ಅಬ್ಬಾ, ಎಷ್ಟು ಸುಳ್ಳು ಹೇಳ್ತಾರಪ್ಪ ಅಂತೆನಿಸಿದರೆ ಅವರು ಈ ರಾಶಿಯವರೇ ಎಂದರ್ಥ!

By Suvarna NewsFirst Published Sep 27, 2022, 4:17 PM IST
Highlights

ಕೆಲವರು ಸತ್ಯವನ್ನೇ ಮರೆ ಮಾಚುವಂತೆ ಸುಳ್ಳು ಹೇಳುತ್ತಾರೆ. ಕೂತರೂ ಸುಳ್ಳು, ನಿಂತರೂ ಸುಳ್ಳು. ಕೆಲವರು ಸತ್ಯ ಹೇಳ್ತಿದ್ದಾರೆ ಅನ್ಸುತ್ತೆ. ಆದರೆ, ಮತ್ತೆ ಕೆಲವರು ಹೇಳುವುದು ಸುಳ್ಳು ಅಂತ ಗೊತ್ತಾಗಿ ಬಿಡುತ್ತೆ. ಸುಳ್ಳು ಹೇಳುವುದು ಇವರ ಜಾಯಮಾನ. ಅಂಥವರು ಪ್ರತಿಯೊಬ್ಬರ ಸುತ್ತವೂ ಇರುತ್ತಾರೆ. ಅವರು ಗ್ಯಾರಂಟಿ ಈ ರಾಶಿಗಳಲ್ಲಿ ಒಬ್ಬರು. ಅಷ್ಟಕ್ಕೂ ಯಾವ ರಾಶಿಯವರು, ಯಾವ ರೀತಿಯ ಸುಳ್ಳು ಹೆಚ್ಚು ಹೇಳುತ್ತಾರೆ? 

ಮನುಷ್ಯ ಎಂದ ಮೇಲೆ ಎಲ್ಲರೂ ಸತ್ಯ ಹರಿಶ್ಛಂದ್ರನ ವಂಶಸ್ಥರೇ ಆಗಿರೋಲ್ಲ ಬೇಡ. ಪೂರ್ತಿ ಸುಳ್ಳು ಹೇಳದಿದ್ದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳುವ ಟೋನ್ ಆದರೂ ಬದಲಾಯಿಸಿ, ಸತ್ಯ ಎನಿಸುವಂತೆಯೇ ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಏನೋ ಮಾಡಿದ ತಪ್ಪನ್ನು ಮರೆ ಮಾಚಲು ಅಥವಾ ಸೋಮಾರಿತನವನ್ನು ಮುಚ್ಚಿಡಲು ಸುಳ್ಳು ಹೇಳುವವರಿದ್ದಾರೆ. ಒಟ್ಟಿನಲ್ಲಿ ಸಮಯ, ಸಂದರ್ಭ ನೋಡಿ ಸುಳ್ಳು ಹೇಳುತ್ತಲೇ ಇರುತ್ತಾರೆ. ಅದೊಂದು ಕಲೆಯೂ ಹೌದು. ಆದರೆ, ಎಲ್ಲರಿಗೂ ಈ ಕಲೆ ರೂಢಿಗತವಾಗಿರೋಲ್ಲ. ಬೇಗ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ಮೂರು ರಾಶಿಯವರಿಗೆ ಮಾತ್ರ ಸುಳ್ಳು ಹೇಳುವುದು ಜನ್ಮಜಾತವಾಗಿ ಬಂದ ಗುಣ. ಎದುರಿಗೆ ಇರುವವರಿಗೆ ಕೊಂಚವೂ ಸುಳಿವು ಹತ್ತದಂತೆ ಸುಳ್ಳು ಹೇಳುತ್ತಾರೆ. ಅದನ್ನು ದಕ್ಕಿಸಿಕೊಳ್ತಾರೆ ಕೂಡ.

