ಸ್ವಾರ್ಥ ಎಂಬುದು ಮನುಷ್ಯ ಸಹಜ ಗುಣ. ಇದು ಮಿತಿಯಲ್ಲಿದ್ದರೆ ಇತರ ಯಾವುದೇ ಜನರಿಗೆ ತೊಂದರೆ ಆಗುವುದಿಲ್ಲ. ಆದರೆ, ಅದು ಅತಿಯಾದರೆ ದುರಾಸೆಗೆ ತಿರುಗುತ್ತದೆ. ಇಂತಹ ಅತಿಯಾದ ಸ್ವಾರ್ಥ ಮನೋಭಾವ ಹೊಂದಿರುವ ಜನರು ಈ ಕೆಳಗೆ ನೀಡಿರುವ ರಾಶಿ ನಕ್ಷತ್ರಗಳ ಅಡಿಯಲ್ಲಿ ಜನಿಸುತ್ತಾರೆ..
ಹಲವು ಸಂದರ್ಭಗಳಲ್ಲಿ ನಾವು ನಿಸ್ವಾರ್ಥ ಮನೋಭಾವ ಹೊಂದಬೇಕು ಎಂದು ಬಯಸಿದರೂ ಅದು ಕಷ್ಟ, ಸ್ವಾರ್ಥ ಒಂದು ಅನಿಯಂತ್ರಿತ ಬಯಕೆ. ಸ್ವಾರ್ಥವು ಜನರಲ್ಲಿ ಅತ್ಯಂತ ದುರಾಸೆಯನ್ನು ಉಂಟುಮಾಡುತ್ತದೆ ಹಾಗೂ ತಮಗೆ ನ್ಯಾಯೋಚಿತವಾಗಿ ಸಿಗಬೇಕಾದ ಪಾಲಿಗಿಂತ ಹೆಚ್ಚಿನದನ್ನು ಬಯಸುವಂತೆ ಮಾಡುತ್ತದೆ. ಇದು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸದೆ ಅವರು ತಮ್ಮ ಅಗತ್ಯತೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ತಮ್ಮ ಹಂಬಲವನ್ನು ಪೂರೈಸಲು ಯಾವುದೇ ಹೆಜ್ಜೆಯನ್ನು ಬೇಕಾದರೂ ತೆಗೆದುಕೊಳ್ಳಬಹುದು. ಇಂತಹ ದುರಾಸೆಯಿಂದ ತುಂಬಿರುವ ರಾಶಿಚಕ್ರ ಚಿಹ್ನೆಗಳ ಪಟ್ಟಿ (List) ಇಲ್ಲಿದೆ.
ಮೇಷ ರಾಶಿ (Aries)
ಮೇಷ ರಾಶಿಯವರು ತಮ್ಮ ಗುರಿಗಳನ್ನು ಹೇಗೆ ಸಾಧಿಸಬೇಕೆಂದು ತಿಳಿದಿದ್ದಾರೆ. ತಮ್ಮ ಸಾಲಾದ ಆಸೆಗಳನ್ನು (Desires) ಪೂರೈಸಿಕೊಳ್ಳಲು ಇವರು ಯಾವುದೇ ಅಪಾಯಕಾರಿ ಹಂತಗಳಿಗೆ ಹೋಗಲೂ ಸಿದ್ಧರಿರುತ್ತಾರೆ. ಒಟ್ಟಿನಲ್ಲಿ ತಮ್ಮ ಅಹಂಗಳನ್ನು (Ego) ತೃಪ್ತಿ ಪಡಿಸಿಕೊಳ್ಳುವುದು ಮಾತ್ರವೇ ಇವರಿಗೆ ಮುಖ್ಯವಾಗಿರುತ್ತದೆ. ಇದು ಮಾತ್ರವಲ್ಲದೆ ಇತರ ಜನರನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಂಡು ಬಿಟ್ಟು ಬಿಡುವ ಗುಣ ಈ ರಾಶಿ ನಕ್ಷತ್ರಕ್ಕೆ ಇದೆ.
ಇದನ್ನೂ ಓದಿ: Pisces ವ್ಯಕ್ತಿಯನ್ನು ಇಷ್ಟ ಪಡ್ತಿದೀರಾ? ಅವರ ಗಮನ ಸೆಳೆಯಲು ಇಲ್ಲಿವೆ ಟಿಪ್ಸ್!
ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ತಮ್ಮ ಗುರಿಗಳನ್ನು ಸಾಧಿಸಲು ಬಹು ಸುಲಭವಾಗಿ ಸ್ವಾರ್ಥಿಗಳಾಗುತ್ತಾರೆ (Selfish). ಅವರು ಮಾಡುವ ಪ್ರತಿಯೊಂದರಲ್ಲೂ ತಮ್ಮದೇ ಆದ ಲಾಭವನ್ನು ನೋಡಲು ಬಯಸುತ್ತಾರೆ. ಅವರು ಇತರರ ಎದುರಿಗೆ ಸಕ್ಕರೆಯಂತ ಸಿಹಿ ಮುಖದವರಾಗಿ ಕಾಣಿಸಬಹುದು. ಆದರೆ, ಅದೇ ಸತ್ಯವಲ್ಲ ಅವರ ಸಲುವಾಗಿ ಸಹಾಯ (Help) ಮಾಡಿದ ಜನರನ್ನು ಅವರ ಕೆಲಸ ಮುಗಿದ ನಂತರ, ಹಿಂತಿರುಗಿಯೂ ನೋಡದೆ ಮುಂದೆ ನಡೆಯುವ ಸ್ವಭಾವ ಕನ್ಯಾ ರಾಶಿಯಲ್ಲಿ ಜನಿಸಿದ ಜನರಲ್ಲಿ ಕಾಣಬಹುದು.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಗಳು, ಅವರು ಯಾವಾಗಲೂ ಇತರರಿಂದ ಭಾವನಾತ್ಮಕ ಬೆಂಬಲವನ್ನು (Emotional Support) ಪಡೆಯಲು ಬಯಸುತ್ತಾರೆ. ಅವರ ಆರಾಮ ಮತ್ತು ಅವಶ್ಯಕತೆಯೇ ಅವರ ಮೊದಲ ಆದ್ಯತೆಯಾಗಿರುವ (Importance) ಕಾರಣ ಇತರರ ಅಗತ್ಯಗಳನ್ನು ಪರಿಗಣಿಸಲು ಮರೆಯುತ್ತಾರೆ. ಜೊತೆಗೆ ಬೇರೆಯವರ ಮೇಲೆ ಸಹಾನುಭೂತಿಯಿಲ್ಲದ ನಿಷ್ಠುರವಾಗಿ ವರ್ತಿಸುತ್ತಾರೆ. ಅವರು ತಮ್ಮ ಅತಿಯಾದ ಸೂಕ್ಷ್ಮ ಮತ್ತು ಭಾವನಾತ್ಮಕ ವರ್ತನೆಯನ್ನು ತೃಪ್ತಿಪಡಿಸಲು ದುರಾಸೆ ಮತ್ತು ಸ್ವಾರ್ಥಿಗಳಾಗಿ ಬದಲಾಗುವ ಸ್ವಭಾವವನ್ನು (Character) ಹೊಂದಿದ್ದಾರೆ.
ಇದನ್ನೂ ಓದಿ: Messy Zodiacs: ಮನೆಯನ್ನು ಸಂತೆ ಮಾರ್ಕೆಟ್ ತರಾ ಇಟ್ಕೊಳ್ಳುವ ರಾಶಿಗಳಿವು!
ಸಿಂಹ ರಾಶಿ (Leo)
ಸಿಂಹ ರಾಶಿಯವರು ತಮ್ಮ ನಾಯಕತ್ವದ (Leadership) ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖವಾಗಿ ಚಾಂಪಿಯನ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯ ನಡುವೆ ಬೇರೆ ಯಾರೇ ಎದುರಿಗೆ ಬಂದರೂ, ಸಿಂಹ ರಾಶಿಯ ಜನರು ಅವರ ಕಡೆಗೆ ಎಂದಿಗೂ ಗಮನ ಹರಿಸುವುದಿಲ್ಲ ಮತ್ತು ನಿರ್ದಯವಾಗಿ (Ruthless) ಅವರನ್ನು ತೊಡೆದುಹಾಕಲೂ ತಯಾರಿಸುತ್ತಾರೆ. ಇಂತಹ ಗುಣಕ್ಕೆ ಅವರ ಸ್ವಾರ್ಥ ಮನೋಭಾವವೇ ಕಾರಣ.
ಮಿಥುನ ರಾಶಿ (Gemini)
ಮಿಥುನ ರಾಶಿಯ ಜನಗಳು ತಮ್ಮ ಸಿಹಿಯಾದ ಮಾತುಗಳಿಂದ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ, ಮತ್ತು ಅದು ಅವರಿಗೆ ಏನಾದರೂ ಒಳ್ಳೆಯದನ್ನು ತರುತ್ತದೆ ಎಂದಾದರೆ ಅವರು ನಿಮ್ಮನ್ನು ನೋಯಿಸಲು (Hurt) ಹಿಂಜರಿಯುವುದಿಲ್ಲ. ನಿಮ್ಮ ಬೆನ್ನ ಹಿಂದೆ ಅವರು ಕ್ರೂರವಾಗಿ (Cruel) ಬದಲಾಗುತ್ತಾರೆ ಮತ್ತು ಅವರ ಸ್ವಂತ ಒಳ್ಳೆಯದಕ್ಕಾಗಿ ಯಾವುದೇ ಸಮಯದಲ್ಲಿ ನಿಮಗೆ ದ್ರೋಹ ಮಾಡಬಹುದು. ಆದರೆ, ನಿಮ್ಮ ಎದುರಿಗೆ ಒಳ್ಳೆಯವರ ಹಾಗೆ ಮುಖವಾಡ ಧರಿಸಿಕೊಂಡಿರುತ್ತಾರೆ.