ಅದೇನೋ ಕೆಲವರ ಮನೆ ಕಪಾಟಿನಲ್ಲಿ ಶೀಲ್ಡ್‌ಗಳು ತುಂಬಿ ತುಳುಕುತ್ತಿರುತ್ತವೆ. ಮತ್ತೆ ಕೆಲವರ ಮನೆಯಲ್ಲಿ ಒಂದೋ ಎರಡೋ ಬಹುಮಾನಗಳು ಧೂಳು ಹೊಡೆಸಿಕೊಂಡು ಕುಳಿತಿರುತ್ತವೆ. ಹೀಗೆ ಮನೆಯಲ್ಲಿ ಬಹುಮಾನಗಳು ತುಂಬಿರುವಂಥವರು, ಎಲ್ಲ ಸ್ಪರ್ಧೆಗಳಲ್ಲೂ ಗೆಲ್ಲುವವರು ಸಾಮಾನ್ಯವಾಗಿ ಈ 5 ರಾಶಿಗೆ ಸೇರಿರುತ್ತಾರೆ.
ಕೆಲವರಲ್ಲಿ ಚಿಕ್ಕಂದಿನಿಂದಲೇ ಸ್ಪರ್ಧಾತ್ಮಕ ಮನೋಭಾವ(competitive spirit)ವಿರುತ್ತದೆ. ಹೋದಲ್ಲೆಲ್ಲ ತಾವೇ ಗೆಲ್ಲಬೇಕು, ಎಲ್ಲೆಡೆ ಗುರುತಿಸಿಕೊಳ್ಳಬೇಕು ಎಂಬ ಹಂಬಲವಿರುತ್ತದೆ. ಆ ಮನೋಭಾವವೇ ಬಹು ಮಟ್ಟಿಗೆ ಅವರನ್ನು ಎಲ್ಲ ಸ್ಪರ್ಧೆಗಳಲ್ಲಿ ಗೆಲ್ಲಿಸುತ್ತಿರುತ್ತದೆ. ಅದರೊಂದಿಗೆ ಪ್ರತಿಭೆ, ಕೌಶಲ ಇದ್ದಾಗ ಕೇಳುವುದೇ ಬೇಡ.. ಎಲ್ಲ ಬಹುಮಾನಗಳು ಇವರ ಮನೆಯ ಶೋಕೇಸ್ ಸೇರುತ್ತಿರುತ್ತವೆ. ಇಂಥ ಬದ್ಧತೆ ಉಳ್ಳ, ಮಹತ್ವಾಕಾಂಕ್ಷೆಯ, ಸ್ಪರ್ಧಾತ್ಮಕ ಮನೋಭಾವದ, ಗುರಿಯೆಡೆ ಗಮನವಿರುವ ಗೆಲ್ಲುವ ಕುದುರೆಗಳು ಸಾಮಾನ್ಯವಾಗಿ ಯಾವ ರಾಶಿ(zodiac sign)ಗೆ ಸೇರಿರುತ್ತಾರೆ ಗೊತ್ತಾ?
ಸಿಂಹ(Leo)
ಸಿಂಹ ರಾಶಿಯವರಿಗೆ ತಮ್ಮ ಮೇಲೆ ಬಹಳ ವಿಶ್ವಾಸ. ಗುರಿ ಸಾಧಿಸಲೇಬೇಕೆಂಬ ಮನೋಭಾವ. ಇದಕ್ಕಾಗಿ ಎಷ್ಟು ಶ್ರಮ ಹಾಕಬೇಕೆಂಬುದು ಇವರಿಗೆ ತಿಳಿದಿರುತ್ತದೆ. ಜೊತೆಗೆ ತಮ್ಮ ನ್ಯೂನತೆಗಳ ಬಗ್ಗೆಯೂ ಚೆನ್ನಾಗಿ ತಿಳಿದಿರುತ್ತಾರೆ. ಇವರು ತಮ್ಮ ನ್ಯೂನತೆಗಳು ಕೆಲಸದ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ, ಬದಲಿಗೆ, ತಮ್ಮ ದೌರ್ಬಲ್ಯಗಳನ್ನು ಸರಿ ಪಡಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ ಮತ್ತು ಅವುಗಳಿಂದ ಬಲಶಾಲಿಯಾಗುತ್ತಾರೆ. ಜನರು ಗುರುತಿಸುವುದು, ಎಲ್ಲರ ಗಮನದ ಬಿಂದುವಾಗುವುದು ಇವರಿಗೆ ಇಷ್ಟ. ಹಾಗಾಗಿ ಇವರು ಸ್ಪರ್ಧೆಗಳಲ್ಲಿ ಗೆಲ್ಲಲೇಬೇಕೆಂಬ ಛಲ ಉಳ್ಳವರಾಗಿರುತ್ತಾರೆ.
