Zodiac Sign: ಮುಖ ನೋಡಿಯೇ ನಿಮ್ಮ ಮನಸ್ಸನ್ನು ಓದೋ ಜನ ಇವ್ರು

Published : Jun 26, 2023, 05:46 PM IST
Zodiac Sign: ಮುಖ ನೋಡಿಯೇ ನಿಮ್ಮ ಮನಸ್ಸನ್ನು ಓದೋ ಜನ ಇವ್ರು

ಸಾರಾಂಶ

ನಮ್ಮ ಭಾವನೆಗಳೇ ನಮಗೆ ಎಷ್ಟೋ ಬಾರಿ ಸ್ಪಷ್ಟವಾಗಿರುವುದಿಲ್ಲ. ಅಂಥದ್ದರಲ್ಲಿ ಇನ್ನೊಬ್ಬರ ಬಗ್ಗೆ ಅರಿತುಕೊಳ್ಳುವುದು ಸುಲಭವಲ್ಲ. ಆದರೆ, ಕೆಲವು ರಾಶಿಗಳ ಜನರು ಇದರಲ್ಲಿ ಸಾಕಷ್ಟು ಅಂತಃಪ್ರಜ್ಞೆ ಹೊಂದಿರುತ್ತಾರೆ. ಇತರರ ಭಾವನೆಗಳನ್ನು ಅವರು ಮುಖ ನೋಡಿ, ಮಾತಿನ ಧಾಟಿಯಲ್ಲೇ ಅರಿತುಕೊಂಡುಬಿಡುತ್ತಾರೆ.  

ಕೆಲ ಸ್ನೇಹಿತರಿರುತ್ತಾರೆ, ನೀವು ಬಾಯಿಬಿಟ್ಟು ಏನನ್ನು ಹೇಳದಿದ್ದರೂ ನಿಮ್ಮ ಭಾವನೆಗಳ ತೀವ್ರತೆಯನ್ನು ಅರಿತುಕೊಳ್ಳುತ್ತಾರೆ. ನಮ್ಮ ಮಕ್ಕಳು, ಸಂಗಾತಿ, ಸಹೋದರ-ಸಹೋದರಿಯರು ಯಾರಾದರೂ ಹೀಗೆಯೇ ಇದ್ದಿರಬಹುದು. ಮಕ್ಕಳಿಗಂತೂ ಪಾಲಕರ ಮುಖ ನೋಡಿಯೇ ಅವರು ಯಾವ ಮೂಡಿನಲ್ಲಿದ್ದಾರೆ ಎಂದು ಅರಿಯುವ ಜಾಣ್ಮೆ ಸಿದ್ಧಿಸಿರುತ್ತದೆ. ಆದರೆ, ಕೆಲವು ಮಕ್ಕಳು ಇದರಲ್ಲಿ ಇನ್ನಷ್ಟು ಆಳವಾದ ಅರಿವು ಹೊಂದಿರುತ್ತಾರೆ. ಅವರು ಮಾತಿನ ಧಾಟಿ, ಮುಖದ ಭಾವನೆಗಳನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸುತ್ತಾರೆ. ನಿಮ್ಮಲ್ಲಾಗುವ ಸಣ್ಣ ಪುಟ್ಟ ಬದಲಾವಣೆಯನ್ನೂ ಗ್ರಹಿಸುತ್ತಾರೆ. ಯಾವ ಮೂಡಿನಲ್ಲಿದ್ದೀರಿ ಎನ್ನುವುದನ್ನು ಬಹಳ ಬೇಗ ತಿಳಿಯುತ್ತಾರೆ. ನಮ್ಮ ಬಗ್ಗೆಯೇ ನಮಗೆ ಅಷ್ಟು ಸ್ಪಷ್ಟತೆ ದೊರಕಿರುತ್ತದೆಯೋ ಇಲ್ಲವೋ, ಅವರು ಅದನ್ನು ಪಕ್ಕಾ ಅರಿಯುತ್ತಾರೆ. ಈ ಗುಣ ಬೇಕೆಂದೇ ಬೆಳೆಸಿಕೊಳ್ಳುವುದು ಸಾಧ್ಯವಿಲ್ಲ. ಕೆಲವು ರಾಶಿಗಳ ಜನರಲ್ಲಿ ಜನ್ಮಜಾತವಾಗಿ ಈ ಗುಣ ಬಂದಿರುತ್ತದೆ. ಇವರು ನಿಮ್ಮ ತಂದೆ-ತಾಯಿ, ಒಡಹುಟ್ಟಿದವರು, ಮಕ್ಕಳು ಯಾರೂ ಆಗಿರಬಹುದು. ಇಂಥವರು ನಿಮ್ಮ ಜತೆಗಿದ್ದರೆ ಹುಷಾರು, ಇವರಿಂದ ನಿಮ್ಮ ಭಾವನೆಗಳನ್ನು ಅಡಗಿಸುವುದು ಸಾಧ್ಯವಿಲ್ಲ. ತಕ್ಷಣವೇ ನಿಮ್ಮಲ್ಲಾಗುವ ಬದಲಾವಣೆಯನ್ನು ಗ್ರಹಿಸುವ ಚಾಣಾಕ್ಷತೆ ಹೊಂದಿರುತ್ತಾರೆ. 

