ಇಂದಿನಿಂದ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌: ಭಾರತ ಆತಿಥ್ಯ

By Suvarna News  |  First Published Jan 20, 2022, 1:01 PM IST

* 2022ರ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಟೂರ್ನಿಗೆ ಚಾಲನೆ

* ಉದ್ಘಾಟನಾ ಪಂದ್ಯದಲ್ಲಿ 8 ಬಾರಿ ಚಾಂಪಿಯನ್‌ ಚೀನಾ, ಚೈನೀಸ್‌ ತೈಪೆ ಸವಾಲನ್ನು ಎದುರಿಸಲಿದೆ

* ಆತಿಥೇಯ ಭಾರತಕ್ಕೆ ಇರಾನ್‌ ಎದುರಾಗಲಿದೆ


ಮುಂಬೈ(ಜ.20): 2022ರ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಟೂರ್ನಿಗೆ (AFC Women's Asian Cup) ಗುರುವಾರ ಚಾಲನೆ ದೊರೆಯಲಿದ್ದು, 20ನೇ ಆವೃತ್ತಿಗೆ ಭಾರತ ಆತಿಥ್ಯ ವಹಿಸಲಿದೆ. ಮುಂಬೈ, ನವಿ ಮುಂಬೈ ಹಾಗೂ ಪುಣೆಯಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತ ಸೇರಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಬರೋಬ್ಬರಿ 43 ವರ್ಷಗಳ ಬಳಿಕ ಭಾರತ ಎರಡನೇ ಬಾರಿಗೆ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಟೂರ್ನಿ ಆತಿಥ್ಯ ವಹಿಸುತ್ತಿದೆ. 

ಉದ್ಘಾಟನಾ ಪಂದ್ಯದಲ್ಲಿ 8 ಬಾರಿ ಚಾಂಪಿಯನ್‌ ಚೀನಾ, ಚೈನೀಸ್‌ ತೈಪೆ ಸವಾಲನ್ನು ಎದುರಿಸಲಿದೆ. ಗುರುವಾರ ಆತಿಥೇಯ ಭಾರತಕ್ಕೆ (Indian Women's Football Team) ಇರಾನ್‌ ಎದುರಾಗಲಿದೆ. ಒಂದು ವೇಳೆ ಭಾರತ ಮಹಿಳಾ ಫುಟ್ಬಾಲ್ ತಂಡವು ಫೈನಲ್ ಪ್ರವೇಶಿಸಿದರೆ, 2023ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ (FIFA World Cup 2023) ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಪಡೆದುಕೊಳ್ಳಲಿದೆ. ಭಾರತ ಮಹಿಳಾ ಫುಟ್ಬಾಲ್ ತಂಡವು ಸದ್ಯ ವಿಶ್ವ ಫಿಫಾ ಶ್ರೇಯಾಂಕದಲ್ಲಿ 55ನೇ ಸ್ಥಾನದಲ್ಲಿದೆ. ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿರುವ ಭಾರತ ತಂಡವು ಏಷ್ಯಾದ ಶ್ರೇಯಾಂಕದಲ್ಲಿ 11ನೇ ಸ್ಥಾನ ಪಡೆದಿದೆ.

Latest Videos

undefined

ಡಿವೈ ಪಾಟೀಲ್‌ ಮೈದಾನದಲ್ಲಿ ಆತಿಥೇಯ ಭಾರತ ತಂಡವು ಇರಾನ್ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಭಾರತ ಇರುವ ಗುಂಪಿನಲ್ಲೇ ಚೀನಾ ಹಾಗೂ ಚೈನೀಶ್ ತೈಪೆ ತಂಡಗಳು ಸಹ ಸ್ಥಾನ ಪಡೆದಿವೆ. ಭಾರತ ತಂಡವು ಕ್ವಾರ್ಟರ್‌ ಫೈನಲ್ ಹಂತವನ್ನು ಅನಾಯಾಸವಾಗಿ ತಲುಪುವ ವಿಶ್ವಾಸವಿದೆ ಎಂದು ಭಾರತ ಮಹಿಳಾ ಫುಟ್ಬಾಲ್ ತಂಡದ ಕೋಚ್ ಥಾಮಸ್ ದೆನ್ನರ್‌ಬೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕೊರೋನಾ (Coronavirus) ಸವಾಲಿನ ನಡುವೆಯೇ ಭಾರತ ಮಹಿಳಾ ಫುಟ್ಬಾಲ್ ತಂಡವು ಕಳೆದ ವರ್ಷ ಕೆಲವು ವಿದೇಶಿ ಪ್ರವಾಸ ಕೈಗೊಳ್ಳುವ ಮೂಲಕ ಸಾಕಷ್ಟು ತಯಾರಿ ನಡೆಸಿದೆ. ಯುಎಇ ಹಾಗೂ ಬೆಹ್ರೇನ್‌ನಲ್ಲಿ ಪಂದ್ಯಾಟಗಳನ್ನು ಆಡುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ವೃದ್ದಿಸಿಕೊಂಡಿದೆ. ಆದರೆ ಇದೀಗ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ತಂಡದ ಇಬ್ಬರು ಆಟಗಾರ್ತಿಯರಿಗೆ ಕೋವಿಡ್ ದೃಢಪಟ್ಟಿದ್ದು, ಭಾರತ ತಂಡದ ಪಾಲಿಗೆ ಅಲ್ಪ ಹಿನ್ನೆಡೆಯಾಗುವಂತೆ ಮಾಡಿದೆ. ಸದ್ಯ ಆ ಇಬ್ಬರು ಫುಟ್ಬಾಲ್ ಆಟಗಾರ್ತಿಯರು ಐಸೋಲೇಷನ್‌ನಲ್ಲಿದ್ದಾರೆ.

