ದೇವಾಲಯಗಳ ನಗರಿ ಉಡುಪಿಯಲ್ಲಿ KSRTC ನವರಾತ್ರಿ ಟೂರ್ ಪ್ಯಾಕೇಜ್ ಎಂಜಾಯ್ ಮಾಡಿ

By Suvarna News  |  First Published Sep 27, 2022, 12:40 PM IST

ಉಡುಪಿಯ ಸುತ್ತಮುತ್ತಲಿನ 9 ದೇವಿ ದೇವಾಲಯಗಳ ದರ್ಶನಕ್ಕೆ ನವರಾತ್ರಿ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಅವಕಾಶ ಕಲ್ಪಿಸಿದೆ. 
 


ಉಡುಪಿಯನ್ನು ದೇವಾಲಯಗಳ ನಗರ ಎಂದು ಕರೆಯುತ್ತಾರೆ . ಜಿಲ್ಲೆಯ ಹೆಜ್ಜೆ ಹೆಜ್ಜೆಗೂ ಪ್ರಖ್ಯಾತ ದೇವಸ್ಥಾನಗಳಿದ್ದು ವರ್ಷಂಪ್ರತಿ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ . ಅದರಲ್ಲೂ ನವರಾತ್ರಿ ಬಂದಾಗ ಇಲ್ಲಿನ ದೇವಿಯ ಆಲಯಗಳನ್ನು ಸಂದರ್ಶಿಸಲು ಸಾಗರೋರೋಪಾದಿಯಲ್ಲಿ ಜನರು ಬರುತ್ತಾರೆ. ದೇವಿಯ ಆಲಯಗಳನ್ನು ಸಂದರ್ಶಿಸಲು ಬಯಸುವ ಭಕ್ತರಿಗೆ, ಕೆಎಸ್ಆರ್ಟಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿದೆ.

ಕ.ರಾ.ರ.ಸಾ.ನಿಗಮವು ಉಡುಪಿಯು ನಗರದ ಸುತ್ತಮುತ್ತಲಿನ 9 ದೇವಿಯ ದೇವಸ್ಥಾನಗಳನ್ನು ಸಂದರ್ಶಿಸಲು ಅವಕಾಶ ಕಲ್ಪಿಸಿದೆ. ಉಚ್ಚಿಲ ದಸರಾ ದರ್ಶನ ಪ್ಯಾಕೇಜ್ ಪ್ರವಾಸ ಎಂದು ಹೆಸರಿಸಲಾಗಿರುವ ಈ ಟೂರ್ ಪ್ಲಾನ್ ಸೆ.30 ರಿಂದ ಅ.4ರವರೆಗೆ ಹಮ್ಮಿಕೊಂಡಿದೆ.

Tap to resize

Latest Videos

ದರ್ಶನದ ಸ್ಥಳ ಹಾಗೂ ಪ್ರಯಾಣ ದರದ ವಿವರ ಈ ಕೆಳಗಿನಂತಿದೆ..
ಉಡುಪಿ ಸಿಟಿ ಬಸ್‌ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಟು, 8.45ಕ್ಕೆ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ, 9.30ಕ್ಕೆ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ, 10.15ಕ್ಕೆ ಅಂಬಲಪಾಡಿ ಶ್ರೀ ಮಹಾಕಾಳಿ ದೇವಸ್ಥಾನ, 11ಕ್ಕೆ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ.

Navratri 2022: ನವದುರ್ಗೆಯರ ದೇವಾಲಯಗಳು ಎಲ್ಲಿವೆ ಗೊತ್ತಾ?

ಮಧ್ಯಾಹ್ನ 12.15ಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 2.15ಕ್ಕೆ ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನ, 3ಕ್ಕೆ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, 4ಕ್ಕೆ ಕಾಪು ಶ್ರೀ ಮಾರಿಗುಡಿ ದೇವಸ್ಥಾನ ಹೋಗಿ  ಸಂಜೆ 5ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದರ್ಶನ‌ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಳಿಕ 6.30ಕ್ಕೆ ಉಡುಪಿಯ ಸಿಟಿ ಬಸ್ ನಿಲ್ದಾಣಕ್ಕೆ ಬಸ್ ವಾಪಾಸಾಗಲಿದೆ.

ಈ ಪ್ಯಾಕೇಜ್ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ (ಊಟ ಉಪಹಾರ ಹೊರತು ವಯಸ್ಕರಿಗೆ ರೂ. 300/- ಮಕ್ಕಳಿಗೆ (ವರ್ಷದಿಂದ 12 ವರ್ಷದವರಿಗೆ) ರೂ. 250/ ಇರಲಿದೆ.

ನವರಾತ್ರಿ ವೈಭವ: ಕುದ್ರೋಳಿ ಕಣ್ತುಂಬಿಕೊಳ್ಳಿ

ನವರಾತ್ರಿಯ ಸಂದರ್ಭದಲ್ಲಿ ಉಡುಪಿಯ ದೇವಿಯ ಆಲಯಗಳನ್ನು ಕಣ್ತುಂಬಿಕೊಳ್ಳಬೇಕೆಂಬುದು ಭಕ್ತರ ಆಸೆ ಆಗಿರುತ್ತೆ. ಒಂದೇ ದಿನದಲ್ಲಿ 9 ದೇವಾಲಯಗಳನ್ನು ಸಂದರ್ಶಿಸುವ ಈ ಸದವಕಾಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಿದ್ದು, ಕೇವಲ ಸ್ಥಳೀಯರು ಮಾತ್ರವಲ್ಲ ಹೊರ ಜಿಲ್ಲೆ ಮತ್ತು ರಾಜ್ಯಗಳ ಪ್ರವಾಸಿಗರು ಕೂಡ ಇದರ ಲಾಭ ಪಡೆಯಬಹುದಾಗಿದೆ.

click me!