ದಿನಬೆಳಗಾದರೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವಂಚಕ ಪತಿ, ಕೊಲೆಗಾರ ಪತಿ, ಅಕ್ರಮ ಸಂಬಂಧ ಇತ್ಯಾದಿ ಇತ್ಯಾದಿ ಸುದ್ದಿಗಳು ಸಾಕಷ್ಟು ಕಾಣುತ್ತಲೇ ಇರುತ್ತವೆ. ಇಂಥವರ ನಡುವೆ ನಿಷ್ಠಾವಂತ ಪತಿಯನ್ನು ಹುಡುಕಿದಿರಾದರೆ ಅವರು ಬಹುಷಃ ಈ ನಾಲ್ಕು ರಾಶಿಗಳಲ್ಲಿ ಒಂದಕ್ಕೆ ಸೇರಿರಬೇಕು.
ಪ್ರಾಮಾಣಿಕತೆ ಅನ್ನೋದು ಎಲ್ಲರಲ್ಲಿಯೂ ಇರಬೇಕಾದ ಪ್ರಮುಖ ಗುಣ. ಆದರೆ ವಿಪರ್ಯಾಸವೆಂದರೆ ಅದು ಬಹಳ ಅಪರೂಪಕ್ಕೆ ಕೆಲವರಲ್ಲಿ ಮಾತ್ರ ಕಂಡು ಬರುತ್ತದೆ. ಕೆಲವರು ವ್ಯವಹಾರದಲ್ಲಿ ಪ್ರಾಮಾಣಿಕರಾಗಿರುವವರು ಪ್ರೀತಿಯಲ್ಲಿ ವಂಚಕರಾಗಿರಬಹುದು. ಪ್ರೀತಿಯಲ್ಲಿ ನಿಷ್ಠಾವಂತ(Loyal)ರಾಗಿರುವವರು ಆಸ್ತಿ ಪಾಸ್ತಿಯ ವಿಷಯದಲ್ಲಿ ಮೋಸವೆಸಗಬಹುದು. ಎಲ್ಲೆಡೆ ಸುಳ್ಳು, ಸ್ವಾರ್ಥ, ಮೋಸ, ವಂಚನೆ ಹೆಚ್ಚಿರುವ ಈ ಕಲಿಯುಗದಲ್ಲಿ ಪ್ರಾಮಾಣಿಕ ವ್ಯಕ್ತಿಯೊಬ್ಬ ಸಂಗಾತಿ(Life partner)ಯಾಗಿ ಸಿಕ್ಕರೆ ಅದಕ್ಕಿಂತ ಶುಭಾಶೀರ್ವಾದ ಇನ್ನೊಂದಿಲ್ಲ ಎಂದುಕೊಳ್ಳಬೇಕು. ಏಕೆಂದರೆ ಸಂಬಂಧದಲ್ಲಿ ಪ್ರಾಮಾಣಿಕತೆಯ ಅಗತ್ಯ ಶೇ.100ರಷ್ಟಿದೆ. ದಾಂಪತ್ಯದಲ್ಲಿ ಇಬ್ಬರೂ ಪ್ರಾಮಾಣಿಕರಾಗಿದ್ದಾಗ ಅದು ಹಾಲು ಜೇನಿನಂತೆ ಸಿಹಿಯಾದ ಜೀವನವನ್ನು ಕಟ್ಟಿಕೊಡುತ್ತದೆ.