Big big day for not only National Women’s team but entire nation as our will be out representing 🇮🇳 later tonight in The AFC Asian Cup 2022.
Now it’s our time to motivate & encourage them.
GoodLuck Girls 💪🏻 & Coaching Staffs👍 pic.twitter.com/DFC2cuZQm3

— Nirmal Chettri (@nirmalchettri03)

4 ವರ್ಷದ ಪುಟ್ಟ ಅಭಿಮಾನಿಯತ್ತ ಕೈ ಬೀಸಿದ ಟೊಟೆನ್‌ಹ್ಯಾಮ್ ಫುಟ್‌ಬಾಲ್ ಪ್ಲೇಯರ್‌.. ಬಾಲಕಿಯ ಖುಷಿ ನೋಡಿ

ಆಸ್ಪ್ರೇಲಿಯಾ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌, ಇಂಡೋನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ವಿಯಾಟ್ನಾಂ, ಮ್ಯಾನ್ಮಾರ್‌ ಸಹ ಕಣಕ್ಕಿಳಿಯಲಿವೆ. ಫೆಬ್ರವರಿ 6ಕ್ಕೆ ಟೂರ್ನಿಯ ಫೈನಲ್‌ ನಿಗದಿಯಾಗಿದೆ. ಭಾರತ 2ನೇ ಬಾರಿಗೆ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಈ ಮೊದಲು 1979ರಲ್ಲಿ ಭಾರತದಲ್ಲಿ ಪಂದ್ಯಾವಳಿ ನಡೆದಿತ್ತು. 1979, 1983ರಲ್ಲಿ ರನ್ನರ್‌-ಅಪ್‌ ಆಗಿದ್ದ ಭಾರತ, 2003ರ ಬಳಿಕ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದೆ.

As our get set to play their first match against today at the AFC Women's Asian Cup 2022, we wish them the very best for their campaign. ⚽

Catch the action live at 07:30 PM IST on and . pic.twitter.com/dEvQwMxDM5

— Odisha Sports (@sports_odisha)

ಭಾರತದ ಅಗ್ರ ಜಾವೆಲಿನ್‌ ಪಟು ಡೋಪ್‌ ಟೆಸ್ಟ್‌ ಫೇಲ್‌!

ನವದೆಹಲಿ: ಭಾರತದ ಅಗ್ರ ಜಾವೆಲಿನ್‌ ಥ್ರೋ (Javelin Throw) ಪಟು ಒಬ್ಬರನ್ನು ಡೋಪಿಂಗ್‌ ಪ್ರಕರಣದಲ್ಲಿ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌(ಎಎಫ್‌ಐ) ತಾತ್ಕಾಲಿಕವಾಗಿ ಅಮಾನತು ಮಾಡಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ(ನಾಡಾ) ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಮುಗಿದು ಕೆಲ ದಿನಗಳ ಬಳಿಕ ನಡೆಸಿದ್ದ ಪರೀಕ್ಷೆಯಲ್ಲಿ ನಿಷೇಧಿತ ಮದ್ದು ಸೇವನೆ ಪತ್ತೆಯಾಗಿದೆ ಎನ್ನಲಾಗಿದೆ

ಆದರೆ ಆ ಕ್ರೀಡಾಪಟು ಯಾರು ಎನ್ನುವುದನ್ನು ಎಎಫ್‌ಐ ಇನ್ನೂ ಬಹಿರಂಗಗೊಳಿಸಿಲ್ಲ. ಅಮಾನತುಗೊಂಡಿರುವ ಅಥ್ಲೀಟ್‌ ಏಷ್ಯನ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಎಂದು ತಿಳಿದುಬಂದಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು ಎಂದು ವರದಿಯಾಗಿದೆ.

click me!