
ಬ್ಯಾಂಬೋಲಿಮ್(ನ.29): 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) (Indian Super League) ಫುಟ್ಬಾಲ್ ಟೂರ್ನಿಯ ಬೆಂಗಳೂರು ಎಫ್‌ಸಿ (Bengaluru FC) ಹಾಗೂ ಕೇರಳ ಬ್ಲಾಸ್ಟರ್ಸ್ (Kerala Blaster) ನಡುವಿನ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದೆ. ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಸುನಿಲ್ ಚೆಟ್ರಿ (Sunil Chhetri) ನೇತೃತ್ವದ ಬಿಎಫ್‌ಸಿ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿತ್ತು. ಆದರೆ ಬಿಎಫ್‌ಸಿ ಆಟಗಾರರು ಹಲವು ಬಾರಿ ಗೋಲು ಹೊಡೆಯುವ ಪ್ರಯತ್ನ ಮಾಡಿದರೂ ಕೇರಳ ತಂಡದ ಗೋಲ್‌ಕೀಪರ್ ಅವಕಾಶ ನೀಡಲಿಲ್ಲ.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್ ಕುರುನಿಯಾನ್ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ (BFC) ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.
ಮೊದಲ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಗೆದ್ದಿದ್ದ ಬಿಎಫ್‌ಸಿ ತಂಡ, 2ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ ಸೋಲನುಭವಿಸಿತ್ತು. ಸದ್ಯ ಬಿಎಫ್‌ಸಿ ಅಂಕಪಟ್ಟಿಯಲ್ಲಿ 4 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಡಿಸೆಂಬರ್ 4ರಂದು ಮುಂಬೈ ಸಿಟಿ ವಿರುದ್ಧ ಸೆಣಸಾಡಲಿದೆ.
ವಿಶ್ವ ಟಿಟಿ: ಕ್ವಾರ್ಟರ್‌ನಲ್ಲಿ ಭಾರತದ ಹೋರಾಟ ಅಂತ್ಯ
ಹೌಸ್ಟನ್(ಅಮೆರಿಕಾ): ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ (World Table Tennis Championship) ಭಾರತ ಅಭಿಯಾನ ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಜೋಡಿ ಸೆಮೀಸ್ ತಲುಪಲು ವಿಫಲ ಆಗುವುದರೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತು.
ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ
ಶನಿವಾರ ನಡೆದ ಮಿಶ್ರ ಡಬಲ್ಸ್ ಅಂತಿಮ 8ರ ಸುತ್ತಿನ ಸ್ಪರ್ಧೆಯಲ್ಲಿ ಮನಿಕಾ ಬಾತ್ರಾ-ಜಿ.ಸತ್ಯನ್ ಜೋಡಿ, ಜಪಾನಿನ ಹರಿಮೊಟೊ-ಹಯಾತ ಹಿನಾ ಜೋಡಿ ವಿರುದ್ಧ 1-3 (5-11, 2-11, 11-7, 9-11) ಅಂತರದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿತು. ಇನ್ನು, ಮಹಿಳಾ ಡಬಲ್ಸ್‌ನಲ್ಲಿ ಮನಿಕಾ-ಅರ್ಚನಾ ಕಾಮತ್ ಜೋಡಿ, ಲಕ್ಸೆಂಬರ್ಗ್‌ನ ಸರಾಹ್-ಕ್ಸಿಯಾ ಲಿಯಾನ್ ಜೋಡಿ ವಿರುದ್ಧ 0-3 (1-11 6-11 8-11) ಅಂತರದಲ್ಲಿ ಸೋಲನುಭವಿಸಿತು.
ಪ್ಯಾರಾ ಪವರ್‌ಲಿಫ್ಟಿಂಗ್: ಪರಮ್‌ಜೀತ್‌ಗೆ ಕಂಚು
ಟಿಬಿಲಿಸಿ(ಜಾರ್ಜಿಯಾ): ಭಾರತದ ಪರಮ್‌ಜೀತ್ ಕುಮಾರ್ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಪ್ಯಾರಾ ಪವರ್‌ಲಿಫ್ಟರ್ ಎಂಬ ದಾಖಲೆ ಬರೆದಿದ್ದಾರೆ.
Indonesia Open Badminton: ಸಿಂಧು ಸೋಲಿನೊಂದಿಗೆ ಭಾರತದ ಹೋರಾಟ ಅಂತ್ಯ
ಭಾನುವಾರ ನಡೆದ ಪುರುಷರ 49 ಕೆ.ಜಿ. ವಿಭಾಗದಲ್ಲಿ ಕುಮಾರ್ 158 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದುಕೊಂಡರು. ಕುಮಾರ್ ಧನೆಗೆ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ, ಭಾರತೀಯ ಕ್ರೀಡಾ ಪ್ರಾಧಿಕಾರ ಅಭಿನಂದನೆ ಸಲ್ಲಿಸಿದೆ.
‘ಕೂ’ ಸೇರಿದ ಬುಲ್ಸ್
ಬೆಂಗಳೂರು: ಪ್ರೊ ಕಬ್ಬಡಿ ಲೀಗ್‌ಗೆ (Pro Kabaddi League) ತಂಡಗಳು ಸಜ್ಜಾಗುತ್ತಿದ್ದು, ಇದರ ನಡುವೆ ಬೆಂಗಳೂರು ಬುಲ್ಸ್ ತಂಡವು ಬಹುಭಾಷಾ ಮೈಕ್ರೊ ಬ್ಲಾಗಿಂಗ್ ಪ್ಲಾಟ್‌ಫಾರಂ 'ಕೂ’ನಲ್ಲಿ ಖಾತೆ ತೆರೆದಿದೆ. @bengalurubullsofficial ತಂಡದ ಅಧಿಕೃತ ಖಾತೆ ಆಗಿದ್ದು, ಸ್ಥಳೀಯ ಭಾಷೆ ಕನ್ನಡದಲ್ಲೇ ಅಭಿಮಾನಿಗಳ ಜೊತೆ ಸಂವಹನ ನಡೆಸುವುದಾಗಿ ಫ್ರಾಂಚೈಸಿ ತಿಳಿಸಿದೆ. ಅಭಿಮಾನಿಗಳಿಗಾಗಿ ಮೊದಲ ಪೋಸ್ಟ್‌ನಲ್ಲಿ ತಂಡದ ಪ್ರಮುಖ ಆಟಗಾರರು ಭಾರ ಎತ್ತುವ ವಿಡಿಯೋವನ್ನು ಬುಲ್ಸ್ ಪೋಸ್ಟ್ ಮಾಡಿದೆ. ಡಿ.22ರಿಂದ ಪ್ರೊ ಕಬ್ಬಡಿ 8ನೇ ಆವೃತ್ತಿ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.