ಕೊರೋನಾ ವೈರಸ್ ಇಟಲಿ ಹಾಗೂ ಸ್ಪೇನ್‌ನಲ್ಲಿ ವ್ಯಾಪಕವಾಗಿ ಹಬ್ಬಲು ಫುಟ್ಬಾಲ್ ಪಂದ್ಯಾವಳಿ ಕಾರಣ ಎನ್ನುವ ಬೆಚ್ಚಿ ಬೀಳುವ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ವಿವರ ಇಲ್ಲಿದೆ
ನವದೆಹಲಿ(ಮಾ.27): ಇಟಲಿ ಹಾಗೂ ಸ್ಪೇನ್‌ನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಒಂದು ಫುಟ್ಬಾಲ್ ಪಂದ್ಯ ಕಾರಣ?. ಹೀಗೊಂದು ಅಪಾಯಕಾರಿ ಸುದ್ದಿಯನ್ನು ಅಂತಾರಾಷ್ಟ್ರೀಯ ಮಾಧ್ಯಮವೊಂದು ಪ್ರಕಟಿಸಿದೆ.
ಅಬ್ಬಬ್ಬಾ..! ಕೊರೋನಾ ಸೋಂಕು, ಚೀನಾವನ್ನು ಹಿಂದಿಕ್ಕಿದ ಅಮೆರಿಕಾ..!
undefined
ಫೆ.19 ರಂದು ಇಟಲಿಯ ಮಿಲಾನ್ ಸಮೀಪದ ಬೆರ್ಗಾಮೊನಲ್ಲಿ ನಡೆದಿದ್ದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಇಟಲಿಯ ಅಟ್ಲಾಂಟಾ ಹಾಗೂ ಸ್ಪೇನ್‌ನ ವ್ಯಾಲೆನ್ಸೇನಿಯಾ ತಂಡಗಳು ಸೆಣಸಿದ್ದವು. ಕೊರೋನಾ ಮುನ್ನೆಚ್ಚರಿಕೆಗೆ ಹಲವು ದೇಶಗಳು ಮುಂದಾಗಿದ್ದರೂ, ಯುರೋಪಿಯನ್ ಫುಟ್ಬಾಲ್ ಯೂನಿಯನ್ (ಯುಇಎಫ್‌ಎ) ಮಾತ್ರ ಪಂದ್ಯಗಳನ್ನು ಮುಂದೂಡಿರಲಿಲ್ಲ. ಆ ಪಂದ್ಯ ವೀಕ್ಷಣೆಗೆ ಮಿಲಾನ್‌ಗೆ 40000 ಮಂದಿ
ಆಗಮಿಸಿದ್ದರು. ಪಂದ್ಯ ನಡೆಯುವ ಮೊದಲು ಇಟಲಿಯಲ್ಲಿ ಕೇವಲ 3 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಸ್ಪೇನ್‌ನಿಂದಲೂ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.
2018ರಲ್ಲೇ ನಿರ್ಮಾಣವಾಗಿತ್ತು ಡೆಡ್ಲಿ ಕೊರೋನಾ ಸಿನಿಮಾ!
ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ್ದು ಮಾತ್ರವಲ್ಲದೆ, ಸ್ಥಳೀಯ ಪಬ್ ಹಾಗೂ ಬಾರ್‌ಗಳಿಗೂ ಭೇಟಿ ನೀಡಿದ್ದರು. ಒಟ್ಟಿಗೆ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ‘ಈ ಪಂದ್ಯ ನಮ್ಮ ಪಾಲಿಗೆ ದುರಂತವಾಗಿ ಪರಿಣಮಿಸಿತು’ ಎಂದು ಬೆರ್ಗಾಮೊ ಮಹಾಪೌರ ಗಿಯೊರ್ಗಿಯೊ ಗೊರಿ ಮಾಧ್ಯಮಕ್ಕೆ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಈ ಪಂದ್ಯ ನಡೆದ 2 ವಾರದ ಬಳಿಕ ಎಂದರೆ
ಮಾ.4ಕ್ಕೆ ಕೊರೋನಾ ಸೋಂಕಿತರ ಸಂಖ್ಯೆ 3089ಕ್ಕೇರಿತು. ಸದ್ಯ 70 ಸಾವಿರ ದಾಟಿದೆ. ಕೊರೋನಾದಿಂದ ಸಾವನ್ನಪ್ಪಿದವರ ಪಟ್ಟಿಯಲ್ಲಿ ಇಟಲಿ ಹಾಗೂ ಸ್ಪೇನ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.