ನಿಷ್ಠೆಯು ಕೆಲವೇ ಜನರು ಹೊಂದಿರುವ ಒಂದು ಲಕ್ಷಣವಾಗಿದೆ. ನಮ್ಮ ಮಾತನ್ನು ಕೇಳುವ, ನಮಗೆ ವಿಶೇಷ ಭಾವನೆ ಮೂಡಿಸುವ, ತಿಳುವಳಿಕೆಯುಳ್ಳ ಮತ್ತು ನಿಷ್ಠಾವಂತನಾಗಿರುವ ವ್ಯಕ್ತಿಯನ್ನು ಅದ್ಭುತ ಸಂಗಾತಿ ಎನ್ನಬಹುದು. ಏನೇ ಇರಲಿ, ಯಾವಾಗಲೂ ಸತ್ಯವನ್ನು ಮಾತನಾಡುವ ವ್ಯಕ್ತಿಯೊಂದಿಗೆ ಇರುವ ಅವಕಾಶ ಸಿಕ್ಕಿದ್ದರೆ ಅದೊಂದು ಅದೃಷ್ಟವೇ ಸೈ. ನಿಮ್ಮ ಪತಿರಾಯ ಅತ್ಯಂತ ನಿಷ್ಠಾವಂತನಾಗಿದ್ದಾನೆ ಎಂಬ ಹೆಮ್ಮೆ ನಿಮಗಿದ್ದರೆ, ಆತ ಬಹುಷಃ ಈ ಕೆಳಗೆ ಹೇಳಿದ ನಾಲ್ಕರಲ್ಲಿ ಒಂದು ರಾಶಿಗೆ ಸೇರಿರಬೇಕು. ಏಕೆಂದರೆ, ಪ್ರಾಮಾಣಿಕ ಪತಿಗಿರಬೇಕಾದ ಗುಣಗಳು ಈ ರಾಶಿಯವರಲ್ಲಿರುತ್ತದೆ.
ನಿಮ್ಮ ಪಕ್ಕದಲ್ಲಿ ಒಬ್ಬ ನಿಷ್ಠಾವಂತ ಸಂಗಾತಿ ಇರುವುದು ನಿಜಕ್ಕೂ ಒಂದು ಆಶೀರ್ವಾದ. ಆದ್ದರಿಂದ, ಅತ್ಯಂತ ನಿಷ್ಠಾವಂತ ಗಂಡಂದಿರಾಗುವ ರಾಶಿಚಕ್ರ ಚಿಹ್ನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
Astrology Prediction: ಈ ರಾಶಿಗಳಿಗೆ ಚಿನ್ನ ಧರಿಸಿದ್ರೆ ಅದೃಷ್ಟವೋ ಅದೃಷ್ಟ!
ಧನು ರಾಶಿ(Sagittarius)
ಈ ರಾಶಿಯ ಪತಿರಾಯ ವಿನೋದ ಸ್ವಭಾವದವನಾಗಿರುತ್ತಾನೆ. ಆತ ಬಹಳ ನಿಷ್ಠಾವಂತ ಗಂಡನಷ್ಟೇ ಅಲ್ಲ, ಪತ್ನಿಯನ್ನು ಸಂತೋಷವಾಗಿರಿಸಲು ತಮ್ಮ ಕೈಲಾಗುವ ಎಲ್ಲವನ್ನೂ ಮಾಡುತ್ತಾರೆ. ಈ ರಾಶಿಯ ಪತಿ ಮಹಾಶಯ ತುಂಬಾ ಕಾಳಜಿಯುಳ್ಳವನು, ತಮಾಷೆ ಸ್ವಭಾವದವನು ಮತ್ತು ತಮ್ಮ ಸಂಗಾತಿಯನ್ನು ಯಾವಾಗಲೂ ಯಂಗ್ ಆಗಿಡಲು, ನಗಿಸಲು ಮೋಜಿನ ಮಾರ್ಗಗಳನ್ನು ಆಶ್ರಯಿಸುತ್ತಾನೆ. ಈತ ಅತ್ಯಂತ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಪಾಲುದಾರ.
ಮೀನ ರಾಶಿ(Pisces)
ಈ ರಾಶಿಯ ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಹಳಷ್ಟು ಅಂಟಿಕೊಂಡಿರುತ್ತಾರೆ. ಸಂಗಾತಿ ತಮ್ಮ ಬಗ್ಗೆ ಏನು ಯೋಚಿಸುತ್ತಾಳೆ ಎಂಬುದರ ಬಗ್ಗೆ ಇವರು ತುಂಬಾ ಕಾಳಜಿ ವಹಿಸುತ್ತಾರೆ. ತಮ್ಮ ಪತ್ನಿ ಎಂದಿಗೂ ನಿರಾಶೆ ಹಾಗೂ ನೋವನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ತಮ್ಮ ಸ್ವಭಾವಕ್ಕೆ ಹೊರತಾದ ಮಾರ್ಗಗಳನ್ನೂ ಅನುಸರಿಸುತ್ತಾರೆ. ಇವರೆಂದೂ ಪತ್ನಿಯೊಡನೆ ಸುಳ್ಳು ಹೇಳುವುದಿಲ್ಲ.
ಧನು ರಾಶಿಯವರು ರಿಲೇಶನ್ ಶಿಪ್ ನಲ್ಲಿ ಮಾಡೋ ತಪ್ಪುಗಳಿವು
ವೃಷಭ ರಾಶಿ(Taurus)
ಇವರು ಜೀವನದಲ್ಲಿ ಪ್ರಾಮಾಣಿಕತೆ, ಪ್ರೀತಿ ಹಾಗೂ ಆರಾಮಾಗಿರಲು ಬಯಸುತ್ತಾರೆ. ತಮ್ಮ ಪತ್ನಿಯ ಸಂತೋಷಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂದು ಭಾವಿಸಿರುತ್ತಾರೆ. ಹಾಗಾಗಿ ಸದಾ ಅವರ ಖುಷಿ, ನೆಮ್ಮದಿಗಾಗಿ ಕೆಲಸ ಮಾಡುತ್ತಾರೆ. ಸಂಗಾತಿಯ ಗೌರವ ಎಲ್ಲಿಯೂ ಕುಂದಲು ಬಿಡುವುದಿಲ್ಲ. ಸಂಗಾತಿಗೆ ಮೋಸ ಮಾಡುವುದು ಅಥವಾ ಸುಳ್ಳು ಹೇಳುವುದು ಇವರ ಮನಸ್ಸಿನಲ್ಲೂ ಅಂಥ ಯೋಚನೆ ಬರುವುದಿಲ್ಲ.
ಸಿಂಹ(Leo)
ಇವರಿಗೆ ಜೀವನವನ್ನು ಅನುಭವಿಸುವ ಕಲೆ ಗೊತ್ತು. ತಮ್ಮ ಪಯಣದಲ್ಲಿ ಒಂದಾದ ಪತ್ನಿಯನ್ನೂ ಈ ಮೋಜಿನ ಜೀವನಕ್ಕೆ ಸೇರಿಸಿಕೊಂಡು ಅವರನ್ನು ಸುಖವಾಗಿಡುತ್ತಾರೆ. ಪತ್ನಿಯ ಮುಖ ಕೊಂಡ ಬಾಡಿದರೂ ಇವರಿಗೆ ಅರ್ಥವಾಗುತ್ತದೆ. ಅವರ ಮನಸ್ಸಿನ ಮಾತುಗಳನ್ನು ಹೊರ ತೆಗೆಸಿ ಸಮಾಧಾನ ಮಾಡುತ್ತಾರೆ. ಸದಾ ನಗು ನಗುತ್ತಿರುವ ಈ ಪತಿ ಮಹಾಶಯ ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ತಿಳಿವಳಿಕೆ ಮುಖ್ಯವೆಂದು ನಂಬಿದಾತ. ಹಾಗಾಗಿ, ಉತ್ತಮ ಸಂಗಾತಿ ಸಿಕ್ಕರೆ ಆಕೆಯ ಉತ್ತಮೋತ್ತಮ ಗಂಡನಾಗಬಲ್ಲ.