಣೆ ವೇದಿಕೆಯಲ್ಲಿ ಡೋನಾಲ್ಡ್ ಟ್ರಂಪ್ ಟ್ರೋಲ್ ಆಗಿದ್ದಾರೆ. ಸ್ಪೇನ್ ತಂಡಕ್ಕೆ ಟ್ರೋಫಿ ವಿತರಿಸಿದ ಬಳಿಕ ವೇದಿಕೆ ಬಿಟ್ಟು ತೆರಳಲು ಟ್ರಂಪ್ ನಿರಾಕರಿಸಿದ್ದಾರೆ. ಸ್ಪೇನ್ ನಾಯಕ ಸರಿಯುವಂತೆ ಸೂಚಿಸಿದರೂ ಟ್ರಂಪ್ ಮಾತ್ರ ವೇದಿಕೆಯಲ್ಲೇ ಉಳಿದುಕೊಂಡು ಟ್ರೋಲ್ ಆಗಿದ್ದಾರೆ.

ನ್ಯೂಜರ್ಸಿ (ಜು.20) ಫಿಫ್ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅರ್ಜೆಂಟೀನಾ ವಿರುದ್ಧ 1-0 ಅಂತರದಲ್ಲಿ ಮಣಿಸಿದ ಸ್ಪೇನ್ 2ನೇ ಬಾರಿಗೆ ಫಿಫಾ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಟ್ರೋಫಿ ವಿತರಣೆಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಸ್ಪೇನ್ ತಂಡಕ್ಕೆ ಫಿಫಾ ವಿಶ್ವಕಪ್ ಟ್ರೋಫಿ ವಿತರಿಸಿದ್ದಾರೆ. ಆದರೆ ಟ್ರಂಪ್ ಫೋಟೋ ಹಾಗೂ ವಿಡಿಯೋಗಾಗಿ ಫಿಫಾ ವೇದಿಕೆಯಲ್ಲೇ ಉಳಿದಿಕೊಂಡಿದ್ದಾರೆ. ಸ್ಪೇನ್ ನಾಯಕ ಕೈ ಸನ್ನೆ ಮೂಲಕ ಟ್ರಂಪ್‌ಗೆ ಸರಿಯಲು ಸೂಚಿಸಿದರೂ ಟ್ರಂಪ್ ಮಾತ್ರ ವೇದಿಕೆಯಿಂದ ಕಳೆಗಿಳಿಯದೇ ಅಲ್ಲೇ ನಿಂತು ಟ್ರೋಲ್ ಆಗಿದ್ದಾರೆ. ಈ ವೇಳೆ ಅಭಿಮಾನಿಗಳು ಟ್ರಂಪ್ ವಿರುದ್ಧ ಕೂಗಿದ್ದಾರೆ. ಈ ಘಟನೆ ವಿಡಿಯೋ ಇದೀಗ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸ್ಪೇನ್ ಆಟಗಾರರ ನಡುವೆ ನಿಲ್ಲಲು ಯತ್ನಿಸಿದ ಟ್ರಂಪ್

ಸ್ಪೇನ್ ಆಟಗಾರರಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಪ್ರಶಸ್ತಿ ವಿತರಿಸಲು ವೇದಿಕೆಗೆ ಆಗಮಿಸಿದ್ದಾರೆ. ಡೋನಾಲ್ಡ್ ಟ್ರಂಪ್ ಫಿಫಾ ಹಾಗೂ ಜಿಯಾನಿ ಜಂಟಿಯಾಗಿ ವಿಶ್ವಕಪ್ ಟ್ರೋಫಿ ವಿತರಿಸಿದ್ದಾರೆ. ಜಿಯಾನಿ ಪಕ್ಕಕ್ಕೆ ಸರಿದರೆ ಟ್ರಂಪ್ ಪ್ಲಾನ್ ಬೇರೆ ಆಗಿತ್ತು. ಸ್ಪೇನ್ ಆಟಗಾರರ ನಡುವೆ ಅಂದರೆ ಸ್ಪೇನ್ ನಾಯಕನ ಪಕ್ಕ ನಿಂತು ಫಿಫಾ ವಿಶ್ವಕಪ್ ಟ್ರೋಫಿ ಜೊತೆ ಸಂಭ್ರಮಿಸಲು ಟ್ರಂಪ್ ಪ್ಲಾನ್ ಮಾಡಿದ್ದರು. ನಾಯಕನ ಪಕ್ಕ ಬಂದಾಗ ಸ್ಪೇನ್ ರೋಡ್ರಿ ಪಕ್ಕಕ್ಕೆ ಸರಿಯುವಂತೆ ಡೋನಾಲ್ಡ್ ಟ್ರಂಪ್‌ಗೆ ಸನ್ನೆ ಮಾಡಿದ್ದಾರೆ. ನಾಯಕನ ಪಕ್ಕದಲ್ಲೇ ನಿಂತು ಫೋಟೋ ಹಾಗೂ ವಿಡಿಯೋಗೋ ಫೋಸ್ ಕೊಡಲು ಬಂದಿದ್ದ ಟ್ರಂಪ್ ಕೈಸನ್ನೆಯಿಂದ ಕೊಂಚ ದೂರ ಸರಿದು ತಂಡದ ಬಲಭಾಗದಲ್ಲಿ ನಿಂತಿದ್ದಾರೆ.

