ವೈಫಲ್ಯ ಮುಚ್ಚಿ ಹಾಕಲು ಭಾರತ ಫುಟ್ಬಾಲ್ ಬಗ್ಗೆ ಇಗೋರ್ ಸ್ಟಿಮಾಕ್ ಆರೋಪ: AIFF ಆಕ್ರೋಶ

By Kannadaprabha News  |  First Published Jun 25, 2024, 12:13 PM IST

ಈ ಬಗ್ಗೆ ಸೋಮವಾರ ದೀರ್ಘ ಪ್ರಕಟಣೆ ಹೊರಡಿಸಿರುವ ಎಐಎಫ್‌ಎಫ್, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸ್ಟಿಮಾಕ್ ಭಾರತದ ಫುಟ್ಬಾಲ್ ವ್ಯವಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳು ಅವರ ವೃತ್ತಿಗೆ ಸೂಕ್ತವಲ್ಲ ಎಂದಿದೆ.


ನವದೆಹಲಿ: ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಇಗೊರ್‌ ಸ್ಟಿಮಾಕ್‌ರನ್ನು ವಜಾಗೊಳಿಸಿದ ನಿರ್ಧಾರವನ್ನು ಸಮರ್ಥಿಸಿ ಕೊಂಡಿರುವ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್), ಸ್ಟಿಮಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಫುಟ್ಬಾಲ್‌ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ತಮ್ಮ ವೈಫಲ್ಯದ ಹೊಣೆ ಹೊತ್ತುಕೊಳ್ಳುವ ಬದಲು ಇಡೀಫುಟ್ಬಾಲ್‌ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ ಎಂದುಕೆಂಡಕಾರಿದೆ.

ಈ ಬಗ್ಗೆ ಸೋಮವಾರ ದೀರ್ಘ ಪ್ರಕಟಣೆ ಹೊರಡಿಸಿರುವ ಎಐಎಫ್‌ಎಫ್, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸ್ಟಿಮಾಕ್ ಭಾರತದ ಫುಟ್ಬಾಲ್ ವ್ಯವಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳು ಅವರ ವೃತ್ತಿಗೆ ಸೂಕ್ತವಲ್ಲ ಎಂದಿದೆ.

Tap to resize

Latest Videos

undefined

ಬಾಂಗ್ಲಾ ಎದುರು ಗೆದ್ದು ಸೆಮೀಸ್‌ಗೇರಿದ ಆಫ್ಘಾನ್‌..! ಆಸೀಸ್ ಸೆಮೀಸ್ ಕನಸು ನುಚ್ಚುನೂರು

ಇದೇ ವೇಳೆ ಸ್ಟಿಮಾಕ್ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿ ಮುಚ್ಚಿಟ್ಟಿರುವುದಕ್ಕೂ ಎಐಎಫ್‌ಎಫ್ ಕಿಡಿಕಾಡಿದೆ. 'ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಸ್ಟಿಮಾಕ್ ನೀಡಿರುವ ಹೇಳಿಕೆ ಆಘಾತಕಾರಿ. ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ವೈದ್ಯಕೀಯ ವಿವರ ಮುಚ್ಚಿಟ್ಟು ಕೋಚ್ ಮುಂದುವರಿದಿದ್ದರು. ಇದು ಎಷ್ಟರ ಮಟ್ಟಿಗೆ ಸರಿ' ಎಂದು ಪ್ರಶ್ನಿಸಿದೆ.

ಅಲ್ಲದೆ, ಆಟಗಾರರ ಆಯ್ಕೆಗೆ ಜ್ಯೋತಿಷಿಯ ಮೊರೆ ಹೋಗಿದ್ದ ಬಗ್ಗೆಯೂ ಸ್ಟಿಮಾಕ್ ವಿರುದ್ಧ ಎಐಎಫ್‌ಎಫ್ ಟೀಕೆ ವ್ಯಕ್ತಪಡಿಸಿದೆ. ಫಿಫಾ ಅರ್ಹತಾ ಟೂರ್ನಿಯ ಮಹತ್ವದ ಪಂದ್ಯಕ್ಕೂ ಮುನ್ನ ಸ್ಟಿಮಾಕ್ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿಲ್ಲ. ಅವರಿಗೆ ಎಲ್ಲಾ ಬೆಂಬಲ ನೀಡಿದ ಹೊರತಾಗಿಯೂ ತಮ್ಮ ಹುದ್ದೆಗೆ ಘನತೆ ತರಲು ವಿಫಲರಾದರು. ತಮ್ಮ ಹುದ್ದೆ ಉಳಿಸಿಕೊಳ್ಳುವುದರ ಕಡೆಗೆ ಅವರು ತೋರಿದ ಆಸಕ್ತಿಯನ್ನು ತಂಡಕ್ಕೆ ನೀಡಬೇಕಿದ್ದ ಮಾರ್ಗದರ್ಶನದ ಕಡೆಗೆ ನೀಡಲಿಲ್ಲ' ಎಂದು ಎಐಎಫ್‌ಎಫ್‌ ಆಕ್ರೋಶ ವ್ಯಕ್ತಪಡಿಸಿದೆ.

ತಾರಾ ರೆಸ್ಲರ್‌ ಬಜರಂಗ್‌ ಪೂನಿಯಾ ಮತ್ತೆ ಸಸ್ಪೆಂಡ್‌..!

2019ರಿಂದಲೂ ಭಾರತದ ಕೋಚ್ ಆಗಿದ್ದ ಕೊವೇಷಿಯಾದ ಸ್ಟಿಮಾಕ್‌ರನ್ನು ಇತ್ತೀಚೆಗಷ್ಟೇ ವಜಾಗೊಳಿಸಲಾಗಿತ್ತು. ಬಳಿಕ ಸ್ಟಿಮಾಕ್ ಭಾರತೀಯ ಫುಟ್ಬಾಲ್ ಫೆಡರೇಶನ್ ವಿರುದ್ಧ ಬಹಿರಂಗವಾಗಿ ಟೀಕೆಗಳನ್ನು ಮಾಡಿದ್ದರು.

click me!