ಮಿಥುನ
ಸಾಮಾನ್ಯವಾಗಿ ಎಲ್ಲರಿಗೂ ಎರಡು ಮುಖಗಳಿರುತ್ತದೆ. ಆದ ಈ ರಾಶಿಯವರಿಗೆ ಈ ಗುಣ ಹೆಚ್ಚು. ಮಿಥುನ ಎಂಬ ಪದವೇ ಹೇಳುವಂತೆ ಇವರಿಗೆ ಎರಡು ಮುಖಗಳಲ್ಲ. ಎರಡು ಬಗೆಯ ಮುಖಗಳು. ಒಂದರಿಂದ ಇನ್ನೊಂದಕ್ಕೆ ಬಲು ಬೇಗ ಶಿಫ್ಟ್ ಆಗುತ್ತಾರೆ. ಇವರ ಬಳಿ ವ್ಯವಹಾರ ಮಾಡುವವರು ಎಷ್ಟು ಹುಷಾರಾಗಿದ್ದರೂ ಸಾಲದು. ಕಣ್ಣು ಮಿಟುಕಿಸುವಷ್ಟರಲ್ಲಿ ತಮ್ಮ ಕತೆಯನ್ನು ಬದಲಾಯಿಸುತ್ತಾರೆ. ಸುಳ್ಳು ಹೇಳುತ್ತಾ ಸಿಕ್ಕಿ ಬೀಳೋದು ಹೆಚ್ಚು. ತಕ್ಷಣವೇ ಅದನ್ನು ಮೇಕಪ್ ಮಾಡುವ, ಅದರ ತಲೆ ಮೇಲೆ ಹೊಡೆದಂತೆ ಇನ್ನೊಂದು ಸುಳ್ಳೂ ಹೇಳುತ್ತಾರೆ. 

ತಾವೂ ನಕ್ಕು, ಎಲ್ಲರನ್ನೂ ನಗಿಸಿಕೊಂಡಿರುವ ರಾಶಿ ಚಕ್ರಗಳಿವು!

ತುಲಾ
ಮಹಾ ಚತುರರು ಎನ್ನುತ್ತಾರಲ್ಲ ಆ ಗುಂಪಿಗೆ ಸೇರಿದವರು ಇವರು. ಇವರ ಬಳಿ ರೆಗ್ಯುಲರ್ ಆಗಿ ವ್ಯವಹಾರ ಮಾಡೋರಿಗೆ ಇವರ ವ್ಯಕ್ತಿತ್ವ (Personality) ಚೆನ್ನಾಗಿ ಪರಿಚಯವಾಗಿರುತ್ತದೆ. ಲೋಕ ಲೋಕಾಂತರದ ಕತೆಗಳನ್ನೆಲ್ಲ ತಮ್ಮೆದುರೇ ನಡೆದಂತೆ ಹೆಣೆಯಬಲ್ಲರು. ಅಷ್ಟೇ ಅಲ್ಲ, ತಮ್ಮನ್ನು ತಾವೇ ತಾನೇ ಇಂದ್ರ, ಚಂದ್ರ ಅಂತ ಹೇಳಲೂ ಹಿಂದು ಮುಂದು ನೋಡೋಲ್ಲ. ಎಂಥವರಾದರೂ ಇವೆಲ್ಲವೂ ನಿಜವೆಂದೆ ನಂಬಿ ಬಿಡುತ್ತಾರೆ. ಗಾಳಿಯಿಂದಲೇ ಚಕ್ಕನೆ ಒಂದು, ಕತೆ ಸೃಷ್ಟಿಸಬಲ್ಲರು. ಹೀಗಾಗಿ ಇವರು ತುಂಬಾ ಸೃಜನಶೀಲರೂ (Creative) ಹೌದು. ಸಾಹಿತ್ಯ, ನಾಟಕ (Theatre) ಇತ್ಯಾದಿ ಕಲೆಗಳಲ್ಲಿ ಇವರಿಗಿರುವ ಸೃಜನಶೀಲತೆ ಸಾಕಷ್ಟು ನೆರವಿಗೆ ಬರುತ್ತದೆ. ಆದರೆ ಪೂರ್ತಿ ನಂಬಲು ಆಗೋಲ್ಲ ಬಿಡಿ. 