•    ಕರ್ಕಾಟಕ (Cancer)
ಜಲತತ್ವದ ಕರ್ಕಾಟಕ ರಾಶಿಯ ಜನ ಅತ್ಯಂತ ಸೂಕ್ಷ್ಮ (Sensitive) ಪ್ರಜ್ಞೆಯುಳ್ಳವರು. ಭಾವನೆಗಳೊಂದಿಗೆ ಗುರುತಿಸಿಕೊಂಡಿರುವ ಚಂದ್ರನಿಂದ ಆಳಲ್ಪಡುತ್ತಾರೆ. ಹೀಗಾಗಿ, ಭಾವನಾತ್ಮಕ ಬುದ್ಧಿವಂತಿಕೆ (Emotional Intelligence) ಇವರಲ್ಲಿ ಅಪಾರವಾಗಿರುತ್ತದೆ. ಅಂತಃಪ್ರಜ್ಞೆಯಿಂದ ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ, ಇವರಲ್ಲಿ ಕೇಳಿಸಿಕೊಳ್ಳುವ ಗುಣ ಮತ್ತು ತಾಳ್ಮೆ ಸಾಕಷ್ಟಿರುತ್ತದೆ. ಎಲ್ಲರ ಬಗೆಗೂ ಸಹಾನುಭೂತಿ (Kind) ಹೊಂದಿರುತ್ತಾರೆ. ಯಾರ ಮೂಡು (Mood) ಹೇಗಿದೆ, ಯಾರಲ್ಲಿ ಮನಸ್ಥಿತಿ (Mentality) ಕೆಟ್ಟಿದೆ ಎನ್ನುವುದನ್ನು ಇವರು ಚೆನ್ನಾಗಿ ಅರಿಯುತ್ತಾರೆ. ಮುಖದ ಮೇಲೆ ದೊಡ್ಡ ನಗುವನ್ನು ಹೊತ್ತಿದ್ದರೂ ಇವರು ಎಲ್ಲರ ಅಂತರಾಳವನ್ನು ಗುರುತಿಸುತ್ತಾರೆ. 

ಜುಲೈ ತಿಂಗಳಲ್ಲಿ ಈ ರಾಶಿಗಳಿಗೆ ತುಂಬಾ ಸಮಸ್ಯೆ … ಎಚ್ಚರಿಕೆಯಿಂದಿರಿ

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಅಂತಃಪ್ರಜ್ಞೆಯುಳ್ಳವರು. ಇತರರು ಬಾಯಿಬಿಟ್ಟು ಹೇಳದಿದ್ದರೂ ಅವರ ನಾಡಿಯನ್ನು ಹಿಡಿಯಬಲ್ಲ ಭಾವನಾತ್ಮಕ ಚುರುಕು ಇವರದ್ದು. ಇವರೊಂದಿಗೆ ಇರುವುದು ಭಾರೀ ಕಂಫರ್ಟ್ (Comfort) ಅನುಭವ ನೀಡುವಂಥದ್ದು. ಸೂಕ್ಷ್ಮವಾಗಿ ಗಮನಿಸುವ ಗುಣವೂ ಇರುವುದರಿಂದ ಬಹುಬೇಗ ಸಂದರ್ಭಗಳನ್ನು ಅರಿತುಕೊಳ್ಳುತ್ತಾರೆ. ಇದನ್ನು ತೋರ್ಪಡಿಸಿಕೊಳ್ಳದಿದ್ದರೂ ತಮ್ಮ ಸುತ್ತ ಇರುವ ಜನರ ಎನರ್ಜಿ (Energy) ಮಟ್ಟವನ್ನು ಗ್ರಹಿಸುತ್ತಾರೆ.

