ಒಬ್ಬ ಮನುಷ್ಯನಿಗೆ ಉತ್ತಮ ಗುಣ (good quality) ಹಾಗೂ ಉದ್ದೇಶ ಬಹಳ ಮುಖ್ಯ. ಇವು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಒಳ್ಳೆಯ ಉದ್ದೇಶ ಒಳ್ಳೆಯ ರೀತಿಯ ಬದಲಾವಣೆ ನೀಡಿದರೆ, ಕೆಟ್ಟ ಉದ್ದೇಶ ಕೆಟ್ಟ ರೀತಿಯ ಬದಲಾವಣೆ ತರುತ್ತದೆ. ಕೆಲ ರಾಶಿ ಚಕ್ರ (zodiac) ಗಳು ಉತ್ತಮ ಹೃದಯವಂತರಾಗಿರುತ್ತಾರೆ.
ಒಬ್ಬ ಮನುಷ್ಯನಿಗೆ ಉತ್ತಮ ಗುಣ (good quality) ಹಾಗೂ ಉದ್ದೇಶ ಬಹಳ ಮುಖ್ಯ. ಇವು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಒಳ್ಳೆಯ ಉದ್ದೇಶ ಒಳ್ಳೆಯ ರೀತಿಯ ಬದಲಾವಣೆ ನೀಡಿದರೆ, ಕೆಟ್ಟ ಉದ್ದೇಶ ಕೆಟ್ಟ ರೀತಿಯ ಬದಲಾವಣೆ ತರುತ್ತದೆ. ಕೆಲ ರಾಶಿ ಚಕ್ರ (zodiac) ಗಳು ಉತ್ತಮ ಹೃದಯವಂತರಾಗಿರುತ್ತಾರೆ.
ಅತ್ಯಂತ ಕಾಳಜಿ, ಬೆಂಬಲ ಮತ್ತು ತಿಳುವಳಿಕೆಯನ್ನು ಹೊಂದಿರುವ ಜನರು ಸಿಗುವುದು ಅಪರೂಪ. ಅವರು ಯಾವಾಗಲೂ ಸಕಾರಾತ್ಮಕ (Positive) ಮನೋಭಾವವನ್ನು ಹೊಂದಿರುತ್ತಾರೆ. ಮನಸ್ಸಿನಲ್ಲಿ ಒಳ್ಳೆಯ ಉದ್ದೇಶ ಇಟ್ಟುಕೊಂಡಿರುತ್ತಾರೆ. ಅವರದು ತುಂಬಾ ಶುದ್ಧ ಮತ್ತು ಮೃದು ಹೃದಯ. ಇಂತದ ಹೃದಯವಂತರು (Hearty) ಇಂದಿನ ಕಾಲದಲ್ಲಿ ಬಹಳ ಕಡಿಮೆ. ಅಂತಹ ರಾಶಿಚಕ್ರದ ಚಿಹ್ನೆಗಳು ಯಾವುವು? ಇಲ್ಲಿದೆ ಮಾಹಿತಿ
ಕಟಕ ರಾಶಿ (Cancer)
ಕರ್ಕಾಟಕ ರಾಶಿಯವರು ತಮ್ಮ ಪೋಷಣೆ ಮತ್ತು ಸಹಾನುಭೂತಿ (Sympathy) ಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಇತರರ ಯೋಗ ಕ್ಷೇಮ (well-being) ದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಾರೆ ಮತ್ತು ತಮ್ಮ ಪ್ರೀತಿ (Love) ಪಾತ್ರರ ಅಗತ್ಯಗಳನ್ನು ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಈಡೇರಿಸುತ್ತಾರೆ. ಅವರು ಇತರರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಬೆಂಬಲಿಸುತ್ತಾರೆ. ಇತರ ಜನರಿಗೆ ಸಹಾಯ (help) ಮಾಡಲು ಸ್ವಾಭಾವಿಕವಾಗಿ ಅವರು ಒಲವು ತೋರುತ್ತಾರೆ.
ತುಲಾ ರಾಶಿ (Libra)
ತುಲಾ ರಾಶಿಯವರು ಸಂತೋಷ (happiness) ವಾಗಿ ಹಾಗೂ ಪ್ರಾಮಾಣಿಕವಾಗಿ (Sincerely) ಇರಲು ಬಯಸುತ್ತಾರೆ. ಅತ್ಯಂತ ಸಾಮಾಜಿಕವಾಗಿರುವುದರ ಜೊತೆಗೆ, ತುಲಾ ರಾಶಿಯವರು ಉತ್ತಮ ವಾಗ್ಮಿ (Oratory) ಗಳಾಗುತ್ತಾರೆ. ಸಮತೋಲಿತ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಾರೆ.