ಟ್ರಂಪ್ ನಡೆಯಿಂದ ವಿಚಲಿತಗೊಂಡ ಫಿಫಾ ಅಧ್ಯಕ್ಷ

ಫಿಫಾ ಅಧ್ಯಕ್ಷ ಇನ್ನೇನು ವೇದಿಕೆಯಿಂದ ಇಳಿಯಬೇಕು ಅನ್ನೋವಷ್ಟರಲ್ಲೇ ಟ್ರಂಪ್ ಆಟಗಾರರ ನಡುವೆ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡುತ್ತಿರುವುದು ಗಮನಿಸಿದ್ದಾರೆ. ಮತ್ತೊಂದು ಬದಿಯಿಂದ ವೇದಿಕೆಯಿಂದ ಕೆಳಗಿಳಿಯಲಿದ್ದಾರೆ ಎಂದರೆ ಅದು ಆಗಲಿಲ್ಲ. ಪರಿಸ್ಥಿತಿ ಆರಿತ ಫಿಫಾ ಅಧ್ಯಕ್ಷ ಜಿಯಾನಿ ತಕ್ಷಣವೇ ಟ್ರಂಪ್ ಬಳಿಗೆ ಓಡೋಡಿ ಹೋಗಿದ್ದಾರೆ. ಬಳಿಕ ಅವರು ಸೆಲೆಬ್ರೇಷನ್ ಮಾಡುತ್ತಾರೆ. ನಾವು ಇಳಿದುಬಿಡೋಣ ಎಂದಿದ್ದಾರೆ. ಇಷ್ಟಾದರೂ ಕೆಲ ಹೊತ್ತು ವೇದಿಕೆಯಲ್ಲೇ ಇದ್ದ ಟ್ರಂಪ್ ಬಳಿಕ ಅನಿವಾರ್ಯವಾಗಿ ವೇದಿಕೆಯಿಂದ ಕೆಳಗಿಳಿದಿದ್ದಾರೆ.

ಟ್ರಂಪ್ ವಿರುದ್ದ ಅಭಿಮಾನಿಗಳು ಕೂಗಾಡಿದ್ದಾರೆ (Boo). ಟ್ರಂಪ್ ಇದ್ಯಾವುದನ್ನು ಲೆಕ್ಕಿಸದೆ ಫಿಫಾ ವೇದಿಕೆಯಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಡೋನಾಲ್ಡ್ ಟ್ರಂಪ್ ನಡೆ ಕುರಿತು ಚರ್ಚೆಯಾಗುತ್ತಿದೆ. ಸ್ಪೇನ್ ತಮ್ಮ ನಾಯ ರೋಡ್ರಿ ಜೊತೆ ಸೇರಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಲು ಸಜ್ಜಾಗಿದ್ದರೆ, ಇತ್ತ ಟ್ರಂಪ್ ಇವರ ಜೊತೆ ಟ್ರೋಫಿ ಸಂಭ್ರಮಾಚರಣೆಯಲ್ಲಿ ತೊಡಗಲು ನಿರ್ಧರಿಸಿದ್ದರು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಒಂದು ವೇಳೆ ಅಮೆರಿಕ ಟ್ರೋಫಿ ಗೆದ್ದಿದ್ದರೆ, ಡೋನಾಲ್ಡ್ ಟ್ರಂಪ್ ಟ್ರೋಫಿ ಹಿಡಿದು ಮೇಲಕ್ಕೆತ್ತಿ ಸಂಭ್ರಮಿಸುತ್ತಿದ್ದರು. ಆಟಗಾರರು, ನಾಯಕ, ಸ್ಟಾಫ್ ಎಲ್ಲಾ ಸುತ್ತುವರಿದೆ ಬಹುಪರಾಕ್ ಬಹುಪರಾಕ್ ಎಂದು ಹೇಳಬೇಕಿತ್ತ ಎಂದು ಕಮೆಂಟ್ ಮಾಡಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಿಫಾ ವಿಶ್ವಕಪ್ ರನ್ನರ್ ಅಪ್ ಅರ್ಜೆಂಟೀನಾಗೆ 317 ಕೋಟಿ, ಚಾಂಪಿಯನ್ ಸ್ಪೇನ್‌ಗೆ ಬಹುಮಾನ ಮೊತ್ತವೆಷ್ಟು?
ಅರ್ಜೆಂಟೀನಾ ಕನಸು ನುಚ್ಚು ನೂರು, 1 ಗೋಲಿನ ಮೂಲಕ 16 ವರ್ಷ ಬಳಿಕ ಫಿಫಾ ವಿಶ್ವಕಪ್ ಗೆದ್ದ ಸ್ಪೇನ್