ವಿದೇಶಿ ಲೀಗ್ ಆಡಲಿರುವ ಭಾರತದ ಮೊದಲ ಮಹಿಳಾ ಫುಟ್ಬಾಲರ್!

By Suvarna NewsFirst Published Jan 30, 2020, 10:40 AM IST
Highlights

ಭಾರತದ ಮಹಿಳಾ ಫುಟ್ಬಾಲರ್  ಬಾಲಾ ದೇವಿ ಹೊಸ ದಾಖಲೆ ಬರೆದಿದ್ದಾರೆ. ವಿದೇಶಿ ಲೀಗ್ ಫುಟ್ಬಾಲ್ ಒಪ್ಪಂದಕ್ಕ ಸಹಿ ಹಾಕಿರುವ ಮೊದಲ ಭಾರತೀಯ ಫುಟ್ಬಾಲರ್ ಆನ್ನೋ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ. 
 

ಬೆಂಗಳೂರು(ಜ.30): ಭಾರತದ ಹಿರಿಯ ಫುಟ್ಬಾಲ್‌ ಆಟಗಾರ್ತಿ ಬಾಲಾ ದೇವಿ, ಬುಧವಾರ ಸ್ಕಾಟ್ಲೆಂಡ್‌ನ ರೇಂಜ​ರ್ಸ್ ಎಫ್‌ಸಿ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರೊಂದಿಗೆ ವಿದೇಶಿ ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಮಹಿಳಾ ಫುಟ್ಬಾಲರ್‌ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. 

ಇದನ್ನೂ ಓದಿ: ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!.

18 ತಿಂಗಳ ಕಾಲ ಅವರು ತಂಡದೊಂಡಿಗೆ ಆಡಲಿದ್ದಾರೆ. 2010ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಬಾಲಾ ದೇವಿ 58 ಪಂದ್ಯಗಳಲ್ಲಿ 52 ಗೋಲು ಬಾರಿಸಿದ್ದಾರೆ. 15ನೇ ವಯಸ್ಸಿನಲ್ಲೇ ಫುಟ್ಬಾಲ್‌ ವೃತ್ತಿಬದುಕು ಆರಂಭಿಸಿದ್ದ ಅವರು, 120 ದೇಸಿ ಪಂದ್ಯಗಳನ್ನಾಡಿದ್ದು 100ಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ.

ಇದನ್ನೂ ಓದಿ: ISL 2020: ಅಂತಿಮ ಕ್ಷಣದ ಗೋಲಿನಿಂದ ಅಗ್ರ ಸ್ಥಾನಕ್ಕೇರಿದ ATK

ಇದೀಗ ವಿದೇಶಿ ಲೀಗ್ ಟೂರ್ನಿಯಲ್ಲಿ ಮಿಂಚಲು ಬಾಲಾ ದೇವಿ ಸಜ್ಜಾಗಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಬಾಲಾ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ಸವಾಲುಗಳನ್ನು ಎದುರಿಸಲು ಸಿದ್ದನಾಗಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!