ಮೀನ
ಅತೀವ ಭಾವನಾ ಜೀವಿಗಳು. ಅಂದ್ರೆ ತಮ್ಮ ಜೊತೆಯಲ್ಲಿ ಇರೋರನ್ನು ತಮ್ಮ ಭಾವನಾ (Emotional) ಪ್ರವಾಹದಲ್ಲಿ ಮಿಂದೇಳುವಂತೆ ಮಾಡಬಲ್ಲರು. ಇದು ಭಯಂಕರ ಡೇಂಜರಸ್. ಕೆಲವೊಮ್ಮೆ ತಮ್ಮ ತಪ್ಪು ಮುಚ್ಚಿಹಾಕಲು, ಭಾವನಾತ್ಮಕವಾದ ಒಂದು ಕತೆ ಕಟ್ಟಿಯೇ ಬಿಡುತ್ತಾರೆ. ಮರುಳಾಗುವುದು ಯಾರು ಕೇಳುತ್ತಾರೋ ಅವರು. ಎಷ್ಟರ ಮಟ್ಟಿಗೆ ಅವರ ಸುಳ್ಳು ಕಥೆ ಪ್ರಭಾವ ಬೀರುತ್ತೆ ಎಂದ್ರೆ, ಇವರಿಗಾಗಿ ಎಂಥ ಹೋರಾಟಕ್ಕೂ ರೆಡಿಯಾಗಬಲ್ಲರು. ಕತೆ ಕಟ್ಟಿದವರು ಉದ್ಧಾರವಾಗುತ್ತಾರೆ. ಕೇಳಿಸಿಕೊಂಡವರು ಕೆಟ್ಟವೆಂದೇ ಅರ್ಥ. ಮಾತು ಮತ್ತು ಭಾವನೆಗಳು ಇವರ ಮುಖ್ಯ ಅಸ್ತ್ರ. ಬ್ರೇನ್‌ವಾಶಿಂಗ್ (Brain Washing) ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಹಾಗಂತ ಕೆಟ್ಟವರೇನಲ್ಲ. ಸುಳ್ಳುಗಳು ಲೀಲಾಜಾಲವಾಗಿ ಗೊತ್ತಾಗದಂತೆ ಬಂದುಬಿಡುತ್ತವೆ.

Samudrik Shastra: ಹುಬ್ಬುಗಳ ಆಕಾರದಿಂದ ಗುಣ ಅರಿಯಬಹುದು, ಹೇಗೆ ಗೊತ್ತಾ?

ಜನ್ಮರಾಶಿಗೆ (Zodiac Signs) ತಕ್ಕಂತೆ ಸುಳ್ಳುಗಾರರನ್ನು ಅಂದಾಜು ಮಾಡಬಹುದು. ಸತ್ಯ ಹೇಳುವ ರಾಶಿಗಳೂ ಇವೆ. ಅವು ಯಾವವು? 

ಮೇಷ
ಇವರಿಗೆ ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೆ ತಮ್ಮ ಮುಖಭಾವದಿಂದಲೇ ಸಿಕ್ಕಿಬೀಳುತ್ತಾರೆ.

ಕಟಕ
ಒಳ್ಳೇಯ ಉದ್ದೇಶವಿಟ್ಟುಕೊಂಡು ಸುಳ್ಳು ಹೇಳುತ್ತಾರೆ ಇವರು. ಪ್ರೀತಿಪಾತ್ರರನ್ನು ರಕ್ಷಿಸುವ ಉದ್ದೇಶದಿಂದ ಸುಳ್ಳು ಹೇಳುತ್ತಾರೆ. ಒಳ್ಳೆಯ ಕೆಲಸಕ್ಕೆ ಇನ್ನೊಬ್ಬರ ಮನವೊಲಿಸಲೂ ಸುಳ್ಳು ಹೇಳುತ್ತಾರೆ ಇವರು. 

ಮಕರ
ನೋ. ಇವರಿಗೆ ಸುಳ್ಳು ಹೇಳಿ ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲ. 

ಕುಂಭ
ಅಬ್ಬಾ, ಇವರಿಗೆ ಸುಳ್ಳು (Lie) ಹೇಳುವುದು ಬಹಳ ಕಷ್ಟದ ವಿಷಯ. ಅಕಸ್ಮಾತ್ ಸುಳ್ಳು ಹೇಳಲು ಟ್ರೈ ಮಾಡಿದರೋ ದೇಹವೇ ಬೆವರಿ ಬಿಡುತ್ತದೆ. ಸುಳ್ಳು ಹೇಳುವುದು ಕುಂಬ ರಾಶಿಯವರಿಗೆ ಆಗಿ ಬರೋಲ್ಲ.

 

 

click me!