ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!

By Suvarna News  |  First Published Mar 22, 2020, 3:53 PM IST

ಇತ್ತೀಚೆಗಷ್ಟೇ 21 ವರ್ಷದ ಫುಟ್ಬಾಲ್ ಕೋಚ್ ಕೊರೋನಾ ವೈರಸ್‌‌ನಿಂದ ಮೃತಪಟ್ಟ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕೊರೋನಾ ವೈರಸ್‌ಗೆ ಫುಟ್ಬಾಲ್ ಕ್ಷೇತ್ರದಲ್ಲಿ 2ನೇ ಬಲಿಯಾಗಿದೆ. ಈ ಮೂಲಕ ಕೊರೋನಾ ಭೀತಿ ಹೆಚ್ಚಾಗಿದೆ.
 


ಮ್ಯಾಡ್ರಿಡ್(ಮಾ.22): ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ಒಂದು ದಿನದ ಜನತಾ ಕರ್ಫ್ಯೂ ಹೇರಿದೆ. ಸ್ವಯಂ ದಿಗ್ಬಂಧನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದರೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಶ್ವ ಮಟ್ಟದಲ್ಲೂ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಇದೀಗ ಫುಟ್ಬಾಲ್ ಕ್ಷೇತ್ರದಲ್ಲಿ ಕೊರೋನಾಗೆ 2ನೇ ಬಲಿಯಾಗಿದೆ. 2ನೇ ಬಲಿ ಕೂಡ ಸ್ಪೇನ್‌ನಲ್ಲೇ ಅನ್ನೋದು ಮತ್ತಷ್ಟು ಆತಂಕಕಾರಿಯಾಗಿದೆ.

ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

Latest Videos

undefined

ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ತಂಡದ ಮಾಜಿ ಅಧ್ಯಕ್ಷ ಲೊರೆಂಝೋ ಸ್ಯಾಂಜ್(76 ವರ್ಷ) ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನಾ ವೈರಸ್ ತಗುಲಿದ ಬೆನ್ನಲ್ಲೇ ಮ್ಯಾಡ್ರಿಡ್ ಆಸ್ಪತ್ರೆ ದಾಖಲಾಗಿದ್ದ ಲೊರೆಂಝೋ ಸ್ಯಾಂಜ್ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಂಕು ಹತೋಟಿಗೆ ಬರದ ಕಾರಣ ಲೊರೆಂಝೋ ಸಾವನ್ನಪ್ಪಿದ್ದಾರೆ.

1995 ರಿಂದ 200ರ ವರೆಗೆ ರಿಯಲ್ ಮ್ಯಾಡ್ರಿಡ್ ತಂಡದ ಅಧ್ಯಕ್ಷನಾಗಿದ್ದ ಲೊರೆಂಝೋ 2 ಬಾರಿ ತಂಡ ಪ್ರಶಸ್ತಿ ಮುಡಿಗೇರಿಸಿದ ಸಾಧನೆಗೂ ಪಾತ್ರರಾಗಿದ್ದಾರೆ. ನನ್ನ ತಂದೆ ಮರಣ ಹೊಂದಿದ್ದಾರೆ ಅನ್ನೋ ವಿಚಾರ ತಿಳಿಸಲು ವಿಷಾಧಿಸುತ್ತೇನೆ. ತಂದೆ ಈ ರೀತಿಯ ಸಾವನ್ನು ಬಯಸಿರಲಿಲ್ಲ ಎಂದು ಪುತ್ರ ಜ್ಯೂನಿಯರ್ ಲೊರೆಂಝೋ ಹೇಳಿದ್ದಾರೆ.

ಸ್ಪೇನ್‌ನಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದುವರೆಗೆ ಸ್ಪೇನ್‌ನಲ್ಲಿ ಕೊರೋನಾ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 1,320ಕ್ಕೇರಿದೆ. ಇತ್ತೀಚೆಗಷ್ಟೇ ಸ್ಪೇನ್ ಫುಟ್ಬಾಲ್ ತಂಡದ ಕೋಚ್ 21 ವರ್ಷದ ಫ್ರಾನ್ಸಿಸ್ಕೋ ಗ್ರಾಸಿಯಾ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದರು. 

ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!