•    ಕುಂಭ (Aquarius)
ಭಾವನಾತ್ಮಕ ಬುದ್ಧಿವಂತಿಕೆ ಅಲ್ಲದಿದ್ದರೂ ಜನರನ್ನು ವಿಶಿಷ್ಟವಾಗಿ ತಮ್ಮದೇ ವಿಧಾನದಲ್ಲಿ ಅರ್ಥೈಸಿಕೊಳ್ಳುವ ಜಾಣತನ (Intelligence) ಇವರಲ್ಲಿ ಕಂಡುಬರುತ್ತದೆ. ಯುರೇನಸ್ ಗ್ರಹದಿಂದ ಆಳಲ್ಪಡುವ ಕುಂಭ ರಾಶಿ ಅನ್ವೇಷಣೆ (Innovation) ಮತ್ತು ಕ್ರಾಂತಿಕಾರಕ ವಿಚಾರಗಳಿಗೆ ಹೆಸರುವಾಸಿ. ಎಲ್ಲರಿಗಿಂತ ವಿಭಿನ್ನವಾದ ಕಾರ್ಯಶೈಲಿ ಹೊಂದಿದ್ದು, ತಾಜಾ ದೃಷ್ಟಿಕೋನ ಹೊಂದಿರುತ್ತಾರೆ. ಇಂಥವರು ನಿಮ್ಮ ಸಮೀಪವರ್ತಿಯಾಗಿದ್ದರೆ ನೀವು ಬಾಯಿಬಿಟ್ಟು ಹೇಳದೆಯೂ ನಿಮ್ಮ ಭಾವನೆ (Feelings) ಅರಿತುಕೊಂಡು ಪ್ರಶ್ನಿಸುತ್ತಾರೆ. ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಬೇಕಾಬಿಟ್ಟಿ ಸಲಹೆ ನೀಡುವುದಿಲ್ಲ. 

'ಈ ರಾಶಿ'ಯವರಿಗೆ ಹೆಂಡತಿ ಎಂದರೆ ಪಂಚಪ್ರಾಣ..!

•    ಮಿಥುನ (Gemini)
ಚುರುಕು ಬುದ್ಧಿ ಹೊಂದಿರುವ ಮಿಥುನ ರಾಶಿಯ ಜನ ಬಹುಬೇಗ ಹೊಸತನಕ್ಕೆ (Adoption) ಹೊಂದಿಕೊಳ್ಳುತ್ತಾರೆ. ಇತರರ ಮನಸ್ಸನ್ನು ಓದುವ (Read) ಶಕ್ತಿ ಇವರಿಗಿದೆ. ಬುಧ ಗ್ರಹದಿಂದ ಆಳಲ್ಪಡುವ ಈ ರಾಶಿ ಸಂವಹನಕ್ಕೆ, ದೇಹಭಾಷೆಯನ್ನು (Body Language) ಚೆನ್ನಾಗಿ ಗ್ರಹಿಸುವುದಕ್ಕೆ ಹೆಸರು. ಧ್ವನಿಯ (Tone) ಏರಿಳಿತವನ್ನು ಸಹ ಅತ್ಯಂತ ನಿಖರವಾಗಿ ಅಳೆಯಬಲ್ಲರು. ಸಾಮಾಜಿಕ ವಾತಾವರಣದಲ್ಲಿ ಇವರು ಬಹಳ ಚೆನ್ನಾಗಿ ನಿಭಾಯಿಸಬಲ್ಲರು. ಏಕೆಂದರೆ, ಒಂದು ಶಬ್ದವನ್ನು ಹೇಳದೆಯೂ ಇವರು ಇನ್ನೊಬ್ಬರ ಭಾವನೆಗಳನ್ನು ಅರಿತುಕೊಳ್ಳುತ್ತಾರೆ. ಯಾರಾದರೂ ಕಂಫರ್ಟ್ ಆಗಿಲ್ಲದಿರುವಾಗ ಅವರನ್ನು ಕಂಫರ್ಟ್ ವಲಯಕ್ಕೆ ತರಲು ಯತ್ನಿಸುತ್ತಾರೆ. 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