ಮಕರ(Capricorn)
ಅವರೊಳಗೆ ಗೆಲುವಿನ ಛಲವಿದೆ. ಅವರು ಅತ್ಯಂತ ಸ್ಪರ್ಧಾತ್ಮಕ ಮನೋಭಾವದವರಾಗಿದ್ದಾರೆ. ತಮ್ಮ ಎದುರಾಳಿ ಸ್ಪರ್ಧಿಗಳ ಬಲವನ್ನು ಸದಾ ಅಳೆಯುತ್ತಲೇ ಇರುತ್ತಾರೆ. ಅವರನ್ನು ಮಣಿಸುವ ಮಾರ್ಗಗಳನ್ನು ಅರಿಯುತ್ತಾರೆ. ಹೆಚ್ಚಿನ ಬಾರಿ ಮಕರ ರಾಶಿಯವರು ಗೆಲ್ಲಲು ಹೆಚ್ಚು ಕಷ್ಟಪಡಬೇಕಿಲ್ಲ. ಅವರ ಶ್ರಮ, ದೃಢಸಂಕಲ್ಪ ಮತ್ತು ಪ್ರಕ್ಷುಬ್ಧತೆಯ ಫಲವಾಗಿ ಗೆಲುವು ಅವರತ್ತ ಹುಡುಕಿಕೊಂಡು ಬರುತ್ತದೆ. ಯಾರಾದರೂ ಅವಮಾನಿಸಿದರಂತೂ ಅದಕ್ಕೆ ಗೆದ್ದು ಉತ್ತರ ನೀಡುವ ಛಲ ಇವರದು.
ಕುಂಭ(Aquarius)
ಹೆಚ್ಚಿನವರು ಅವರನ್ನು ಅಂತರ್ಮುಖಿಗಳೆಂದು ವಿವರಿಸುತ್ತಾರೆ. ಆದರೆ ಅವರು ಮೌನದಲ್ಲಿ ಗದ್ದಲ ಮಾಡುತ್ತಾರೆ. ಅವರು ತಮ್ಮ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಹಳ ನಿರ್ದಿಷ್ಟವಾಗಿರುತ್ತಾರೆ. ತಮ್ಮ ಯಶಸ್ಸಿನ ಕಥೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಅವರು ವೈಯಕ್ತಿಕ ಬೆಳವಣಿಗೆಯಲ್ಲಿ ಬಹಳ ಉತ್ಸುಕರಾಗಿದ್ದಾರೆ ಮತ್ತು ತಮ್ಮ ಮೇಲೆ ಹೆಚ್ಚು ಗಮನ ಹರಿಸುತ್ತಾರೆ, ಇದು ಸ್ಪರ್ಧೆಗಳನ್ನು ಸುಲಭವಾಗಿ ಗೆಲ್ಲಲು ಇವರಿಗೆ ಅನುವು ಮಾಡಿಕೊಡುತ್ತದೆ.
ಪುರಾಣಗಳ ಈ 8 ಪಾತ್ರಗಳು ಇಂದಿಗೂ ಜೀವಂತವಾಗಿದ್ದಾರೆ!
ಮೇಷ(Aries)
ಅವರು ತೀವ್ರ ಪೈಪೋಟಿ ಸ್ವಭಾವದವರು. ಸರಿಯಾದ ಜನರ ಸಂಗ ಮಾಡುವಲ್ಲಿ, ಪ್ರಭಾವಿಗಳ ಸ್ನೇಹ ಸಾಧಿಸುವಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ತಮ್ಮ ಗುರಿಯ ಆಯ್ಕೆಗಳ ಬಗ್ಗೆಯೂ ಜಾಗರೂಕರಾಗಿರುತ್ತಾರೆ. ತಮ್ಮ ಆತ್ಮವಿಶ್ವಾಸದ ನಡವಳಿಕೆಯಿಂದ ಎಲ್ಲರ ಗಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಮತ್ತು ಇದೇ ಆತ್ಮವಿಶ್ವಾಸ, ಧೈರ್ಯ ಮತ್ತು ಪ್ರಭಾವದಿಂದ ಸ್ಪರ್ಧೆಗಳಲ್ಲಿ ಗೆಲ್ಲುತ್ತಾರೆ. ಚಿಕ್ಕಂದಿನಿಂದಲೇ ಗೆಲ್ಲುವ ಆಸೆ ತೋರಿಸುವ ಇವರಿಗೆ ಇದನ್ನು ನೋಡಿಯೇ ಪೋಷಕರು ಸಾಕಷ್ಟು ಪಠ್ಯೇತರ ಕೌಶಲಗಳ ತರಬೇತಿ ನೀಡಿಸುತ್ತಾರೆ.
ಈ ಐದು ರಾಶಿಗಳಿಗೆ ಹಳೆಯ ಪ್ರೇಮಿಯನ್ನು ಮರೆಯೋದು ಸುಲಭವಲ್ಲ!
ಧನು(Sagittarius)
ವಿನೋದ ಸ್ವಭಾವದ ಇವರು ಸ್ವಾಭಾವಿಕವಾಗಿಯೇ ಸಂತೋಷದಿಂದಿರುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ. ಅವರು ವೈಫಲ್ಯದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇದೇ ಅವರಿಗೆ ಪ್ರಶಂಸೆಗಳನ್ನು ಗಳಿಸಲು ಸಹಾಯ ಮಾಡುವ ಅತ್ಯಂತ ಸಕಾರಾತ್ಮಕ ಅಂಶವಾಗಿದೆ. ಇತರರು ಸಾಮಾನ್ಯವಾಗಿ ಅವರನ್ನು ಸ್ಪರ್ಧಾತ್ಮಕವೆಂದು ಪರಿಗಣಿಸುವುದಿಲ್ಲ, ಆದರೆ ಅವರು ಬಯಸಿದ ವಿಷಯಕ್ಕೆ ಬಂದಾಗ, ಅವರು ಏನೇ ಆಗಲಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು ಪ್ರಯತ್ನಿಸುತ್ತಾರೆ. ಹೀಗಾಗಿ ಗೆದ್ದೇ ತೀರುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.