ಧನು ರಾಶಿ (Sagittarius)
ಇವರು ತುಂಬಾ ಆಶಾವಾದಿ (optimist) ಮತ್ತು ಸಾಹಸಮಯ ಮನೋಭಾವ ಹೊಂದಿದ್ದಾರೆ. ಜೀವನದ ಬಗ್ಗೆ ಉತ್ಸಾಹ ಮತ್ತು ಹೊಸ ಅನುಭವ (experience) ಹುಡುಕಲು ಪ್ರಯತ್ನ ಮಾಡುತ್ತಾರೆ. ತಮ್ಮನ್ನು ಮತ್ತು ಇತರರಿಗೆ ಉತ್ತಮವಾದದ್ದನ್ನು ಹುಡುಕಲು ಬಯಸುತ್ತಾರೆ. ವೈಯಕ್ತಿಕ (Personal) ಬೆಳವಣಿಗೆಯ ಅವರ ಮುಖ್ಯ ಉದ್ದೇಶವಾಗಿದ್ದು, ಇತರರನ್ನು ಬೆಳೆಸಲು ಕೂಡ ಪ್ರಯತ್ನ ಮಾಡುತ್ತಾರೆ.
ಕುಂಭ ರಾಶಿ (Aquarius)
ಇವರು ಸಾಮಾಜಿಕ ನ್ಯಾಯದ ಬದ್ಧತೆ ಹೊಂದಿರುವ ವ್ಯಕ್ತಿಗಳು. ಒಳ್ಳೆಯ ಉದ್ದೇಶಗಳಿಂದ ಇವರು ಅತ್ಯಂತ ಆದರ್ಶವಾದಿ (Idealist) ವ್ಯಕ್ತಿಯಾಗಿ ಬೆಳೆಯುತ್ತಾರೆ. ಜಗತ್ತಿನ ಮೇಲೆ ಒಳ್ಳೆಯ ಪರಿಣಾಮ ಬೀರಲು ಬಯಸುತ್ತಾರೆ. ಹಾಗೂ ತಮ್ಮ ಉದ್ದೇಶದಿಂದ ಬದಲಾವಣೆ ತರಲು ಶ್ರಮಿಸುತ್ತಾರೆ. ಅವರ ಉದ್ದೇಶ (purpose) ಗಳು ಸಾಮಾನ್ಯವಾಗಿ ಇತರರ ಜೀವನವನ್ನು ಸುಧಾರಿಸಲು ಮತ್ತು ಉತ್ತಮ ಸಮಾಜ ರಚಿಸಲಿವೆ.
ಮೀನ ರಾಶಿ (Pisces)
ಇವರು ತುಂಬಾ ಸಹಾನುಭೂತಿ, ನಿಸ್ವಾರ್ಥ (Selfless) ಮತ್ತು ಹೆಚ್ಚು ಅರ್ಥ ಗರ್ಭಿತ ವ್ಯಕ್ತಿಗಳು. ಇತರರಿಗೆ ಸಹಾಯ ಮಾಡಲು ಹಂಬಲಿಸುತ್ತಾರೆ. ಇತರರ ಭಾವನೆ (feeling) ಗಳಿಗೆ ಬೆಲೆ ನೀಡುತ್ತಾರೆ. ನಂಬಲಾಗದಷ್ಟು ಬೆಂಬಲ ಮತ್ತು ತಿಳುವಳಿಕೆ ಇವರಲ್ಲಿ ಇದೆ.
ಕುತಂತ್ರ ರಾಶಿಗಳು ಯಾವುವು?
ಮೇಷ, ವೃಷಭ (Taurus), ಸಿಂಹ, ಕನ್ಯಾರಾಶಿ, ವೃಶ್ಚಿಕ (Scorpio) ಮತ್ತು ಮಕರ ರಾಶಿಯವರು ಜನರ ಬಗ್ಗೆ ಕೆಟ್ಟದ್ದನ್ನು ಯೋಚಿಸುತ್ತಾರೆ. ಅವರು ದುಷ್ಟ ಮತ್ತು ಕುತಂತ್ರಿಗಳು ಮತ್ತು ಯಾರಾದರೂ ಕೆಲಸದಲ್ಲಿ ತಮಗಿಂತ ಉತ್ತಮವಾದಾಗ ಅದನ್ನು ದ್ವೇಷಿಸುತ್ತಾರೆ.