ಬಿಜೆಪಿ ಸೇರಿದ 24 ಗಂಟೆಯಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಿದ ಮಾಜಿ ಫುಟ್ಬಾಲ್ ಪಟು ಹುಸೈನ್!

By Suvarna NewsFirst Published Jul 23, 2020, 2:31 PM IST
Highlights

ವಿದಾಯದ ಬಳಿಕ ಕ್ರೀಡಾಪಟುಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಇದರಲ್ಲಿ ಹಲವರು ಯಶಸ್ವಿಯಾಗಿದ್ದರೆ, ಮತ್ತೆ ಕೆಲವರು ಮೊದಲ ಪ್ರಯತ್ನದಲ್ಲೇ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಭಾರತದ ಮಾಜಿ ಫುಟ್ಬಾಲ್ ಪಟು ಬಿಜೆಪಿ ಸೇರಿದ 24 ಗಂಟೆಯಲ್ಲೇ ರಾಜಕೀಯಕ್ಕೇ ಗುಡ್‌ಬೈ ಹೇಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೋಲ್ಕತಾ(ಜು.23): ಭಾರತದ ತಂಡದ ಮಾಜಿ ಫುಟ್ಬಾಲ್, ಮೊಹನ್‌ಬಗನ್ ತಂಡದ ಸದಸ್ಯ ಮೆಹ್ತಾಬ್ ಹುಸೈನ್ ಬಿಜೆಪೆ ಪಕ್ಷಕ್ಕೆ ಸೇರಿಕೊಂಡಿದ್ದರು. ಆದರೆ ಕೇವಲ 24 ಗಂಟೆಯಲ್ಲಿ ತಾನು ಯಾವುದೇ ರಾಜಕೀಯ ಪಕ್ಷದಲ್ಲಿ ಮುಂದುವರಿಯುವುದಿಲ್ಲ. ಭವಿಷ್ಯದಲ್ಲೂ ತಾನೂ ಯಾವ ರಾಜಕೀಯ ಪಕ್ಷದೊಂದಿದೆ ಗುರುತಿಸಿಕೊಳ್ಳುವುದಿಲ್ಲ ಎಂದು ಮೆಹ್ತಾಬ್ ಹುಸೈನ್ ಹೇಳಿದ್ದಾರೆ. ಈ ಮೂಲಕ 24 ಗಂಟೆಯಲ್ಲಿ ರಾಜಕೀಯವನ್ನೇ ತೊರೆದಿದ್ದಾರೆ.

ಖಾಲಿ ಕ್ರೀಡಾಂಗಣದಲ್ಲಿ ಅಭಿ​ಮಾ​ನಿ​ಗಳ ಕಟೌಟ್‌ ಹಾಕಿ ಫುಟ್ಬಾಲ್ ಆರಂಭ!...

ಇದು ನನ್ನ ವೈಯುಕ್ತಿ ನಿರ್ಧಾರವಾಗಿದೆ. ರಾಜಕೀಯ ತೊರೆಯಲು ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ. ಕ್ರೀಡಾಪಟುವಾಗಿರುವ ನನ್ನನ್ನು ರಾಜಕೀಯ ವ್ಯಕ್ತಿಯಾಗಿ ಕುಟುಂಬಸ್ಥರು, ಆಪ್ತರು, ಕ್ರೀಡಾಭಿಮಾನಿಗಳು ನೋಡಲು ಇಷ್ಟವಿಲ್ಲ. ಹೀಗಾಗಿ ರಾಜಕೀಯದಿಂದಲೇ ದೂರ ಸರಿಯುತ್ತಿದ್ದೇನೆ ಎಂದು ಮೆಹ್ತಾಬ್ ಹುಸೈನ್ ಹೇಳಿದ್ದಾರೆ.

ಭಾರತದ ಪರ 30 ಪಂದ್ಯಗಳನ್ನಾಡಿರುವ ಹುಸೈನ್ 2 ಗೋಲು ಸಿಡಿಸಿದ್ದಾರೆ. ಫುಟ್ಬಾಲ್ ಪಟುವಾಗಿ ಹಲವು ಕ್ಲಬ್ ಪರ ಆಡಿದ್ದ ಮೆಹ್ತಾಬ್ ಹುಸೈನ್, ಸಾರ್ವಜನಿಕರ ಸೇವೆಗಾಗಿ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಕೋಲ್ಕತಾದಲ್ಲಿನ ಬಿಜೆಪಿ ಕಚೇರಿಯಲ್ಲಿ ಹುಸೈನ್‌ಗೆ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಗಿತ್ತು. 

ಬಿಜೆಪಿ ಸೇರಿದ ಬೆನ್ನಲ್ಲೇ ಪತ್ನಿ ಹಾಗೂ ಮಕ್ಕಳು ನಿರಾಸೆಗೊಂಡಿದ್ದರು. ಕ್ರೀಡಾಪಟುವಾಗಿಯೇ ನೋಡ ಬಯಸಿದ್ದ ಕುಟುಂಬಸ್ಥರಿಗೆ ರಾಜಕೀಯ ವ್ಯಕ್ತಿಯಾಗಿ ಕೊಂಚವೂ ಇಷ್ಟವಿರಲಿಲ್ಲ. ಹೀಗಾಗಿ ರಾಜಕೀಯದಿಂದಲೇ ಹಿಂದೆ ಸರಿದಿದ್ದೇನೆ ಎಂದು ಹುಸೈನ್ ಹೇಳಿದ್ದಾರೆ.

ಹುಸೈನ್ ದಢೀರ್ ರಾಜಕೀಯ ನಿವೃತ್ತಿ ಹಿಂದೆ ತೃಣಮೂಲ ಕಾಂಗ್ರೆಸ್(TMC)ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಮೆಹ್ತಾಬ್ ಹುಸೈನ್‌ಗೆ ಬೆದರಿಕೆ ಹಾಕಲಾಗಿದೆ. ಈ ಹಿಂದೆಯೂ ಪಶ್ಚಿಮ ಬಂಗಾಳದಲ್ಲಿ ಹಲವರು ಬಿಜೆಪಿ ಸೇರಿದ ಬಳಿಕ ರಾಜಕೀಯಕ್ಕೆ ಗುಡ್ ಬೈ ಹೇಳಿದ ಘಟನೆಗಳು ನಡೆದಿವೆ. ಬಿಜೆಪಿ ಸೇರುವ ಉತ್ಸಾಹಿ ಯುವಕರಿಗೆ ತೃಣಮೂಲ ಕಾಂಗ್ರೆಸ್ ಬೆದರಿಕೆ ಹಾಕಿದೆ ಎಂದು ಬಿಜೆಪಿ ಕಾರ್ಯದರ್ಶಿ ಸಾಯಂತನ ಬಸು ಆರೋಪಿಸಿದ್ದಾರೆ.

click me!