ಪುಟ್ಬಾಲ್ ದಿಗ್ಗಜ ಪೀಲೆ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಬಾರ್ಸಿಲೋನಾದ ತಾರೆ ಲಿಯೋನೆಲ್ ಮೆಸ್ಸಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಾರ್ಸಿಲೋನಾ(ಡಿ.24): ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಕ್ಲಬ್‌ವೊಂದರ ಪರ ಅತಿಹೆಚ್ಚು ಗೋಲು ಬಾರಿಸಿದ ವಿಶ್ವ ದಾಖಲೆ ಬರೆದಿದ್ದಾರೆ.
ಮಂಗಳವಾರ(ಡಿ.22) ನಡೆದ ಲಾ ಲೀಗಾ ಟೂರ್ನಿಯ ರಿಯಲ್ ವಾಲಡೋಲಿಡ್ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿದ ಮೆಸ್ಸಿ, ಬ್ರೆಜಿಲ್‌ನ ದಂಕಥೆ ಪೀಲೆ ಅವರ 643 ಗೋಲುಗಳ ದಾಖಲೆ ಮುರಿದರು.
undefined
ಬಾರ್ಸಿಲೋನಾ ಪರ 2004ರಿಂದ ಆಡುತ್ತಿರುವ ಮೆಸ್ಸಿ, 749 ಪಂದ್ಯಗಳಲ್ಲಿ 644 ಗೋಲುಗಳನ್ನು ಬಾರಿಸಿದ್ದಾರೆ. ಬ್ರೆಜಿಲ್‌ನ ಸ್ಯಾಂಟೋಸ್ ಎಫ್‌ಸಿ ಪರ ಪೀಲೆ 643 ಗೋಲು ಬಾರಿಸಿದ್ದರು. ಜರ್ಮನಿಯ ದಿಗ್ಗಜ ಫುಟ್ಬಾಲಿಗ ಜೆರ್ಡ್ ಮುಲ್ಲರ್, ಬೇಯರ್ನ್ ಮ್ಯೂನಿಕ್ ತಂಡದ ಪರ 565 ಗೋಲು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.
ಈ ಅಪರೂಪದ ದಾಖಲೆ ಬ್ರೇಕ್ ಮಾಡಿರುವ ಲಿಯೋನೆಲ್ ಮೆಸ್ಸಿ, ನಾನು ಫುಟ್ಬಾಲ್ ಆಡಲು ಆರಂಭಿಸಿದಾಗ, ನಾನು ಯಾವುದೇ ದಾಖಲೆಗಳನ್ನು ಬ್ರೇಕ್ ಮಾಡುತ್ತೇನೆ ಎಂದು ಭಾವಿಸಿರಲಿಲ್ಲ, ಅದರಲ್ಲೂ ದಿಗ್ಗಜ ಆಟಗಾರ ಪೀಲೆ ದಾಖಲೆಗಳನ್ನು ಅಳಿಸಿ ಹಾಕುತ್ತೇನೆ ಎಂದು ಕಲ್ಪನೆಯೂ ಮಾಡಿಕೊಂಡಿರಲಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
2020ರಲ್ಲಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಇಲ್ಲ..!
ನಾನು ಈ ಹಂತಕ್ಕೇರಲು ಸಹಕರಿಸಿದ ನನ್ನೆಲ್ಲ ಸಹ ಆಟಗಾರರಿಗೆ, ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಪ್ರತಿದಿನ ನನ್ನನ್ನು ಬೆಂಬಲಿಸುತ್ತಾ ಬಂದಿರುವ ಅಭಿಮಾನಿಗಳಿಗೆ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ.