Personality Traits: ಈ ರಾಶಿಯವರು ತಮ್ಮ ಭಾವನೆಗಳನ್ನು ಮುಚ್ಚಿಡೋದ್ರಲ್ಲಿ ನಂಬರ್ ಒನ್!

By Suvarna News  |  First Published Jan 16, 2022, 2:24 PM IST

ಕೆಲವರು ಇರುವುದೇ ಹಾಗೆ, ಅವರ ಮುಖ ನೋಡಿ ಮನಸ್ಸಲ್ಲೇನಾಗ್ತಿದೆ ಅಂತ ಯಾರಿಗೂ ಊಹಿಸಲು ಸಾಧ್ಯವಿಲ್ಲ. ಅವರು ಕೂಡಾ ತಮ್ಮ ಭಾವನೆಗಳನ್ನು ಗುಟ್ಟಿನಂತೆ ಕಾಪಾಡಿಕೊಳ್ತಿರ್ತಾರೆ. 


ಎಲ್ಲರಿಗೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದು ಸುಲಭವಲ್ಲ. ಕೆಲವರು ಪಟಪಟನೆ ಫಿಲ್ಟರ್ ಇಲ್ಲದ ಹಾಗೆ ಮನಸ್ಸಿನಲ್ಲಿರುವುದನ್ನೆಲ್ಲ ಹೇಳಿದರೆ ಮತ್ತೆ ಕೆಲವರು ಎಲ್ಲವನ್ನೂ ಒಳಗೇ ನುಂಗಿಕೊಂಡಿರುತ್ತಾರೆ. ಹೀಗೆ ಮನಸ್ಸನ್ನು ಗುಟ್ಟಿನಂತೆ ಕಾಪಾಡಿಕೊಳ್ಳುವವರ ಫೀಲಿಂಗ್ಸ್ ಯಾರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಅವರ ಸ್ವಭಾವವೇ ಅಂತರ್ಮುಖತೆಯೋ ಅಥವಾ ಹಿಂದೆ ಭಾವನೆಗಳ ಮೇಲೆ ಬಿದ್ದ ಆಗಾಧ ಪೆಟ್ಟಿನ ಕಾರಣಕ್ಕೋ ಅವರು ತಮ್ಮ ಯೋಚನೆಗಳ ಬಗ್ಗೆ ಬಾಯಿ ಬಿಚ್ಚಲಾರರು. 

ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಮುಚ್ಚಿಡುವ, ಅದರಲ್ಲೂ ದುಃಖ, ನೋವುಗಳನ್ನು ಮುಚ್ಚಿಟ್ಟುಕೊಳ್ಳುವ ಸ್ವಭಾವ ಕೆಲ ರಾಶಿಯವರಲ್ಲಿ ಹೆಚ್ಚು. ಅಂಥ ಆರು ಅಂತರ್ಮುಖಿ ರಾಶಿಗಳ ಪಟ್ಟಿ ಇಲ್ಲಿದೆ. 

Tap to resize

Latest Videos

undefined

ಕುಂಭ(Aquarius)
ಕುಂಭ ರಾಶಿಯವರಿಗೆ ನಕಾರಾತ್ಮಕ ಭಾವನೆಗಳನ್ನು ಹೊರ ಹಾಕುವುದು ಬಹಳ ಕಷ್ಟ. ಯಾವುದೇ ವಿಷಯದ ಬಗ್ಗೆ ಕುಂಭ ರಾಶಿಯವರ ಮನಸ್ಸಲ್ಲಿ ಏನಿದೆ ಎಂದು ತಿಳಿವ ಕುತೂಹಲ ಇದ್ದರೆ ಅವರ ಬಳಿ ಹೋಗಿ ನೇರ ಕೇಳುವುದು ಸುಮ್ಮನೆ ಸಮಯ ವ್ಯರ್ಥ. ಯಾಕೆಂದರೆ ತಮ್ಮ ಫೀಲಿಂಗ್ಸ್ ಹೇಳಿಕೊಳ್ಳಬೇಕಾಗಿ ಬಂದ ಸಂದರ್ಭದಲ್ಲಿ ವಿಷಯಾಂತರ ಮಾಡುವರೇ ಹೊರತು ಆ ಬಗ್ಗೆ ಮಾತಾಡುವುದಿಲ್ಲ. ಅದನ್ನು ತಿಳಿಯಲೇಬೇಕೆಂದಿದ್ದಲ್ಲಿ ಅವರ ದೇಹ ಭಾಷೆಯಲ್ಲೇ ಕೊಂಚ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. 

ವೃಷಭ(Taurus)
ಇವರು ತಾವು ತುಂಬಾ ನಂಬಿದ ವ್ಯಕ್ತಿಯ ಬಳಿ ಮಾತ್ರ ಮನಸ್ಸಿನ ನೋವುಗಳು, ಗುಟ್ಟುಗಳು, ತಮಗೆ ಹೇಗನಿಸಿತು ಎಂಬ ಬಗ್ಗೆ ಮಾತಾಡಬಲ್ಲರು. ಆದರೆ, ಇವರ ನಂಬಿಕೆ(trust) ಗಳಿಸುವುದೇ ಕಷ್ಟ. ತಮ್ಮ ಭಾವನೆಗಳನ್ನು ಯಾರೂ ಯಾವುದೇ ರೀತಿಯಲ್ಲೂ ಬಳಸಿಕೊಳ್ಳುವುದಿಲ್ಲ ಎಂಬ ಖಾತ್ರಿಯಾಗುವವರೆಗೂ ಇವರು ಅದನ್ನು ಬಹಳ ಜೋಪಾನ ಮಾಡುತ್ತಾರೆ. ಇನ್ನೊಬ್ಬರು ಇವರ ಬಳಿ ಹೇಳಿಕೊಳ್ಳುವ ಗುಟ್ಟುಗಳನ್ನು ಕೂಡಾ ತುಂಬಾ ಜತನದಿಂದ ಕಾಪಾಡಬಲ್ಲರು. 

Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!

ಕನ್ಯಾ(Virgo)
ತಮ್ಮ ಫೀಲಿಂಗ್ಸ್ ಹೊರ ಹಾಕಲೇಬೇಕಾದ ಅನಿವಾರ್ಯತೆ ಬರುವವರೆಗೂ ಅದನ್ನು ಮುಚ್ಚಿಟ್ಟಿಕೊಳ್ಳುವವರು ಕನ್ಯಾ ರಾಶಿಯವರು. ತಮ್ಮ ಭಾವನೆಗಳ ಬಗ್ಗೆ ಗಪ್‌ಚುಪ್ ಆಗಿರುವ ಇವರು ಮನಸೊಳಗೇ ಮಂಡಿಗೆ ತಿನ್ನುತ್ತಾ, ನೋವನುಭವಿಸುತ್ತಾ, ಅದಕ್ಕೆ ಯೋಚನೆಯಲ್ಲಿಯೇ ಪರಿಹಾರ ಹುಡುಕುತ್ತಾರೆ. ಆದರೆ, ಬಾಯಿ ಬಿಟ್ಟು ಹೇಳುವುದಿಲ್ಲ. ಏನಾದರೂ ಅಪ್ಪಿ ತಪ್ಪಿ ಬಾಯಿ ಬಿಟ್ಟರೆ ಆಮೇಲೆ ಹೇಳಬಾರದಿತ್ತು ಎಂದು ಕೊರಗುವ ಸ್ವಭಾವ ಇವರದ್ದು. ಇಂಥದ್ದು ಒಂದೆರಡು ಬಾರಿ ಆಗುತ್ತಲೇ ಮತ್ತೆಂದೂ ಮನಸ್ಸಿನ ಮಾತನ್ನು ಹೊರ ಹಾಕಲಾರರು. 

ಮಕರ(Capricorn)
ಕೆಲಸದ ವಿಷಯಕ್ಕೆ ಮನಸ್ಸು ಬರಕೂಡದು ಎಂದು ನಂಬುವವರಿವರು. ಕೆಲಸದಲ್ಲೇ ಮುಳುಗಿ ಮನಸ್ಸಿನ ಭಾವನೆಗಳ ಬಗ್ಗೆ ವಿಶ್ಲೇಷಿಸಲೂ ಸ್ವತಃ ಸಿದ್ಧರಿಲ್ಲದ ಇವರು ಮತ್ತೊಬ್ಬರ ಬಳಿ ಮನಸಿನ ಮಾತು ಹೇಳಿಕೊಳ್ಳುವುದು ಅಸಂಭವವೇ ಸರಿ. ತಾವೇನು ರೋಬೋಟ್ ಅಲ್ಲ, ತಮಗೂ ಭಾವನೆಗಳಿವೆ ಎನ್ನುತ್ತಾರೆ. ಅದನ್ನು ಹೇಳಿಕೊಳ್ಳಲು ಸಮಯ ಸಂದರ್ಭ ಬರಬೇಕು ಎನ್ನುತ್ತಾರೆ. ಆದರೆ, ಆ ಸಮಯ ಬರುವುದು ದೂರದ ಮಾತೇ ಸರಿ. 

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ತುಲಾ(Libra)
ಇವರು ತುಂಬಾ ಭಾವಜೀವಿಗಳಾದರೂ ನೋಡುವವರ ಕಣ್ಣಿಗೆ ಭಾವನೆಗಳಿಲ್ಲದವರ ಹಾಗೆ ಕಾಣಿಸುತ್ತಾರೆ. ತಮ್ಮ ಮಾತುಗಳಿಂದ ಮತ್ತೊಬ್ಬರಿಗೆ ಕೆಟ್ಟದ್ದೆನಿಸಬಾರದೆಂಬ ಯೋಚನೆ ಹಾಗೂ ಯಾವುದೇ ಸೀನ್ ಕ್ರಿಯೇಟ್ ಮಾಡಬಾರದೆಂಬ ದೂರದೃಷ್ಟಿಯಿಂದ ಇವರು ಸುಮ್ಮನಿರುವುದೇ ಲೇಸೆಂದು ಕೊಳ್ಳುತ್ತಾರೆ. ತಮಗೆ ಸರಿಯನ್ನಿಸದ ವಿಷಯಗಳ ಹೊರತಾಗಿ ಯಾವುದೇ ಸಮಸ್ಯೆ ಇಲ್ಲದೆ ಈಸಿಗೋಯಿಂಗ್ ಆಗಿ ಇದ್ದು ಬಿಡುತ್ತಾರೆ ಇವರು. 

click me!