
ಕೋಲ್ಕೊತಾ(ಜ.27): ಹೀರೋ ಇಂಡಿಯನ್ ಸೂಪರ್ ಲೀಗ್ ನ 68ನೇ ಪಂದ್ಯದ ಕೊನೆಯ ಕ್ಷಣದಲ್ಲಿ ದಾಖಲಾದ ಗೋಲಿನ ನೆರವನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಮಾಜಿ ಚಾಂಪಿಯನ್ ಎಟಿಕೆ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಈ ಸೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ಪ್ಲೇ ಆಫ್ ಹಂತ ಮತ್ತಷ್ಟು ಕಠಿಣವಾಯಿತು. ಬದಲಿ ಆಟಗಾರನಾಗಿ ಅಂಗಣಕ್ಕಿಳಿದ ಬಲ್ವಂತ್ ಸಿಂಗ್ (90+ ನಿಮಿಷ) ಗಳಿಸಿದ ಗೋಲು ನಾರ್ಥ್ ಈಸ್ಟ್ ತಂಡವನ್ನು ಮೇಲಕ್ಕೇಳದಂತೆ ಮಾಡಿತು.
ಐಎಸ್‌ಎಲ್: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ
ಪಂದ್ಯ ಗೋಲಿಲ್ಲದೆ ಡ್ರಾಗೊಂಡರೆ ನಾರ್ಥ್ ಈಸ್ಟ್ ಗೆ ಸಂಕಷ್ಟವಾಗುವುದು ಸಹಜ. ಆದರೆ ಪಂದ್ಯದ ಪ್ರಥಮಾರ್ಥದ ಫಲಿತಾಂಶ ನಾರ್ಥ್ ಈಸ್ಟ್ ಗೆ ಸೂಕ್ತವಾಗಿಲ್ಲ. 45 ನಿಮಿಷಗಳ ಆಟ ಗೋಲಿಲ್ಲದೆ ಕೊನೆಗೊಂಡಿತು. ಎಟಿಕೆ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ರಾಯ್ ಕೃಷ್ಣ ಅವರಿಗೆ ಗೋಲಿನ ಬರ ನೀಗಿಸುವ ಅವಕಾಶ ಇದ್ದಿತ್ತು.
ಆದರೆ ನಾರ್ಥ್ ಈಸ್ಟ್ ನ ಗೋಲ್ ಕೀಪರ್ ಸುಭಾಶೀಶ್ ರಾಯ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಹೊಸ ಆಟಗಾರ ಆ್ಯಂಡ್ರ್ಯು ಕೆಯೊಗ್ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಅರಿಂದಂ ಭಟ್ಟಾಚಾರ್ಯ ಅದಕ್ಕೆ ಅವಕಾಶ ನೀಡಲಿಲ್ಲ. ದ್ವಿತಿಯಾರ್ಧದಲ್ಲಿ ಗೋಲು ಗಳಿಸಬೇಕಾದ ಅನಿವಾರ್ಯತೆ ನಾರ್ಥ್ ಈಸ್ಟ್ ತಂಡಕ್ಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.